ಇರುಳು ಕಂಡ ಬಾವಿಗೆ ಹಗಲು ಬಿದ್ದರಂತೆ, ಗಾದೆ, Proverb, Irulu Kanda Bavige Hagalu Biddanthe, ಇರುಳು ಕಂಡ ಬಾವೀಲಿ ಹಗಲು ಬಿದ್ದಂತೆ Kannada gadegalu or proverb Explanation and meaning in Kannada. Erulu Kanda Bhavili hagalu bidanthe, ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ ಗಾದೆ.
Irulu Kanda Bavige Hagalu Biddanthe
ಇರುಳು ಕಂಡ ಬಾವಿಗೆ ಹಗಲು ಬಿದ್ದಹಾಗೆ ಈ ಗಾದೆಯ ಸಾಮಾನ್ಯ ಅರ್ಥವೇನು , ನೋಡೋಣ . ಹಗಲಿನ ಬೆಳಕಿನಲ್ಲಿ ಕಂಡ ಬಾವಿಯನ್ನು ಗುರುತಿಟ್ಟುಕೊಂಡವನು ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ಆ ದಾರಿಯಲ್ಲಿ ಬಾವಿ ( ತೆರೆದ ಹಳ್ಳ )
ಇರುವುದನ್ನು ನೆನೆದು ಎಚ್ಚರಿಕೆಯಿಂದ ನಡೆಯುತ್ತಾನೆ . ಆದರೆ ರಾತ್ರಿಯ ಕತ್ತಲಲ್ಲಿಯೇ ಬಾವಿಯೊಂದನ್ನು ಕಂಡವನು ಹಗಲು ಹೊತ್ತಿನಲ್ಲಿ ಅದರೊಳಗೆ ಬೀಳುತ್ತಾನೆಯೆ ? ಹಾಗೆ ಬೀಳುವವನು ಮೂರ್ಖನೇ ಸರಿ . ಇಂಥ ಗಾದೆಮಾತು ಮೂರ್ಖತನದಿಂದ ಅಪಾಯ ತಂದುಕೊಳ್ಳುವ ಜನರನ್ನು ಅಪಹಾಸ್ಯಮಾಡುತ್ತದೆ .
ವಿವರಣೆಯ ಕೊನೆಯ ಭಾಗದಲ್ಲಿ ಗಾದೆಮಾತಿನ ಸೂಚ್ಯಾರ್ಥ , ಅಂದರೆ ಯಾವ ಜೀವನ ಸತ್ಯದ ಮೇಲೆ ಗಾದೆಯ ಅರ್ಥವು ಬೆಳಕು ಚೆಲ್ಲುತ್ತದೆಯೆಂಬುದರ ವಿಶ್ಲೇಷಣೆಯಿರಬೇಕು . ಮೇಲಿನ ಗಾದೆಮಾತು ತಿಳಿಯ ಹೇಳುವ ಅಂತರಾರ್ಥವನ್ನು ಹೀಗೆ ಸಂಗ್ರಹಿಸಿ ಬರೆಯಬಹುದು . ಬಾವಿಗೆ ಬೀಳು ಎಂಬ ನುಡಿಗಟ್ಟನ್ನು ಸಾಮಾನ್ಯವಾಗಿ ಮೋಸ ಹೋಗು , ಮರುಳಾಗು ಎಂಬ ಅರ್ಥದಲ್ಲಿ ಬಳಸುವುದು ಸಾಮಾನ್ಯ .
ಆಧುನಿಕ ಪ್ರಪಂಚದಲ್ಲಿ ಸುಖಸೌಲಭ್ಯಗಳು ಹೆಚ್ಚಿದ ಹಾಗೆಲ್ಲ ಮೋಸ , ವಂಚನೆ , ಕೊಲೆ , ದರೋಡೆ , ಅಪ್ರಾಮಾಣಿಕತೆ ಕ್ರೌರ್ಯಗಳು ಹೆಚ್ಚಿವೆ . ಇಂದಿನ ಯುಗದಲ್ಲಿ ಎಲ್ಲರೂ ನಮ್ಮ ಹಿತೈಷಿಗಳೆಂದೂ , ಅಂಥವರು ಹೇಳುವುದೆಲ್ಲ ನಿಜವೆಂದೂ ಭ್ರಮಿಸಿಬಿಡಬಾರದು .
“ ಬೆಳ್ಳಗಿರುವುದೆಲ್ಲ ಹಾಲಲ್ಲ ‘ , ‘ ಹೊಳೆದದ್ದೆಲ್ಲ ಬಂಗಾರವಲ್ಲ ‘ ಎಂಬ ಗಾದೆ ಮಾತುಗಳು ನಯವಂಚಕರ ಬಗೆಗೆ ಎಚ್ಚರಿಕೆ ನೀಡುವ ಹಿತವಚನಗಳಾಗಿವೆ . ಆದರೆ ಗೊತ್ತಿಲ್ಲದೆ ಅಪಾಯತಂದುಕೊಳ್ಳುವುದೋ ಮೋಸ ಹೋಗುವುದೋ ಆಗುವುದಿರಲಿ , ತಿಳಿದೂ ತಿಳಿದೂ ಅನೇಕರು ವಂಚಕರ ಬಲೆಯಲ್ಲಿ ಬೀಳುವುದನ್ನೂ ಕಷ್ಟಕ್ಕೆ ಸಿಲುಕುವುದನ್ನೂ ದಿನಂಪ್ರತಿ ಕಾಣಬಹುದು .
‘ ಹಣವನ್ನು ದ್ವಿಗುಣಗೊಳಿಸಿಕೊಡುತ್ತೇವೆ ‘ , ‘ ಅರ್ಧಬೆಲೆಗೆ ಕಡಿತದ ಮಾರಾಟ ‘ , ‘ ಇಂದು ಸ್ವಲ್ಪ ಹಣಕೊಟ್ಟು ಬರುವ ತಿಂಗಳು ಹೆಚ್ಚಿನ ಬೆಲೆ ವಸ್ತು ತೆಗೆದುಕೊಂಡು ಹೋಗಿ ‘ , ‘ ಶೇಕಡಾ ೫೦ ರಷ್ಟು ಬಡ್ಡಿ ಕೊಡುತ್ತೇವೆ ‘ ‘ ಚಿನ್ನದ ಆಭರಣಗಳನ್ನು ಎರಡರಷ್ಟು ಮಾಡಿಕೊಡುತ್ತೇವೆ ‘ ಎಂದೆಲ್ಲ ಹೇಳುವ ವಂಚಕರ ಕೂಟಗಳೂ ನಕಲಿ ಸಂಸ್ಥೆಗಳೂ ನಾಯಿಕೊಡೆಗಳಂತೆ ಎಲ್ಲೆಡೆ ಕಂಡುಬರುತ್ತಿವೆ . ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ವಿದ್ಯಾವಂತರು ಹಳ್ಳಿಗರೆನ್ನದೆ ಅಸಂಖ್ಯ ಜನ ಇಂಥ ನಯವಂಚಕರ
Irulu Kanda Bavige Hagalu Biddanthe
ಬಲೆಗೆ ಬಿದ್ದು ತಮ್ಮ ಉಳಿತಾಯದ ಹಣವನ್ನೂ ಶ್ರಮದ ದುಡ್ಡನ್ನೂ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ . ಪತ್ರಿಕೆಗಳಲ್ಲಿ ಓದಿ ಬೇರೆಕಡೆಗಳಲ್ಲಿ ಜನರಿಗಾದ ಮೋಸವನ್ನು ತಿಳಿದೂ ತಿಳಿದೂ ಹಗಲು ಹೊತ್ತಿನಲ್ಲೇ ವಂಚನೆಯ ಬಾವಿಗೆ ಬಿದ್ದು ಒದ್ದಾಡುವ ಮುಠಾಳರನ್ನು ಉದ್ದೇಶಿಸಿಯೇ ನಮ್ಮ ಹಿರಿಯರು ‘ ಇರುಳು ಕಂಡ ಬಾವಿಗೆ ಹಗಲು ಬಿದ್ದ ಹಾಗೆ ‘ ಎಂದು ಹೇಳಿರುವುದು !
ಇಂಥ ಈ ರೀತಿಯಾಗಿ ಗಾದೆಮಾತಿನ ಅರ್ಥವಿಸ್ತರಣೆಯನ್ನು ಕುರಿತ ಪ್ರಶ್ನೆಗೆ ಪೀಠಿಕೆ – ಸಾಮಾನ್ಯ ಅರ್ಥ ಸೂಚ್ಯಾರ್ಥ ವಿಶ್ಲೇಷಣೆ ಎಂಬ ಮೂರು ಭಾಗಗಳಲ್ಲಿ ಉತ್ತರ ಬರೆಯುವುದು ಸೂಕ್ತವೆನಿಸುತ್ತದೆ . ಅರ್ಥವಿಶ್ಲೇಷಣೆಯ ಸಂದರ್ಭದಲ್ಲಿ ಕೊಟ್ಟಿರುವ ಗಾದೆಮಾತಿನ ಅರ್ಥವನ್ನೇ ಹೋಲುವ ಕೆಲವು ಪ್ರಸಿದ್ಧ ಹೇಳಿಕೆಗಳನ್ನೋ ಗಾದೆಗಳನ್ನೋ ಅರ್ಥದ ಪುಷ್ಪಕರಣಕ್ಕಾಗಿ ಉಲ್ಲೇಖಿಸಬಹುದಾಗಿದೆ .
ಮೇಲಿನ ವಿವರಣೆಯಲ್ಲಿ ಬೆಳ್ಳಗಿರುವುದೆಲ್ಲ ಹಾಲಲ್ಲ ಮತ್ತು ಹೊಳೆದದ್ದೆಲ್ಲಾ ಬಂಗಾರವಲ್ಲ ಎಂಬ ಎರಡು ಗಾದೆಗಳನ್ನು ಉಲ್ಲೇಖಿಸಿರುವುದನ್ನು ವ್ಯವಹರಿಸುವಾಗ , ಗಮನಿಸಿ . ಇತರರೊಡನೆ ಒಳ್ಳೆಯವರೆಂದೇ ಭಾವಿಸಿ ಅವರ ಮಾತುಗಳನ್ನು ನಂಬುವುದು ತರವಲ್ಲ .
Irulu Kanda Bavige Hagalu Biddanthe
ಎಲ್ಲರನ್ನೂ ಎಷ್ಟೋ ಸಂದರ್ಭಗಳಲ್ಲಿ ಹೀಗೆ ಕಪಟಿಗಳ ಮಾತುವರ್ತನೆಗಳಿಗೆ ಮರುಳಾಗಿ ಹಣ , ಆಸ್ತಿ , ಜೀವನಗಳನ್ನು ಹಾಳುಮಾಡಿಕೊಂಡವರ ಬಗ್ಗೆ ಕೇಳುತ್ತಲೇ ಇರುತ್ತೇವೆ.
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು , ಮೇಲಿನ ಗಾದೆಯ ವಿವರಣೆಯನ್ನೇ ಅನುಸರಿಸಿ , ಈ ಗಾದೆಮಾತುಗಳ ಅರ್ಥವನ್ನು ವಿಸ್ತರಿಸಿ ಬರೆಯಲು ಪ್ರಯತ್ನಿಸಿ ಬೆಳ್ಳಗಿರುವುದೆಲ್ಲ ಹಾಲಲ್ಲ ಹೊಳೆದದ್ದೆಲ್ಲಾ ಬಂಗಾರವಲ್ಲ
ಈಗ , ಕೆಲವು ಗಾದೆಗಳನ್ನು ಸಂಗ್ರಹಿಸಿಕೊಳ್ಳೋಣ. ಈ ಗಾದೆಗಳು ಯಾವ ಯಾವ ವಿಷಯವನ್ನು ಕುರಿತು ರಚಿತವಾಗಿವೆ ಎಂಬುದನ್ನು ಆಧರಿಸಿ , ಕೆಲವು ಗುಂಪುಗಳಾಗಿ ವಿಂಗಡಿಸಿಕೊಳ್ಳೋಣ.
ಯಾವ ವೈಜ್ಞಾನಿಕ ಕ್ರಮವನ್ನೇನೂ ಅನುಸರಿಸಿರುವಂಥದ್ದಲ್ಲ . ಕೇವಲ ನಮ್ಮ ವಿವರಣೆಯ ಅನುಕೂಲಕ್ಕಾಗಿ ಮಾತ್ರ ಮಾಡಿಕೊಂಡದ್ದು . ಆಯಾ ಗುಂಪಿನಲ್ಲಿ ಹಂಚಿದ ಉದಾಹರಣೆಗಳಲ್ಲಿ ಪ್ರಾತಿನಿಧಿಕವಾಗಿ ಕೆಲವು ಗಾದೆಗಳನ್ನು ಆಯ್ದು ಅರ್ಥವನ್ನು ವಿಸ್ತರಿಸಿ ತಿಳಿದುಕೊಳ್ಳಲು ಪ್ರಯತ್ನಿಸೋಣ.
Irulu Kanda Bavige Hagalu Biddanthe
ಇತರೆ ಗಾದೆಮಾತುಗಳನ್ನು ಓದಿ
ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ
ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು