Students can Download Political Science Chapter 3 Administrative Machinery in India Questions and Answers, Notes Pdf, 2nd PUC Political Science
2nd PUC Political Science Chapter 3 Question answer in Kannada
ಒಂದು ಅಂಕದ ಪ್ರಶ್ನೆಗಳು
ಆಡಳಿತ ಎಂದರೇನು ?
ಸರಕಾರ ನಡೆಸುವುದು ಮತ್ತು ಜನರನ್ನು ನೋಡಿಕೊಳ್ಳುವುದೇ ಆಡಳಿತ.
ಆಡಳಿತದ ಮೂಲಪದಗಳು ಯಾವುವು ?
ಲ್ಯಾಟೀನ್ ಭಾಷೆಯ ‘ Ad ‘ ಮತ್ತು ‘ Ministiare ಎಂಬ ಪದಗಳು Administration – ಆಡಳಿತದ ಮೂಲ ಪದಗಳು
ಕೇಂದ್ರಾಡಳಿತ ಮುಖ್ಯಸ್ಥ ಯಾರು ?
ರಾಷ್ಟ್ರಪತಿಗಳು ಕೇಂದ್ರಾಡಳಿತ ಮುಖ್ಯಸ್ಥರು .
ರಾಜ್ಯಾಡಳಿತ ಮುಖ್ಯಸ್ಥ ಯಾರು ?
ರಾಜ್ಯಾಡಳಿತ ಮುಖ್ಯಸ್ಥರು ರಾಜ್ಯಪಾಲರು .
ಜಿಲ್ಲಾಡಳಿತ ಮುಖ್ಯಸ್ಥ ಯಾರು ?
ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮುಖ್ಯಸ್ಥರು
CAT ವಿಸ್ತರಿಸಿ ?
ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ – Central Administrative Tribunal.
KAT ವಿಸ್ತರಿಸಿ .
ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ Karnataka Administrative Tribunal.
UPSC ವಿಸ್ತರಿಸಿ .
ಕೇಂದ್ರೀಯ ಲೋಕಸೇವಾ ಆಯೋಗ Union Public Service commission.
KPSC ವಿಸ್ತರಿಸಿ .
ಕರ್ನಾಟಕ ಲೋಕಸೇವಾ ಆಯೋಗ – Karnataka Public Service commission .
JPSC ವಿಸ್ತರಿಸಿ .
ಜಂಟಿ ಲೋಕಸೇವಾ ಆಯೋಗ joint public Service commission.
IAS ವಿಸ್ತರಿಸಿ .
ಭಾರತೀಯ ಆಡಳಿತ ಸೇವೆಗಳುindian administrative Services.
IPS ವಿಸ್ತರಿಸಿ .
ಕರ್ನಾಟಕ ಆಡಳಿತ ಸೇವೆಗಳು indian police Services.
KAS ವಿಸ್ತರಿಸಿ .
ಕರ್ನಾಟಕ ಆಡಳಿತ ಸೇವೆಗಳು – karnataka administrative service.
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ ?
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ ?
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕದ ರಾಜ್ಯಪಾಲರು ನೇಮಿಸುತ್ತಾರೆ.
2nd PUC Political Science Chapter 3 Question answer in Kannada
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸೆಷ್ಟು ?
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು 65 ವರ್ಷಗಳು.
ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸೆಷ್ಟು ?
ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು 62 ವರ್ಷಗಳು .
ರಾಜ್ಯ ಸೇವೆಗೆ ಒಂದು ಉದಾ ಕೊಡಿ .
ಕರ್ನಾಟಕ ಆಡಳಿತ ಸೇವೆಗಳು [ KAS ] ರಾಜ್ಯಸೇವೆಗೆ ಒಂದು ಉತ್ತಮ ಉದಾಹರಣೆಯಾಗಿದೆ.
ಯಾವ ವಿಧಿಯು ಅಖಿಲ ಭಾರತದ ಸೇವೆಗೆ ಅವಕಾಶ ಕಲ್ಪಿಸಿದೆ ?
ಸಂವಿಧಾನದ 14 ನೇ ಭಾಗದ 312 ನೇ ಪರಿಚ್ಛೇದವು ಅಖಿಲ ಭಾರತದ ಸೇವೆಗೆ ಅವಕಾಶ ಕಲ್ಪಿಸಿದೆ.
ಅಖಿಲ ಭಾರತ ಸೇವೆಗೆ ಒಂದು ಉದಾ ಕೊಡಿ .
ಭಾರತೀಯ ಪೋಲಿಸ್ ಸೇವೆಗಳು.
ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಎಲ್ಲಿದೆ ?
ಮಸೂರಿ ‘ ಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಇದೆ .
ಸರದಾರ್ ವಲ್ಲಭಬಾಯಿ ಪಟೇಲ್ ಅಕಾಡೆಮಿ ಎಲ್ಲಿದೆ ?
ಸರದಾರ್ ವಲ್ಲಬ್ಬಾಯಿ ಪಟೇಲ್ ಅಕಾಡೆಮಿಯು ಹೈದರಾಬಾದ್ನಲ್ಲಿರ.
2nd PUC Political Science Chapter 3 Question answer in Kannada
ಕೇಂದ್ರ ಸೇವೆಗೆ ಒಂದು ಉದಾಹರಣೆ ಕೊಡಿ .
ಭಾರತೀಯ ವಿದೇಶಿ ಸೇವೆಗಳು.
ಕೇಂದ್ರ ಸೇವೆಯನ್ನು ವರ್ಗೀಕರಣ ಮಾಡಿ .
ಕೇಂದ್ರೀಯ ಸೇವೆಗಳನ್ನು
ದರ್ಜೆ -I
ದರ್ಜೆ – II
ದರ್ಜೆ – III
ದರ್ಜೆ – IV ಎಂದು ವರ್ಗೀಕರಿಸಲಾಗಿದೆ.
ಜಿಲ್ಲಾಡಳಿತ ಎಂದರೇನು ?
ಜಿಲ್ಲೆಯೊಳಗಿನ ಸಾರ್ವಜನಿಕ ವ್ಯವಹಾರವನ್ನು ನೋಡಿಕೊಳ್ಳುವುದೇ ಜಿಲ್ಲಾಡಳಿತವಾಗಿದೆ.
ಕೇಂದ್ರ ಲೋಕಸೇವಾ ಆಯೋಗದ ಸದಸ್ಯರ ಅಧಿಕಾರಾವಧಿ ಎಷ್ಟು ?
ಕೇಂದ್ರ ಲೋಕಸೇವಾ ಆಯೋಗದ ಸದಸ್ಯರು ತಾವು ವರದಿ ಮಾಡಿಕೊಳ್ಳುವ ದಿನದಿಂದ 6 ವರ್ಷಗಳವರೆಗೆ ಅಥವಾ ಸದಸ್ಯರ 65 ವರ್ಷ ವಯೋಮಿತಿವರೆಗೆ ಅಥವಾ ಇವೆರಡರಲ್ಲಿ ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ.
2nd PUC Political Science Chapter 3 Question answer in Kannada
ಸರ್ಕಾರದ ನಾಲ್ಕನೆಯ ಅಂಗ ಯಾವುದು ?
ಸರ್ಕಾರದ ನಾಲ್ಕನೆಯ ಅಂಗ ನಾಗರೀಕ ಸೇವಾ ವರ್ಗ.
ಕೇಂದ್ರ ಲೋಕಸೇವಾ ಆಯೋಗದಲ್ಲಿ ಎಷ್ಟು ಸದಸ್ಯರಿರುತ್ತಾರೆ ?
ಕೇಂದ್ರ ಲೋಕಸೇವಾ ಆಯೋಗದಲ್ಲಿ ಅಧ್ಯಕ್ಷರನ್ನು ಹೊರತುಪಡಿಸಿ 10 ಜನ ಸದಸ್ಯರಿರುತ್ತಾರೆ .
ಕರ್ನಾಟಕದ ರಾಜ್ಯ ಅಧಿಕಾರಾವಧಿ ಎಷ್ಟು ?
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರು 6 | ವರ್ಷಗಳವರೆಗೆ ಅಥವಾ ಅವರಿಗೆ 62 ವರ್ಷ ವಯೋಮಿತಿಯವರೆಗೆ ಅಥವಾ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಗೊಳ್ಳುತ್ತಾರೆ .
ಎರಡು ಅಂಕದ ಪ್ರಶ್ನೆಗಳು
ಆಡಳಿತ ಸೇವೆ ಎಂದರೇನು ?
ಆಡಳಿತ ಸೇವೆಯು ಒಂದು ಶಾಶ್ವತ ಕಾರ್ಯಾಂಗವಾಗಿದೆ , ಇದು ರಾಷ್ಟ್ರದ ಪ್ರಮುಖ , ಪ್ರಧಾನಿ ಮತ್ತು ಮಂತ್ರಿಮಂಡಲವನ್ನು ಅಪಾರ ಸಂಖ್ಯೆಯ ಅಧೀನಾಧಿಕಾರಿಗಳು ಉನ್ನತಾಧಿಕಾರಿಗಳು , ಆಡಳಿತಾತ್ಮಕ ಅಧಿಕಾರಿಗಳನ್ನು ಒಳಗೊಂಡಿದೆ.
ಆಡಳಿತ ಸೇವೆಯ ವರ್ಗೀಕರಣ ಮಾಡಿ ?
ಭಾರತದಲ್ಲಿ ಆಡಳಿತ ಸೇವೆಯನ್ನು ಈ ರೀತಿ ವರ್ಗೀಕರಿಸಲಾಗಿದೆ .
ಅಖಿಲ ಭಾರತ ಸೇವೆಗಳು
- ಭಾರತದ ಆಡಳಿತ ಸೇವೆಗಳು ( Indian Adminis trative Services – IAS )
- ಭಾರತದ ಆರಕ್ಷಕ ಸೇವೆಗಳು ( Indian Police Services – IPS )
- ಭಾರತದ ಅರಣ್ಯ ಸೇವೆಗಳು ( Indian Forest Service – IFS )
ಕೇಂದ್ರದ ಸೇವೆಗಳು
- ಭಾರತದ ಪಾಶ್ಚತ್ಯ ಸೇವೆಗಳು ( Indian Foreign Service )
- ಭಾರತದ ವರಮಾನ ಸೇವೆ ( Indian Railway Service )
- ಭಾರತದ ರೈಲ್ವೆ ಸೇವೆ ( Indian Railway Ser vice )
* ರಾಜ್ಯದ ಸೇವೆಗಳು
- ಕರ್ನಾಟಕ ಆಡಳಿತ ಸೇವೆ KAS ಇತ್ಯಾದಿ .
ಕೇಂದ್ರ ಸೇವೆಗೆ ಎರಡು ಉದಾಹರಣೆ ನೀಡಿ
- ಭಾರತೀಯ ವಿದೇಶಿ ಪರಿಶೋಧನಾ ಮತ್ತು ಲೆಕ್ಕಸೇವೆಗಳು .
- ಭಾರತೀಯ ಕಂದಾಯ ಸೇವೆಗಳು .
ಇವು ಕೇಂದ್ರ ಸೇವೆಗೆ ಎರಡು ಉದಾಹರಣೆ
ನಾಗರೀಕ ಸೇವೆಯ ಎರಡು ಲಕ್ಷಣಗಳನ್ನು ತಿಳಿಸಿ .
ನಾಗರೀಕ ಸೇವೆಯ ಎರಡು ಲಕ್ಷಣಗಳು
- ವೃತ್ತಿನಿರತ ವರ್ಗವಾಗಿದೆ
- ನಾಗರೀಕ ಸೇವೆಯು ಅಧಿಕಾರ ಶ್ರೇಣಿ ಪದ್ಧತಿಯನ್ನು ಹೊಂದಿದೆ .
ಆಡಳಿತ ಸೇವೆಯ ತಾಟಸ್ಥ್ಯ ಎಂದರೇನು ?
ಆಡಳಿತ ಸೇವಾ ಸಿಬ್ಬಂದಿಯು ಯಾವ ಪಕ್ಷ ಅಧಿಕಾರಕ್ಕೆ ಬ ೦ ದರೂ ಪೂರ್ವಾ ಗ್ರಹ ಪೀಡೆಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದಕ್ಕೆ ಆಡಳಿತ ಸೇವೆಯ ತಾಟಸ್ಥ್ಯ ಎಂದು ಕರೆಯಲಾಗುತ್ತದೆ . ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅದನ್ನು ಪರಿಗಣಿಸದೇ ಆಡಳಿತ ಸೇವಾ ಸಿಬ್ಬಂದಿಯು ಒಂದೇ ರೀತಿಯ ನಿಷ್ಠೆ , ಪ್ರಾಮಾಣಿಕತೆ , ದಕ್ಷತೆ ಹಾಗೂ ಉತ್ಸಾಹದಿಂದ ಸೇವೆ ಸಲ್ಲಿಸಬೇಕು.
ಕೇಂದ್ರ ಲೋಕಸೇವಾ ಆಯೋಗದ ಎರಡು ಕಾರ್ಯಗಳನ್ನು ತಿಳಿಸಿ.
- ಕೇಂದ್ರ ಮತ್ತು ಅಖಿಲ ಭಾರತ ಸೇವೆಗಳಿಗೆ ನೇಮಕ ಮಾಡಲು ಪರೀಕ್ಷೆಗಳನ್ನು ನಡೆಸುವುದು .
- ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ಬೇಡಿಕೆಯ ಮೇಲೆ , ವಿಶೇಷವಾಗಿ ವಿದ್ಯಾರ್ಹತೆಯನ್ನು ಆಧರಿಸಿ ಯಾವುದೇ ಸೇವೆಗಳಿಗೆ ಅಗತ್ಯವಿರುವಷ್ಟು ಜಂಟಿ ನೇಮಕಾತಿಯನ್ನು ಮಾಡುವುದು ಕೇಂದ್ರ ಲೋಕಸೇವಾ ಆಯೋಗದ ಕಾರ್ಯಗಳಾಗಿವೆ.
2nd PUC Political Science Chapter 3 Question answer in Kannada
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮೂರು ಕಾರ್ಯಗಳನ್ನು ತಿಳಿಸಿ .
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ಕೆಳಕಂಡ ಮೂರು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ .
1. ರಾಜ್ಯಸೇವೆಗಳಿಗೆ ಅಭ್ಯರ್ಥಿಗಳನ್ನೇ ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ .
2. ನಾಗರೀಕ ಸಿಬ್ಬಂದಿಗಳನ್ನು ಒಂದು ಸೇವೆಯಿಂದ ಮತ್ತೊಂದು ಸೇವೆಗೆ ಬಡ್ತಿ ಮತ್ತು ವರ್ಗಾವಣೆಗಾಗಿ ನೇಮಕಾತಿ ನಿಯಮಗಳನ್ನು ರಚಿಸುತ್ತದೆ .
3. ರಾಜ್ಯದಲ್ಲಿನ ನಾಗರೀಕ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ತಿಳುವಳಿಕೆ ನೀಡುತ್ತದೆ .
8. ಅಧಿಕಾರ ಶ್ರೇಣಿ ಪದ್ಧತಿ ಎಂದರೇನು ?
ನಾಗರೀಕ ಸೇವಾ ವರ್ಗದಲ್ಲಿ ಅಧಿಕಾರಿಗಳು ವಿವಿಧ ಶ್ರೇಣಿಗಳಾಗಿ ವಿಂಗಡಿಸಿ ಒಂದು ನಿಯಮದಡಿ ತರುವುದಾಗಿದೆ . ಏಕೆಂದರೆ ಪ್ರತಿಯೊಬ್ಬ ನಾಗರೀಕಸಿಬ್ಬಂದಿಯು ಅವನ ನಂತರದ ಉನ್ನತ ಅಧಿಕಾರಿಯ ಆದೇಶಗಳನ್ನು ಪಾಲಿಸಬೇಕಾಗುತ್ತದೆ . ಮೇಲಧಿಕಾರಿಯು ಕೆಳಗಿನ ಅಧಿಕಾರಿಯ ಅಧಿಕಾರ ನಿರ್ವಹಣೆಯನ್ನುಗಮನಿಸುತ್ತಾನೆ . ಪ್ರಾಧಿಕಾರವು ಮೇಲ್ಸ್ತರದಿಂದ ನಡೆಯುತ್ತಿದ್ದು ಆಡಳಿತವನ್ನು ಸ್ಥಿರತೆಗೆ ತರುವಲ್ಲಿ ಸಹಾಯ ಮಾಡುತ್ತದೆ .
ಮುಖ್ಯ ಕಾರ್ಯದರ್ಶಿಯ ಎರಡು ಕಾರ್ಯಗಳನ್ನು ತಿಳಿಸಿ .
1. ಮುಖ್ಯ ಕಾರ್ಯದರ್ಶಿಯು ಮುಖ್ಯಮಂತ್ರಿಗೆ ಸಲಹೆಗಾರರಾಗಿರುತ್ತಾರೆ .
2. ಇವರು ಸಂಪೂರ್ಣ ಸಚಿವಾಲಯದ ಸಾಮಾನ್ಯ ಮೇಲ್ವಿಚಾರಣೆಗೆ ಮತ್ತು ನಿಯಂತ್ರಣವನ್ನು ಹೊಂದಿರುತ್ತಾರೆ . ಇವು ಮುಖ್ಯ ಕಾರ್ಯದರ್ಶಿಯ ಎರಡು ಪ್ರಮುಖ ಕಾರ್ಯಗಳಾಗಿವೆ .
ಹರ್ಮನ್ ಫೈನರ್ ರವರ ವ್ಯಾಖ್ಯೆಯನ್ನು ತಿಳಿಸಿ .
ಹರ್ಮನ್ ಫೈನರ್ : ವೇತನ ಸ್ವೀಕರಿಸುವ ತರಬೇತಿ ಹಾಗೂ ನೈಪುಣ್ಯತೆಯನ್ನು ಮೈಂದಿದ ಶಾಶ್ವತ ಮತ್ತು ವೃತ್ತಿಪರ ಅಧಿಕಾರಗಳ ಸಮೂಹವೇ ನಾಗರೀಕ ಸೇವಾವರ್ಗ .
ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ಹೇಗೆ ಪದಚ್ಯುತಿಗೊಳಿಸಲಾಗುತ್ತದೆ ?
ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ಅವರ ದುರ್ನಡತೆಯ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯದ ವಿಚಾರಣೆ ಮುಗಿದ ನಂತರ ರಾಷ್ಟ್ರಪತಿಗಳ ಆದೇಶದ ಮೇಲೆ ಮಾತ್ರ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಬಹುದು . ಅಲ್ಲದೇ ರಾಷ್ಟ್ರಪತಿಯ ಆಯೋಗದ ಸದಸ್ಯರನ್ನೇ ವಜಾಗೊಳಿಸಲು ಅಧಿಕಾರವನ್ನು ಹೊಂದಿರುತ್ತಾರೆ .
ಜಿಲ್ಲಾಧಿಕಾರಿಯ ಕಾರ್ಯಗಳನ್ನು ತ ಿಳಿಸಿ .
1. ಕಾನೂನು ಸುವ್ಯವಸ್ಥೆ ಹಾಗೂ ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ .
2. ಜಿಲ್ಲಾಧಿಕಾರಿಗಳು ಕಂದಾಯಕ್ಕೆ ಮತ್ತು ಅಭಿವೃದ್ಧಿಗೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸುತ್ತಾರೆ .
3. ಮತದಾನಕ್ಕೆ ಮತ್ತು ಪೌರ ಆಡಳಿತಕ್ಕೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸುತ್ತಾರೆ .
ಆಡಳಿತ ಸೇವೆಯ ಅನಾಮಕತ್ವ ಎಂದರೇನು ?
ನಾಗರೀಕ ಸಿಬ್ಬಂದಿಗಳು ತೆರೆಯ ಮರೆಯ ಕೆಲಸ ಮಾಡುವಂತಿರಬೇಕು . ಮತ್ತು ಸಚಿವರಿಗೆ ಕೆಲಸ ಮಾಡಿದರೂ ಸಹ ಅನಾಮಕತ್ವ ಸಿಬ್ಬಂದಿಯಾಗಿ ಉಳಿಯಲೇಬೇಕಾಗುತ್ತದೆ . ಒಳ್ಳೆಯ ಕೆಲಸಕ್ಕಾಗಿ ಪ್ರಶಂಸೆ ಅಥವಾ ಏನಾದರೂ ಅಸಂಭವಗಳು ನಡೆದರೆ ಅದು ಸಚಿವರಿಗೆ ಅನ್ವಯ ವಾಗುತ್ತಿದೆಯೇ ವಿನಃ ನಾಗರೀಕ ಸಿಬ್ಬಂದಿಗಳಿಗಲ್ಲ .
ಸರ್ಕಾರದ ಮೂರು ಇಲಾಖೆಗಳನ್ನು ತಿಳಿಸಿ ?
ಮಾನವ ಅಭಿವೃದ್ಧಿ ಇಲಾಖೆ , ರೈಲ್ವೆ ಇಲಾಖೆ , ಹಣಕಾಸು ಇಲಾಖೆ ಇವು ಸರ್ಕಾರದ ಮೂರು ಇಲಾಖೆಗಳು .
2nd PUC Political Science Chapter 3 Question answer in Kannada
ಸಚಿವಾಲಯದ ಎರಡು ಜವಾಬ್ದಾರಿಗಳನ್ನು ತಿಳಿಸಿ ?
1. ಮಸೂದೆಗಳನ್ನು ಹಾಗು ಕಾನೂನುಗಳನ್ನು ರೂಪಿಸಲು ಮಂತ್ರಿಗಳಿಗೆ ಸಹಾಯ ಮಾಡುತ್ತದೆ .
2. ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ಸಂಬಂಧಪಟ್ಟ ಮಂತ್ರಿಗೆ ಸಹಾಯ ಮಾಡುತ್ತದೆ .
ಇಲಾಖೆ ಎಂದರೇನು ?
ಇದು ಸಚಿವಾಲಯದ ಪ್ರಾಥಮಿಕ ಘಟಕವಾಗಿದೆ . ಒಂದು ಸಚಿವಾಲಯವು ಹಲವಾರು ಇಲಾಖೆಗಳನ್ನು ಹೊಂದಿರಬಹುದು . ಪ್ರತಿಯೊಂದು ಇಲಾಖೆಯು ಒಬ್ಬ ಕಾರ್ಯದರ್ಶಿಯನ್ನು ಹೊಂದಿರುತ್ತದೆ . ಮಂತ್ರಿಯು ಇಲಾಖೆಯ ರಾಜಕೀಯ ಮುಖ್ಯಸ್ಥನಾದರೆ , ಕಾರ್ಯದರ್ಶಿಯು ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ .
ಭಾಗ ಎಂದರೇನು ?
ಸಚಿವಾಲಯದ ಕಾರ್ಯಭಾರವನ್ನು ಆಧರಿಸಿ ಒಂದು ಅಥವಾ ಅದಕ್ಕಿಂತಲೂ ಹೆಚ್ಚಿನ ಭಾಗಗಳನ್ನಾಗಿ ಮಾಡಲಾಗುವುದು ; ಒಬ್ಬ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿಯು ಆ ಭಾಗದ ಪ್ರಭಾವವನ್ನು ಹೊಂದಿರುತ್ತಾನೆ . ಕಾರ್ಯದರ್ಶಿಯವರ ಸಂಪೂರ್ಣ ಜವಾಬ್ದಾರಿಯ ಮೇಲೆ ಅವನಿಗೆ ಸ್ವತಂತ್ರ ಜವಾಬ್ದಾರಿಯನ್ನು ನೀಡಲಾಗುವುದು .
ಅಖಿಲ ಭಾರತ ಸೇವೆ ಎಂದರೇನು ?
ಅಖಿಲ ಭಾರತ ಸೇವೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡಕ್ಕೂ ಸೇರಿದ ಸೇವೆಗಳಾಗಿವೆ . ಅಖಿಲ ಭಾರತ ಸೇವೆಯಲ್ಲಿರುವವರು ಕೇಂದ್ರ ಮತ್ತು ರಾಜ್ಯ 2 ಸರ್ಕಾರಗಳೆರಡರಲ್ಲಿಯೂ ಸೇವೆ ಸಲ್ಲಿಸುತ್ತಾರೆ . IAS , IPS , IFS ಸೇವೆಗಳು ಅಖಿಲ ಭಾರತ ಸೇವೆಗಳೆಂದು ಕರೆಯಲಾಗಿದೆ . ಈ ಅಧಿಕಾರಿಗಳನ್ನು ಕೇಂದ್ರ ಸೇವೆ ಮತ್ತು ರಾಜ್ಯ ಸೇವೆಗೆ ವರ್ಗಾವಣೆ ಮಾಡಬಹುದು .
2nd PUC Political Science Chapter 3 Question answer in Kannada
ಜಿಲ್ಲಾಡಳಿತ ಎಂದರೇನು ?
ಜಿಲ್ಲಾಡಳಿತವು ರಾಜ್ಯದ ಪ್ರಾಥಮಿಕ ಆಡಳಿತಾತ್ಮಕ ಘಟಕವಾಗಿದೆ . ಇದು ಜಿಲ್ಲೆಯೊಳಗಿನ ಸಾರ್ವಜನಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ . ಸರ್ಕಾರದ ನೀತಿಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ . ಆದ್ದರಿಂದ ನಾಗರೀಕರು ಈ ಹಂತದಲ್ಲಿ ಆಡಳಿತದೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತಾರೆ.
ಕೇಂದ್ರ ಲೋಕಸೇವಾ ಸದಸ್ಯರಾಗಲು ಇರಬೇಕಾದ ಅರ್ಹತೆಗಳೇನು ?
- 1. ಆಯೋಗದ ಅರ್ಧದಷ್ಟು ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಕನಿಷ್ಟ 10 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು .
- 2. ಸದಸ್ಯರು , ಅವರ ನಿವೃತ್ತಿಯ ನಂತರ ಪುನರ್ ನೇಮಕಾತಿಗೆ ಅರ್ಹನಿರುವುದಿಲ್ಲ .
- 3 . ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯನೊಬ್ಬನನ್ನು ಕೇಂದ್ರ ಲೋಕಸೇವಾ ಅಥವಾ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷನಾಗಿ ನೇಮಕ ಮಾಡಿಕೊಳ್ಳಬಹುದು .
2nd PUC Political Science Chapter 3 Question answer in Kannada
ಇತರೆ ಅಧ್ಯಾಯಗಳನ್ನು ಓದಿ :
ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ