deepavali in kannada , Deepavali information in kannada, About deepavali celebaration, ದೀಪಾವಳಿ ಹಬ್ಬದ ಬಗ್ಗೆ ಮಾಹಿತಿ, ದೀಪಾವಳಿ ಹಬ್ಬದ ಕುರಿತಾದ ಮಹತ್ವದ ಅಂಶಗಳು, ದೀಪಾವಳಿ
Deepavali in Kannada History 2022
ಕತ್ತಲಿನ ಹೋಗಲಾಡಿಸಿ ಮನೆ ಹಾಗೂ ಮನ ವನ್ನ ಬೆಳಗುವ ಹಬ್ಬವೇ ದೀಪಾವಳಿ.
ದೀಪಾವಳಿ ಹಬ್ಬದ ಆಚರಣೆಯ ಬಗ್ಗೆ ಮಾಹಿತಿ
ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಮನೆ ಮಂದಿಗೆಲ್ಲ ಸಂಭ್ರಮವೋ ಸಂಭ್ರಮ. ಆದರೆ ಹಿಂದೆ ನಡೆಯುತ್ತಿದ್ದ ದೀಪಾವಳಿ ಆಚರಣೆ ಗೂ ಈಗಿನ ಆಚರಣೆಗೂ ಸಾಕಷ್ಟು ವ್ಯತ್ಯಾಸವಿದೆ. ದಿನ ಕಳೆದಂತೆ ಹಬ್ಬ ತನ್ನ ಸಂಭ್ರಮ ವನ್ನ ಕಳೆದುಕೊಳ್ಳುತ್ತಿದೆ. ಈಗ ಬಹು ಪಾಲು ಜನರಿಗೆ ಹಬ್ಬಗಳೆಂದರೆ ಭರ್ಜರಿ ಭೋಜನ ಹಾಗು ಪಟಾಕಿಯ ಗತ್ತು ಮಾತ್ರ ಆಗಿದೆ. ಹೀಗಾಗ ಬಾರದು ಎಂಬ ಉದ್ದೇಶ ದೊಂದಿಗೆ ಇಂದು ನಾವು ದೀಪಾವಳಿ ಹಬ್ಬದ ವಿಶೇಷತೆ. ಮಹತ್ವವನ್ನ ತಿಳಿಸಿಕೊಡುತ್ತಿದ್ದೇವೆ.
Deepavali in Kannada History Karnataka
ಇದನ್ನು ಓದಿ :- ದೀಪಾವಳಿ ಹಬ್ಬದ ಪ್ರಬಂಧ 2022
ಆಗಸದ ತುಂಬಾ ಬೆಳಕಿನ ಚಿತ್ತಾರ ಎಲ್ಲಿ ನೋಡಿದ ರು ಧಾಂ ಧೂಂ ಶಬ್ದಗಳ ಆರ್ಭಟ್ಟ ಇದರ ಮಧ್ಯೆ ಪೂಜೆ ಪುನಸ್ಕಾರ ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಂದರ್ಭದಲ್ಲಿ ಈ ಹಬ್ಬ ಬರುವುದು ವಿಶೇಷ.
ಒಂದು ಕಡೆ ಅಶ್ವ ಯುಜ ಮಾಸದ ಕೊನೆಯ 2 ದಿನ ಗಳು ಹಾಗು ಕಾರ್ತಿಕ ಮಾಸದ ಮೊದಲನೇ ದಿನ ಈ ಹಬ್ಬ ವನ್ನ ಆಚರಿಸಿದರೆ ಇನ್ನು ಕೆಲ ಕಡೆ ಐದು ದಿನಗಳ ಕಾಲ ವಿಜೃಂಭಣೆ ಯಿಂದ ಈ ಹಬ್ಬ ವನ್ನು ಆಚರಿಸ ಲಾಗುತ್ತದೆ. ದೀಪಾವಳಿಯಲ್ಲಿ ಮೊದಲು ಬರೋದು ನೀರು ತುಂಬುವ ಹಬ್ಬ ಇದನ್ನ ಆಚರಿಸುವವರು ಸದ್ಯ ತೀರಾ ವಿರಳ ತ್ರಯೋದಶಿಯ ರಾತ್ರಿ ನೀರು ತುಂಬುವ ಹಬ್ಬ ವನ್ನ ಆಚರಿಸ ಲಾಗುತ್ತೆ. ಮನೆಯಲ್ಲಿ ಪಾತ್ರೆಗಳ ಲ್ಲಿ ನೀರನ್ನು ತುಂಬಿ ಇಡುವುದರಿಂದ ಶುದ್ಧತೆಯ ಪ್ರತೀಕ ವಾದ ಗಂಗಾ ದೇವಿ ಯನ್ನು.
Deepavali information in kannada
ಸಾಂಪ್ರದಾಯಿಕ ವಾಗಿ ಆಹ್ವಾನಿಸ ಲಾಗುತ್ತದೆ. ಮರುದಿನ ಅಂದ ರೆ ನರಕ ಚತುರ್ದಶಿಯ ದಿನ ಬೆಳ್ಳಂ ಬೆಳಿಗ್ಗೆ ಎಣ್ಣೆ, ಸ್ನಾನ, ಎಣ್ಣೆ ಸ್ನಾನ ಕ್ಕೆ ಹಿಂದಿನ ದಿನ ರಾತ್ರಿ ತುಂಬಿದ ನೀರ ನ್ನೇ ಬಳಸಿಕೊಳ್ಳುತ್ತಿದ್ದರು. ಮಕ್ಕಳಿಗೆ ತಾಯಿ ಗಂಡನಿಗೆ ಹೆಂಡತಿ ಎಣ್ಣೆ ಹಚ್ಚಿ ನೀರು ಯುವ ಸಂಪ್ರದಾಯ. ಅದರ ಲ್ಲೂ ಮದುವೆಯಾದ ಮೊದಲ ವರ್ಷ ಎಣ್ಣೆ ಸ್ನಾನ ಕ್ಕೆ ಎಲ್ಲಿಲ್ಲದ ಸಂಭ್ರಮ ಇನ್ನು ಸ್ನಾನದ ಉಪಯೋಗ ಗಳು ತೈಲ ಸ್ನಾನ ದಿಂದ ತ್ವಚೆಯ ತೇವಾಂಶ ವನ್ನು ಕಾಪಾಡ ಬಹುದು.
ಚಳಿಗಾಲ ಆರಂಭ ವಾಗಿರುವುದರಿಂದ ತ್ವಚೆಯ ರಕ್ಷಣೆ ಗೂ ಸಹಕಾರಿ. ಸಚಿವ ಕಾಂತಿ ಕೂಡ ಹೆಚ್ಚಾಗುವುದು ದೇಹದಲ್ಲಿ ರಕ್ತ ಸಂಚಲನ ಕ್ಕೆ ಸಹಕಾರಿ ಮಾನಸಿಕ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ನಿರಾಳತೆ ಸಿಗುವುದು ಸ್ನಾಯುಗಳು ಬಲ ವಾಗುತ್ತವೆ.
ಇದನ್ನು ಓದಿ :- ದೀಪಾವಳಿ ಹಬ್ಬದ ಇತಿಹಾಸ 2022
About deepavali celebaration
ನರಕ ಚತುರ್ದಶಿಯ ಇತಿಹಾಸ
ನರಕ ಚತುರ್ದಶಿಯ ಇತಿಹಾಸವನ್ನ ನೋಡೋ ದಾದ್ರೆ ಹಿಂದೂ ದಂತಕಥೆಯ ಪ್ರಕಾರ ಕೃಷ್ಣ ಪರಮಾತ್ಮ ಕಾಳಿದೇವಿ, ಸತ್ಯಭಾಮ ದೇವತೆಗಳು, ದುಷ್ಟ ನರಕಾಸುರನನ್ನು ಸೋಲಿಸಿ ವಿಜಯ ಸಾಧಿಸಿದರು ಎಂದು ಗುರುತಿಸಲಾಗಿತ್ತು.
ಮೂರುನೇ ದಿನ ದೀಪಾವಳಿಯಂದು ಲಕ್ಷ್ಮಿ ಪೂಜೆ ಯನ್ನು ಮಾಡಲಾಗುತ್ತೆ. ಲಕ್ಷ್ಮಿ ಕೇವಲ ಧನ ಲಕ್ಷ್ಮಿ ಮಾತ್ರವಲ್ಲ, ಸಕಲ ಶ್ರೇಯಸ್ಸು ಗಳಿಗೆ ಲಕ್ಷ್ಮೀ ಕಾರಣ ಎಂದು ಹೇಳುತ್ತಾರೆ. ಈ ಹಬ್ಬದಂದು ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಸೇರಿ ಒಬ್ಬರಿಗೊಬ್ಬರು ಸಿಹಿ ಹಂಚಿ ಉಡುಗೊರೆ ನೀಡುತ್ತಾರೆ.
ಪ್ರಸ್ತುತ ಬಹುತೇಕ ವರ್ತಕರು ತಮ್ಮ ತಮ್ಮ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಾರೆ. ಲಕ್ಷ್ಮಿ ಪೂಜೆಯ ಬಳಿಕ ಬಲಿಪಾಡ್ಯಮಿಯನ್ನು ಆಚರಿಸ ಲಾಗುತ್ತದೆ. ಆ ದಿನ ಬಲಿ ಚಕ್ರವರ್ತಿ ಭೂಲೋಕ ಸಂಚಾರ ಕ್ಕೆ ಬರುತ್ತಾನೆಂಬ ನಂಬಿಕೆಯೂ ಇದೆ.
ಬಲಿಪಾಡ್ಯಮಿ ಆಚರಣೆಯ ಬಗ್ಗೆ ಮಾಹಿತಿ
ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣು ಭಕ್ತ ದಾನ, ಶೂರ ದೈತ್ಯ ರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದು ಬಲಿಯಿಂದ ಮೂರು ಹೆಜ್ಜೆ ಊರು ವಷ್ಟು ಭೂಮಿಯನ್ನ ದಾನವಾಗಿ ಪಡೆಯುತ್ತಾನೆ. ಎರಡು ಹೆಜ್ಜೆ ಗಳಲ್ಲಿ ಆಕಾಶ ಭೂಮಿಯನ್ನು ಅಳೆದು ಕೊಂಡು ತ್ರಿವಿಕ್ರಮ ನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿ ಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ.
ಆಗ ಬಲಿಯ ಭಕ್ತಿಯನ್ನು ಮತ್ತು ದಾನ ಶೀಲ ಗುಣವನ್ನ ಮೆಚ್ಚಿದ ವಿಷ್ಣು ಪ್ರತಿವರ್ಷ 1 ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರನೀಡುತ್ತಾನೆ. ಆ ರೀತಿಯಾಗಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ.
ಗೋಪೂಜೆ ಆಚರಣೆಯ ಬಗ್ಗೆ ಮಾಹಿತಿ
ಗೋಪೂಜೆ ದೀಪಾವಳಿಯ ಇನ್ನೊಂದು ವಿಶೇಷ. ಈ ದಿನದಂದು ಗೋವುಗಳನ್ನು ಅಲಂಕರಿಸಿ ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನು ಪೂಜಿಸಿ ಗೋಶಾಲೆಯನ್ನ ದೀಪ ದಿಂದ ಬೆಳಗಿ ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ, ತಿನಿಸುಗಳನ್ನ ನೀಡುತ್ತಾರೆ.
ದೀಪಾವಳಿಯ ಐದನೇ ದಿನ
ದೀಪಾವಳಿಯ ಐದನೇ ದಿನದಂದು ಬಯದು ಹಬ್ಬವನ್ನ ಆಚರಿಸುತ್ತಾರೆ. ಈ ಹಬ್ಬ ಅಣ್ಣ ತಂಗಿಯರ ಹಬ್ಬವಾಗಿದ್ದು, ಇದನ್ನು ಮತ್ತೊಂದು ರಕ್ಷಾ ಬಂಧನ ಎಂದು ಸಹ ಕರೆಯ ಲಾಗುತ್ತದೆ.
ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ ದೀಪ, ಪ್ರಕಾಶತೆ, ಜ್ಞಾನದ ಸಂಕೇತ, ಅಜ್ಞಾನ ವೆಂಬ ಕತ್ತಲನ್ನು ಹೊಡೆದೋಡಿಸಲು, ಜ್ಞಾನವೆಂಬ ದೀಪ ಅತಿ ಅವಶ್ಯಕ. ಅಜ್ಞಾನದ ಕತ್ತಲನ್ನು ದೂರಮಾಡಿ ಜ್ಞಾನದ ಬೆಳಕುನ ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬರ ಮನದಲ್ಲೂ ಜ್ಞಾನವೆಂಬ ದೀಪ ವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ನಮ್ಮ ಆಶಯ.
ಇತರೆ ಹಬ್ಬಗಳ ಮಹತ್ವ ತಿಳಿಯಿರಿ
- ದೀಪಾವಳಿ ಹಬ್ಬದ ಹಿಂದಿರುವ ಪುರಾಣ ಕಥೆ
- ದೀಪಾವಳಿ ಹಬ್ಬದ ಶುಭಾಶಯಗಳು 2022
- ಗಣೇಶ ಹಬ್ಬದ ಮಹತ್ವ
- ಮೊಹರಂ ಹಬ್ಬದ ಮಹತ್ವ
- ವರಮಹಾಲಕ್ಷ್ಮಿ ಹಬ್ಬದ ಮಹತ್ವ
- ಹೋಳಿ ಹಬ್ಬದ ಮಹತ್ವ