parisara malinya prabandha in kannada, parisara malinya samrakshana prabandha, parisara malinya kuritu prabandha in kannada, parisara malinya bhagya prabandha please, parisara malinya bhagya prabandha ,parisara malinya prabandha in kannada writing, parisara malinya bhagya prabandha kannadadalli, parisara malinya bagge prabandha in kannada
Parisara Malinya Prabandha
ನಾವೆಲ್ಲರೂ ನೆಲೆಸಿರುವುದು ಭೂಮಿಯ ಮೇಲೆ , ಆದರೆ ವ್ಯಾಪಿಸಿರುವುದು ದೂರದ ದಿಗಂತದವರೆಗೂ , ಎಷ್ಟಾದರೂ ಜೀವಕೋಟಿಗಳಲ್ಲೆಲ್ಲಾ ಮಾನವನೇ ಅತಿ ದೊಡ್ಡವನಲ್ಲವೇ ? ಅತಿ ಬುದ್ಧಿವಂತ ಅಲ್ಲವೆ ? ಅವನ ದೃಷ್ಟಿ ಪ್ರಪಂಚದ ನಾಲ್ಕೂ ಕಡೆ , ಅವನ ತಲೆಯ ಮೇಲೆ ನೀಲಿಯ ವರ್ಣದ ಆಕಾಶ , ಅವನ ಸುತ್ತಲೂ ಹಸಿರು ಹರಿಸುವ ಗಿಡಮರಗಳು , ಮಂಜು ಮುಸುಕಿರುವ ಎತ್ತರದ ಬೆಟ್ಟ ಗುಡ್ಡಗಳು , ಬುಳ ಬುಳನೆ ಹರಿಯುವ , ಕಿಲಕಿಲನೆ ನಗುವ ನದಿನಾಲೆಗಳು , ಹಲವಾರು ಅಂತಸ್ತುಗಳಿಂದ ಕೂಡಿರುವ , ಕಣ್ಣುಗಳನ್ನು ಕೋರೈಸುವ ಕಟ್ಟಡ ಗಳು , ಪಶು , ಪಕ್ಷಿಗಳು , ಹೀಗೆ ಮಾನವನಾದವನು ತನ್ನ ಸೂಕ್ಷ್ಮ ಹಾಗೂ ಚುರುಕು ಬುದ್ದಿಯಿಂದ ಮೇಲ್ಕಂಡ ಎಲ್ಲವನ್ನೂ ವೀಕ್ಷಿಸುವನು , ವಿಚಾರ ಮಾಡುವನು . ಪ್ರಪಂಚದಲ್ಲಿ ನಮ್ಮ ಕಣ್ಣು ಮುಂದೆ ಏನೇನು ಭೌಗೋಳಿಕ ದೃಶ್ಯಗಳು ಕಾಣುವುವೋ , ಇವೆಲ್ಲವನ್ನೂ ಒಟ್ಟಾರೆಯಾಗಿ ಪರಿಸರ ಎನ್ನಬಹುದು .
Parisara Malinya Prabandha In Kannada
ಪರಿಸರವನ್ನು ವಾತಾವರಣ ಅನ್ನುವರು . ವಾತಾಯನ ಅನ್ನುವರು . ದೇವರನ್ನು ನಾವು ವಿವಿಧ ಹೆಸರುಗಳಿಂದ ಕರೆಯುವಂತೆ ಪರಿಸರವನ್ನೂ ವಿವಿಧ ನಾಮಾವಳಿಯಿಂದ , ವಿವಿಧ ರೂಪದಲ್ಲಿ ಕರೆಯುವರು . ಅವುಗಳ ಬಗ್ಗೆ ಬಣ್ಣಿ ಸುವರು . ಈ “ ಪರಿಸರದಲ್ಲಿ ಕಂಡುಬರುವ ಪ್ರತಿ ದೃಶ್ಯವೂ ಮಾನವನಿಗೆ
ಹೊಸ ಮಾದರಿಯ ಪ್ರಬಂಧಗಳು ಅಂದರೆ ಗಾ ಮನಮೋಹಕ . ಮಾನವನ ಜೀವನೋಪಯೋಗಕ್ಕೆ ಅತಿ ಸಮೀಪ , ಮಾನವನು ಸುರಕ್ಷಿತವಾಗಿರಲು , ದೀರ್ಘಾಯು ಆಗಿರಲು ತನ್ನ ಆರೋಗ್ಯದ ಕಡೆ ಸಾಕಷ್ಟು ಗಮನ ಕೊಡುತ್ತಾನೆ . ಪರಿಸರದಲ್ಲಿಯೇ ಅವನೂ ಇರುವುದರಿಂದ ಪರಿಸರದ ಆರೋಗ್ಯದ ಕಡೆಗೂ ಅವನ ಗಮನ ಅನಿವಾರ , ಪರಿಸರ – ಸ್ವಾಸ್ಥ್ಯ ಆರೋಗ್ಯ ಹದಗೆಟ್ಟರೆ ಅವನ ಆರೋಗ್ಯವೂ ಹದಗೆಟ್ಟಂತೆಯೇ . ರೋಗ ರುಜಿನ ಗಳ ಬೀಸುಗಲ್ಲಿಗೆ ಸಿಕ್ಕಿ , ಹಿಟ್ಟಾಗಿ ಹೋಗುವನು . ಅಯ್ಯೋ ! ಇದೆಂತಹ ವಿಚಿತ್ರ ? ಎಂದು ಕಣ್ಣು ಬಿಡುತ್ತಿರುವಿರಾ ? ಬನ್ನಿ , ಈಗ ವಿವರವಾಗಿ ಈ ಬಗ್ಗೆ ತಿಳಿಯೋಣ .
ಮಾನವನಿಗೆ ಉಸಿರಾಟ ಅತಿಮುಖ್ಯ . ಅಷ್ಟೇ ಮುಖ್ಯವಾದುದು ಹೃದಯ ದಲ್ಲಿನ ರಕ್ತ ಪರಿಚಲನೆ , ಉಸಿರಾಡಲು ಆ ವಾಯು ಮಂಡಲದಲ್ಲಿರುವ ಆಮ್ಲ ಜನಕ ಅತಿಮುಖ್ಯ , ಆಮ್ಲಜನಕವನ್ನು ನಾವು ಸದಾಕಾಲವೂ ಸೇವಿಸುತ್ತಲೇ ಇರಬೇಕು . ಈ ಆಮ್ಲಜನಕವು ಹೃದಯದಲ್ಲಿ ಹರಿಯುವ ರಕ್ತದೊಂದಿಗೆ ಬೆರೆತು , ದೇಹದ ಅಡಿ ಮುಡಿಯವರೆಗೆ ಹರಿಯುವ ರಕ್ತ ಶುದ್ಧವಾಗಿರಲು ಸಹಾಯ ಮಾಡುತ್ತದೆ .
ಆದರೆ ನಮ್ಮ ಮನೆಗಳ ಒಳಗೂ ಹೊರಗೂ ಶುಚಿತ್ವದ ಬಗ್ಗೆ ನಾವು ಗಮನವನ್ನೇ ಇಂದಿಗೂ ಅಂದರೆ ಈಗಿನ ವಿಜ್ಞಾನಯುಗದಲ್ಲಿಯೂ ಗಮನವನ್ನೇ ಹರಿಸುತ್ತಿಲ್ಲ . ಮನೆಮುಂದೆಯೇ ಕೊಚ್ಚೆ , ಮನೆ ಮುಂದೆಯೇ ಕಸದ ರಾಶಿ . ಮನೆ ಹಿಂದೆಯೇ ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹಿತ್ತಿಲು.
ಇವುಗಳಿಂದ ದುರ್ವಾಸನೆ ಬರುತ್ತಿರುತ್ತದೆ . ಕೊಳೆಯುವ ಕಸದಲ್ಲಿ ಅತಿಸೂಕ್ಷ್ಮ ವಿಷಕ್ರಿಮಿಗಳು ಸ್ಟೇಚ್ಛೆಯಾಗಿ ಉತ್ಪತ್ತಿ ಆಗುತ್ತವೆ . ಗಾಳಿಯನ್ನು ಸೇವಿಸುವಾಗ ಅವೆಲ್ಲವೂ ನಮ್ಮ ಶ್ವಾಸನಾಳದ ಮೂಲಕ ದೇಹದೊಳಗೆ ಹೃದಯದಲ್ಲಿ ಸೇರುತ್ತವೆ . ರಕ್ತದಲ್ಲಿ ಬೆರೆಯುತ್ತವೆ . ಇಲ್ಲದ ಅನಾರೋಗ್ಯವನ್ನು ಉಚಿತವಾಗಿ ನಮಗೆ ನೀಡುತ್ತವೆ . ಗಾಳಿ ಅಶುದ್ಧ ಆಗುವುದರಿಂದ ತಾನೇ ಇಷ್ಟೆಲ್ಲಾ ಭೀಕರ ಅನಾಹುತ , ಇದನ್ನೇ ವಾಯು ಮಾಲಿನ್ಯ ಎನ್ನುವರು . ಈಗಂತೂ ಕಾರ್ಖಾನೆಗಳೂ , ಮಿಲ್ಲುಗಳೂ ಹೆಚ್ಚುತ್ತಿವೆ . ಇವು ನಗರಗಳಿಗೆ , ಗ್ರಾಮಗಳಿಗೆ ಅತಿಸಮೀಪದಲ್ಲಿಯೇ ಇರುತ್ತವೆ . ಇವುಗಳ ಕೊಳವೆಗಳಿಂದ ಹೊರಡುವ ಹೊಗೆ
ಗಾಳಿಯೊಂದಿಗೆ ಬೆರೆತು , ಅಂತಹ ಗಾಳಿಯ ಸೇವನೆಯಿಂದ ಮಾನವರಾದ ನಮ್ಮೆಲ್ಲರ ವಜ್ರದಂತಹ ಗಟ್ಟಿಯಾದ ದೇಹವನ್ನು ಇಲ್ಲ ಸಲ್ಲದ ರೋಗಗಳಿಂದ ಜರ್ಜರಿತಗೊಳಿಸಿ , ಚೆನ್ನಾಗಿ ಬೆಳೆಯುತ್ತಿರುವ ಮರದ ತೊಗಟೆಗೆ ಹುಳುಗಳು ಹಿಡಿಯುವಂತೆ ಮಾಡುತ್ತವೆ .
Parisara Malinya Prabandha In Kannada
ಇಷ್ಟೆಲ್ಲಾ ವಾಯುವಿನ ವಿಷಯ ಆಯಿತು , ಮಾನವನಿಗೆ ವಾಯುವಿನಷ್ಟೇ , ಜೀವದ ಉಳಿವಿಗೆ ನೀರೂ ಅಗತ್ಯ .ಊಟ ನಿಧಾನ ಆದರೂ ಅಂದರೆ ಹಸಿವನ್ನು ಹೇಗಾದರೂ ಮಾಡಿ , ಸ್ವಲ್ಪಕಾಲ ತಡೆಹಿಡಿಯಬಹುದು . ಆದರೆ ಬಾಯಾರಿಕೆ ಯನ್ನು ಹಾಗೆ ತಡೆ ಹಿಡಿಯಲಾಗದು , ಹಾಗೆಂದು ಕೊಳಕು ನೀರನ್ನು ಕುಡಿಯುವುದೂ ಒಳಿತಲ್ಲ . ಕುಡಿಯುವ ನೀರಿಗೆ ಮೂಲಾಧಾರಗಳು ಕೆರೆ ಕಟ್ಟೆ ಭಾವಿಗಳು . ಆದರೆ ಇವುಗಳಲ್ಲಿರುವ ನೀರನ್ನೇ ಬುದ್ಧಿಶಾಲಿ ಎನಿಸಿರುವ ಮಾನವನು ಕುಲಗೆಡಿಸುತ್ತಿರುತ್ತಾನೆ . ಭಾವಿಗಳಿಗೆ ಕಸ , ಕಡ್ಡಿ ಬೀಳುವ ಸನ್ನಿವೇಶವನ್ನು ತಂದಿರುತ್ತಾನೆ . ಇದರಿಂದ ಭಾವಿಯಲ್ಲಿ ಕಸಕಡ್ಡಿಗಳು ನೀರಿನಲ್ಲಿ ಕೊಳೆತಂತೆಲ್ಲಾ ನೀರೂ ಕೆಡುತ್ತಾ ಹೋಗುತ್ತದೆ . ಅದೇ ನೀರನ್ನೇ ನಾವೆಲ್ಲರೂ ಗಂಗೆಗೆ ದೋಷ ಇಲ್ಲ , ಎಂಬ ಮೂಢನಂಬಿಕೆಯಿಂದ ಕುಡಿಯುತ್ತಾ ಹೋಗುತ್ತೇವೆ . ಇದರಿಂದ ಖಾಯಿಲೆ ಬರುತ್ತದೆ . ವಾಂತಿಭೇದಿ , ಆಮಶಂಕ ಇಂತಹ ರೋಗಗಳಿಗೆಲ್ಲಾ ನೀರು ಮಲಿನವಾಗುವುದೇ ಕಾರಣ . ಕೆರೆಗಳ ಬಳಿಯಲ್ಲಿಯೇ ರೈತರು ದನಕರುಗಳ ಮೈ ತೊಳೆಯುತ್ತಾರೆ , ಸ್ನಾನ ಮಾಡುತ್ತಾರೆ , ಬಟ್ಟೆ ಒಗೆಯುತ್ತಾರೆ . ಇದರಿಂದ ನೀರು ಕೆಡುವುದಿಲ್ಲವೇ ? ಅದೇ ನೀರನ್ನೇ ಜನರೂ ಕುಡಿಯುತ್ತಾರೆ . ಇಂತಹ ಮಾಲಿನ್ಯವನ್ನೇ ಜಲಮಾಲಿನ್ಯ ಎನ್ನುವರು . ಇದರಿಂದಲೂ ಜನರ ಆರೋಗ್ಯಕ್ಕೆ ದೊಡ್ಡ ಧಕ್ಕೆ ಉಂಟಾಗದಿರದು .
ಇವೆಲ್ಲಕ್ಕೂ ಮಿಗಿಲಾಗಿ ಪ್ರಪಂಚದ ಪರಿಸರದಲ್ಲಿ ಜನಸಂಖ್ಯೆ ಗುಣಾಕಾರದ ರೀತಿಯಲ್ಲಿ ಬೆಳೆಯುತ್ತಿದೆ . ವಸತಿ ಸೌಕರ್ಯಗಳೇ ಇಲ್ಲ , ಸಮೀಪದ ಕಾಡು ಗಳೆಲ್ಲಾ ಜನರ ವಸತಿಗಾಗಿ ಊರುಗಳಾಗುತ್ತಿವೆ . ಕಾಡಿನ ಗಿಡಮರಗಳೇ ಇಂದು ಶೂನ್ಯ , ಕಾಡಿನ ಗಿಡ – ಮರಗಳ ಕಾರಣ ಮಳೆಬರುತ್ತದೆ , ಗಿಡಮರಗಳು ಗಾಳಿ ಯಲ್ಲಿ ಇಂಗಾಲಮ್ಲವನ್ನು ತೆಗೆದುಕೊಂಡು , ಆಮ್ಲಜನಕವನ್ನು ಹೊರಬಿಡುತ್ತದೆ . ಈ ಕಾಡುಗಳೇ ಇಲ್ಲದೆ ಮಳೆಯ ಅಭಾವ ಹೆಚ್ಚುತ್ತದೆ . ಮಳೆ ಬಂದರೆ ಕೇವಲ ಬೆಳೆಗೆ ಅನುಕೂಲವಲ್ಲದೆ , ಪರಿಸರದ ಕೊಳೆ ಎಲ್ಲವನ್ನೂ ಕೊಚ್ಚಿ ಕೊಂಡು ಹೋಗುತ್ತದೆ . ಆದರೆ ಗಿಡಮರಗಳನ್ನು ತಮ್ಮ ಸ್ವಾರ್ಥಕ್ಕಾಗಿ ಜನರು ಕಡಿದುಹಾಕುತ್ತಿರುವುದರಿಂದಲೂ ಪರಿಸರ ಮಲಿನತೆಗೆ ಸದವಕಾಶ ಉಂಟಾಗುತ್ತಿದೆ .
Parisara Malinya Prabandha In Kannada Essay
ಆದ್ದರಿಂದ ಈಗಲಾದರೂ ನಾವು ಪರಿಸರಮಾಲಿನ್ಯದ ನಿವಾರಣೆಯ ಕಡೆ ಗಮನ ಹರಿಸಬೇಕು . ಮನೆಗಳ ಒಳಗೆ , ಹೊರಗೆ ಚೊಕ್ಕಟವಾಗಿಡಲು ಯತ್ನಿಸ ಬೇಕು . ಕಸ – ಕಡ್ಡಿಗಳನ್ನು ಮನೆಗಳ ಮುಂದೆ , ಹಿಂದೆ ರಾಶಿ ಹಾಕುವುದನ್ನು ಬಿಟ್ಟು , ಕಾಂಪೋಸ್ಟ್ ಪಿಟ್ಗಳಲ್ಲಿ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು , ಕಾರ್ಖಾನೆಗಳನ್ನು ನಗರಗಳು , ಗ್ರಾಮಗಳ ವಾಸಸ್ಥಳದಿಂದ ದೂರದಲ್ಲಿ ನಿರ್ಮಿ ಸಲು ಎಚ್ಚರಿಕೆ ವಹಿಸಬೇಕು . ಬಾವಿಗಳ ಒಳಗೆ ಕಸಕಡ್ಡಿ ಬೀಳದಂತೆ ವ್ಯವಸ್ಥೆ ಮಾಡಬೇಕು , ಕೆರೆ – ಕಟ್ಟೆಗಳನ್ನು ಶುದ್ಧವಾಗಿಡಲು ಸಕಲ ಮುಂಜಾಗರೂಕತೆ ಯನ್ನೂ ವಹಿಸಬೇಕು , ಗಿಡ – ಮರಗಳನ್ನು ಮನೆ ಮುಂದೆ ಬೆಳೆಸಬೇಕೇ ಹೊರತು , ಕಾಡುಗಳ ವಿನಾಶದತ್ತ ಯೋಚಿಸಬಾರದು . ಜನಸಂಖ್ಯೆಯ ಹೆಚ್ಚಳವನ್ನು ತಡೆ ಯಲು ಕುಟುಂಬ ಯೋಜನೆಯ ರೀತಿ – ನೀತಿಗಳನ್ನು ತತ್ವಶಃ ಪರಿಪಾಲಿಸಬೇಕು .
ಸರ್ಕಾರವು ಪ್ರಸ್ತುತದಲ್ಲಿ ಪರಿಸರಮಾಲಿನ್ಯ ನಿವಾರಣೆಯ ಬಗ್ಗೆ ತುಂಬಾ ಶ್ರಮ ವಹಿಸುತ್ತಿದೆ . ಆದರೆ ಸಾರ್ವಜನಿಕರೂ ಈ ನಿಟ್ಟಿನಲ್ಲಿ ಸರ್ಕಾರದ ಕಾರ್ಯಗಳಲ್ಲಿ ಭಾಗವಹಿಸಬೇಕು . ಸರ್ಕಾರದೊಂದಿಗೆ ಸಹಕರಿಸಬೇಕು ಒಟ್ಟಿನಲ್ಲಿ ವಿದ್ಯಾರ್ಥಿಗಳಾದ ನಾವೇ ಈ ಮುಂದಿನ ಜನಾಂಗ ಎನಿಸುವವರಾಗಿರುವುದರಿಂದ ಈ ಬಗ್ಗೆ ಮುಂಜಾಗೃತರಾಗುವ ಹವ್ಯಾಸವನ್ನು ಈಗಿನಿಂದಲೂ ಬೆಳೆಸಿಕೊಳ್ಳಬೇಕು.
ಪರಿಸರ ಎಂದರೇನು?
ನಮ್ಮ ವಾತಾವರಣದಲ್ಲಿರುವ ಬೆಟ್ಟ-ಗುಡ್ಡ ಕಲ್ಲು ಮಣ್ಣು ಗಾಳಿ ನೀರು ಮುಂತಾದವುಗಳನ್ನೆಲ್ಲ ಒಳಗೊಂಡ ವ್ಯವಸ್ಥೆಗೆ ಪರಿಸರ ಅಂತ ಹೇಳುತ್ತೇವೆ
ಪರಿಸರ ಮಾಲಿನ್ಯ ವಿಧಗಳು?
ವಾಯುಮಾಲಿನ್ಯ, ನೈಸರ್ಗಿಕ, ಮನುಷ್ಯ ನಿರ್ಮಿತ, ಶಬ್ದಮಾಲಿನ್ಯ, ಭೂಮಾಲಿನ್ಯ, ಜಲಮಾಲಿನ್ಯ
Parisara Malinya Prabandha In Kannada
ಈ ಲೇಖನವನ್ನು ಸಹ ಓದಿ:
- ಮೈಸೂರು ಇತಿಹಾಸದ ಬಗ್ಗೆ ಪ್ರಬಂಧ
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಬಗ್ಗೆ ಮಾಹಿತಿ
- ಆಗುಂಬೆ ಬಗ್ಗೆ ಮಾಹಿತಿ
- ನಂದಿ ಬೆಟ್ಟದ ಸಂಪೂರ್ಣ ಮಾಹಿತಿ
- ಸಿಂಧೂ ನದಿ ಬಗ್ಗೆ ಮಾಹಿತಿ
- ಕಾರ್ಗಿಲ್ ವಿಜಯ್ ದಿವಸ್ ಪ್ರಬಂಧ
parisara malinya essay in kannada, parisara malinya essay, ಪರಿಸರ ಮಾಲಿನ್ಯ essay in ಕನ್ನಡ, parisara malinya short essay in kannada, parisara malinya mattu samrakshane essay in kannada, parisara malinya mathu samrakshane essay in kannada, parisara malinya essay in kannada prabandha