ನಮ್ಮ ದೇಶ ಭಾರತ | Namma Desha Bharatha Essay in Kannada

ನಮ್ಮ ದೇಶ ಭಾರತ | Namma Desha Bharatha Essay in Kannada

Namma Desha Bharatha Essay in Kannada, My Country Essay in Kannada, ನನ್ನ ದೇಶದ ಪ್ರಬಂಧ nanna Desha essay in Kannada nanna Desha Prabandha in Kannada my country India essay, essay on my country in kannada

Namma Desha Bharatha Essay in Kannada

Spardhavani Telegram
Spardhavani.com

ನಮ್ಮ ದೇಶ ಭಾರತ . ನಾವಲ್ಲರೂ ಭಾರತೀಯರು . ನಮ್ಮ ದೇಶ ಭಾರತ ಸಂಪದ್ಭರಿತವಾಗಿದೆ . ಸುಸಂಸ್ಕೃ ದಲ್ಲಿ ನಮ್ಮ ದೇಶ ಬೃಹತ್ ರಾಷ್ಟ್ರವೆನಿಸಿದೆ . ಒಂದು ಇಡೀ ಖಂಡದಲ್ಲಿರಬಹುದಾದ ಎಲ್ಲ ಪ್ರಾಕೃತಿಕ ಮತ್ತು ಭೌಗೋಳಿಕ ಸಂಪತ್ತೆಲ್ಲವೂ ಭಾರತದಲ್ಲಿದೆ . ಆದ್ದರಿಂದ ಭಾರತವನ್ನು ಏಷ್ಯಾದ ಉಪಖಂಡ ಎಂದು ಕರೆಯುತ್ತಾರೆ . ಭಾರತದ ಉತ್ತರದ ಗಡಿಯಲ್ಲಿ ಜಗತ್ತಿನ ಅತೀ ಎತ್ತರದ ಶಿಖರವಾದ ಎವರೆಸ್ಟ್ ಇದೆ .

ವಿಷಯ ವಿವರಣೆ

ಭಾರತದ ವಿಸ್ತೀರ್ಣ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹಬ್ಬಿದೆ . ಭಾರತದಲ್ಲಿ ಹಲವು ಧರ್ಮದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ .

ಹಿಂದು , ಮುಸ್ಲಿಂ , ಕ್ರೈಸ್ತ , ಪಾರ್ಸಿ ಸಿಖ್ ಬೌದ್ಧ ಮತ್ತು ಜೈನ ಇಲ್ಲಿಯ ಪ್ರಮುಖ ಧರ್ಮಗಳು , ಎಲ್ಲ ಧರ್ಮದವರು ಪರಸ್ಪರ ಸಹೋದರರಂತೆ ಬದುಕುತ್ತಾರೆ . ಭಾರತದಲ್ಲಿ ಧರ್ಮ ವೈವಿಧ್ಯತೆ ಇರುವಂತೆ ಭಾಷಾ ವೈವಿಧ್ಯತೆಯೂ ಇದೆ ಉತ್ತರ ಭಾರತದ ಬಹು ಜನರು ಹಿಂದಿ ಭಾಷೆಯನ್ನು ಮಾತಾಡುವುದರಿಂದ ಹಿಂದಿಯನ್ನು ಭಾರತದ ಅಧಿಕೃತ ಸಂಪರ್ಕ ಭಾಷೆ , ರಾಷ್ಟ್ರಭಾಷೆ ಎಂದು ಕರೆಯುತ್ತಾರೆ .

ನಮ್ಮ ದೇಶ ಭಾರತ | Namma Desha Bharatha Essay in Kannada
ನಮ್ಮ ದೇಶ ಭಾರತ Essay in Kannada

ಭಾರತ ಸಂಸ್ಕೃತಿ ಪರಂಪರೆ ಉನ್ನತವಾದುದು . ಬಹಳ ಹಿಂದಿನಿಂದಲೂ ಭಾರತದ ಜಗತ್ತಿಗೆ ಮಾರ್ಗದರ್ಶಕವಾಗಿತ್ತು . ಭಾರತದ ಪ್ರಮುಖ ಭಾಷೆಗಳಾದ ಕನ್ನಡ , ತೆಲುಗು , ತಮಿಳು , ಮರಾಠಿ , ಮಲೆಯಾಳಂ , ಅಸ್ಸಾಮಿ , ಪಂಜಾಬಿ , ಬಂಗಾಳಿ , ಗುಜರಾತಿ , ಹಾಗೂ ಉರ್ದು ಈ ರೀತಿ ಹದಿನಾಲ್ಕು ಭಾಷೆಗಳನ್ನು ರಾಷ್ಟ್ರಭಾಷೆ ಅಂಗೀಕರಿಸಲಾಗಿದೆ .

ನಮ್ಮ ಸಂವಿಧಾನದಲ್ಲಿ ಎಂದು ಮಾತೃದೇವೋಭವ , ಪಿತೃದೇವೋಭಾ , ಆಚಾರ್ಯದೇವೋಭವ , ಅತಿಥಿದೇವೋಭವ ಎಂಬ ಉಪನಿಷತ್ತುಗಳ ವಾಕ್ಯಗಳು ಭಾರತೀಯ ಸಂಸ್ಕೃತಿಯ ಮೂಲ ಮಂತ್ರ . ಭಾರತ ವಿಶಾಲವಾದ ಕರಾವಳಿ ಪ್ರದೇಶವನ್ನು ಹೊಂದಿದೆ .

ಪಾಶ್ಚಾತ್ಯ ರಾಷ್ಟ್ರಗಳಿಗೆ ವಸ್ತುಗಳನ್ನು ರಫ್ತು ಮಾಡುವಲ್ಲಿ ಭಾರತ

ಪ್ರಮುಖ ಸಾಗರೋತ್ಪನ್ನಗಳಾದ ಮುತ್ತು , ಹವಳ , ಕಪ್ಪೆಚಿಪ್ಪು ಮಾತ್ರವಲ್ಲದೆ ಭಾರೀ ಪ್ರಮಾಣದ ಸೀಗಡಿ ಮೀನುಗಳನ್ನು ಜಪಾನ್ ಹಾಗೂ ಪ್ರಮುಖ ಪಾಶ್ಚಾತ್ಯ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ .

ಅಕ್ಕಿ , ರಾಗಿ , ಜೋಳ , ಗೋಧಿ ಇಲ್ಲಿಯ ಪ್ರಮುಖ ಆಹಾರ ಬೆಳೆಗಳು , ಕಬ್ಬು , ಹತ್ತಿ , ಟೀ ಹೊಗೆಸೊಪ್ಪು ( ತಂಬಾಕು ) ದ್ವಿದಳ ಧಾನ್ಯಗಳು ಇಲ್ಲಿಯ ಪ್ರಮುಖ ವಾಣಿಜ್ಯ ಬೆಳೆಗಳು , ಭಾರತ ತಂಗಿನಕಾಯಿ , ಅಡಿಕೆ , ಗೋಡಂಬಿಗಳನ್ನು ಹಲವು ಬಗೆಯ ಹಣ್ಣುಗಳನ್ನು ರಫ್ತು ಮಾಡುತ್ತದೆ .

ಚಿನ್ನ , ವಜ್ರಗಳಿಗೆ ಪ್ರಾಚೀನ ಕಾಲದಿಂದಲೂ ಭಾರತ ಜಗತ್ವಸಿದ್ಧ ವಾಗಿತ್ತು . ಜಗತ್ತಿನ ಅತ್ಯಂತ ಶ್ರೇಷ್ಠ ವಜ್ರವೆಂದೇ ಪರಿಗಣಿಸಲ್ಪಟ್ಟ ಕೊಹಿನೂರ್ ವಜ್ರ ದೊರೆತದ್ದು ಭಾರತದಲ್ಲೇ.

ಭಾರತದ ಪ್ರಾಕೃತಿಕ ಸಂಪತ್ತು

ಭಾರತದ ಪ್ರಾಕೃತಿಕ ಸಂಪತ್ತು ಮಹತ್ತರವಾದುದು . ಇಲ್ಲಿಯ ಬೃಹತ್ ಅರಣ್ಯಗಳು ಅಲ್ಲಿ ವಾಸಿಸುವ ವನ್ಯಮೃಗಗಳು ಭಾರತಕ್ಕೆ ಪ್ರಕೃತಿಯ ಕೊಡುಗೆಗಳು , ಗಂಗಾ , ಯಮುನಾ , ಕಾವೇರಿ , ಬ್ರಹ್ಮಪು , ಕೃಷ್ಣಾ ಮುಂತಾದ ನದಿಗಳು ಇಲ್ಲಿ ಕೃಷಿಕರ ಪಾಲಿನ ತಾಯಿ , ವೈಜ್ಞಾನಿಕವಾಗಿ ಸಹ ಭಾರತ ಬಹಳ ಸಾಧನೆಯನ್ನು ಮಾಡಿದೆ .

ಬಾಹ್ಯಾಕಾಶ ಶಾಂತಿಗಾಗ ಅಣುಶಕ್ತಿಯ ಸಂಶೋಧನೆಯಲ್ಲಿ ಪ್ರಮುಖ ಪಾತ್ರವಹಿಸುವ ಉಪಗ್ರಹಗಳ ಉಡಾವಣೆ , ಇನ್ನೂ ಹಲವು ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ಪಡೆದಿಂದೀಚೆಗೆ ಭಾರತದ ಸಾಧನೆ ಮೂಗಿನ ಮೇಲೆ ಬೆರಳಿಡುವಂತಹುದು

ಉಪಸಂಹಾರ

ನಮ್ಮ ದೇಶ ಭಾರತ , ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ನಮಗೆ ಬಹಳ ಸಂತೋಷವಾಗುತ್ತದೆ . ಜೈ ಭಾರತಮಾತೆ .

ಈ ಲೇಖನವನ್ನು ಸಹ ಓದಿ:

Leave a Reply

Your email address will not be published. Required fields are marked *