ಭಾರತೀಯ ಸಂವಿಧಾನದ ಪ್ರಶ್ನೋತ್ತರ ಭಾಗ -08

ಭಾರತೀಯ ಸಂವಿಧಾನದ ಪ್ರಶ್ನೋತ್ತರ

ಭಾರತೀಯ ಸಂವಿಧಾನದ ಪ್ರಶ್ನೋತ್ತರ ಭಾಗ -08

1) ಸಾಮಾನ್ಯ ಮಸೂದೆ ಲೋಕ ಸಬೆಯಿಂದ ಪಾಸಾದ ನಂತರ ರಾಜ್ಯ ಸಭೆ ಅನುಮೋದನೆಗೆ ಪ್ರಥಮ ಬಾರಿಗೆ ಬಂದಾಗ ಎಷ್ಟು ತಿಂಗಳ ಕಾಲ ತಡೆ ಹಿಡಿಯಬಹುದು?

 • ಪ್ರಥಮ ಬಾರಿಗೆ ಬಂದಾಗ 4 ತಿಂಗಳು
 • ಎರಡನೇ ಬಾರಿಗೆ ಬಂದಾಗ 2 ತಿಂಗಳು
 • ಈ ಅವಧಿಯಲ್ಲಿ ಯು ರಾಜ್ಯ ಸಭೆ ಮಸೂದೆಗೆ ಅಂಗೀಕಾರ ನೀಡದೆ ಇದ್ದಲ್ಲಿ  108ನೇ ವಿಧಿಯನ್ವಯ ರಾಷ್ಟ್ರಪತಿ ಜಂಟಿ ಅಧಿವೇಶನ ಕರೆಯುವರು

2) ಭಾರತದ ಲ್ಲಿ ಪಾಕೆಟಿಂಗ್ ವೀಟೋ ಚಲಾಯಿಸಲ್ಪಟ್ಟಿದಿಯೆ ಅಥವ ಇಲ್ಲವೆ ?

 • ಹೌದೂ ಒಂದು ಬಾರಿ ಚಲಾಯಿಸಲ್ಪಟ್ಟಿದೆ

3)ರಾಷ್ಟ್ರಪತಿಗಳು ಮಸೂದೆಗೆ ಸಹಿ ಹಾಕುವ ಸಂಧರ್ಭದಲ್ಲಿ ಎಷ್ಟು ಪ್ರಕಾರದ ವಿಟೋ ಅಧಿಕಾರಗಳನ್ನು ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ?

 • 3 ವೀಟೋಗಳು
  1. ಪಾಕೆಟಿಂಗ್ ವಿಟೊ
  2. ಸೂಪರ್/ ಸಸ್ಪೆನ್ಸಿವ್ ವಿಟೊ
  3. ನಿರಂಕುಶ ವಿಟೊ

4)ಸಾಮಾನ್ಯ ಮಸೂದೆಯನ್ನು ರಾಷ್ಟ್ರಪತಿಯವರು ಎಷ್ಟು ಬಾರಿ ತಿರಸ್ಕರಿಸಬಹುದು?

 • 2 ಬಾರಿ
 • 3 ನೇ ಬಾರಿ ಸಹಿ ಹಾಕಲೇಬೇಕು

5)ಒಂದು ಸಾಮಾನ್ಯ ಮಸೂದೆ ಎಂದರೇನು?

 • ಹಣಕಾಸಿನ ವಿಷಯ ಹೊರತುಪಡಿಸಿ ರಚನೆಯಾದ ಮಸೂದೆಯೇ ಸಾಮಾನ್ಯ ಮಸೂದೆ

6)ಮಸೂದೆಯನ್ನು ಮಂಡಿಸುವಾಗ ಎಷ್ಟು ಹಂತದ ವಾಚನಗಳು ,ಪಠಣಗಳು ನಡೆಯುತ್ತವೆ?

 • 3 ವಾಚನಗಳು
 • ಪ್ರಥಮ ವಾಚನ ಈ ಹಂತದಲ್ಲಿ ಮಸೂದೆಗಳನ್ನು ಸಂಬಂದಪಟ್ಟ ಮಂತ್ರಿಗಳು ಮಂಡಿಸುತ್ತಾರೆ
 • ದ್ವಿತೀಯ ವಾಚನ-ಈ ಹಂತದಲ್ಲಿ ಸದನದಲ್ಲಿ ಮಂಡನೆಯಾದ ಮಸೂದೆಗಳ ಕುರಿತು ವಿಸ್ತಾರವಾದ ಚರ್ಚೆ ನಡೆಯುತ್ತದೆ
 • ತೃತೀಯ ವಾಚನ– ಮಂಡನೆಯಾದ ಮಸೂದೆಗೆ ಸದಸ್ಯರಿಂದ ಮತಧಾನ ನಡೆಯುತ್ತದೆ

7) ನಾಕ್ಷತ್ರಿಕ ಪ್ರಶ್ನೆಗಳಲ್ಲಿ ಸ್ಟಾರ್ ಚಿನ್ಹೆ ಬಳಸಲು ಕಾರಣ?

 • ಈ ಪ್ರಶ್ನೆ ಯುಅತ್ಯಂತ ಮಹತ್ವವುಳ್ಳ ವಿಷಯಗಳ ಒಳಗೊಂಡಿರುವೂದರಿಂದ ಅತ್ಯಂತ ಆಕರ್ಷಣೀಯವಾಗಿ ಕಾಣಲೆಂದು

8)ಸದಸ್ಯರು ಮೌಖಿಕವಾಗಿ ಪ್ರಶ್ನೆ ಕೇಳುವುದು ಮತ್ತು ಅದಕ್ಕೆ ಮಂತ್ರಿಗಳು ಮೌಖಿಕವಾಗಿ ಉತ್ತರ ನೀಡುವುದು ಹಾಗೂ ಇಲ್ಲಿ ಕೇಳಲಾದ ಪ್ರಶ್ನೆಗೆ ಉಪ ಪ್ರಶ್ನೆ ಕೇಳಲು ಅವಕಾಶ ಇರುತ್ತದೆ ಇದು ಯಾವ ರೀತಿಯ ಪ್ರಶ್ನೆ ಯ ಮಾದರಿಯಾಗಿದೆ?

 • ನಾಕ್ಷತ್ರಿಕ ಪ್ರಶ್ನೆ

9) ಸದಸ್ಯರು ಲಿಖಿತವಾಗಿ ಪ್ರಶ್ನೆ ಕೇಳುವುದು ಮತ್ತು ಅದಕ್ಕೆ ಮಂತ್ರಿಗಳು ಲಿಖಿತವಾಗಿ ಉತ್ತರ ನೀಡುವುದು ಹಾಗೂ ಇಲ್ಲಿ ಕೇಳಲಾದ ಪ್ರಶ್ನೆಗೆ ಉಪ ಪ್ರಶ್ನೆ ಕೇಳಲು ಅವಕಾಶ ಇರುವುದಿಲ್ಲ ಇದು ಯಾವ ರೀತಿಯ ಪ್ರಶ್ನೆ ಯ ಮಾದರಿಯಾಗಿದೆ?

 • ಅನಕ್ಷತ್ರಿಕ ಪ್ರಶ್ನೆ

10) ಪ್ರಶ್ನೋತ್ತರ ವೇಳೆಯ ಕೊನೆಯ ಹಂತದಲ್ಲಿ ಕೇಳುವ ಪ್ರಶ್ನೆಯ ಮಾದರಿ?

 • ಬೆಳಿಗ್ಗೆ 11 ರಿಂದ 12

12)ಅಧಿವೇಶನ ಪ್ರಾರಂಭವಾಗುವುದಕ್ಕಿಂತ ಮುಂಚೆ ಪೂರ್ವದಲ್ಲಿ ಸದಸ್ಯರು ತಮ್ಮ ಪ್ರಶ್ನೆಗಳನ್ನು ಎಷ್ಟು ಮಾದರಿಯಲ್ಲಿ ಬರೆದು ಸಭಾಪತಿಗೆ ಸಲ್ಲಿಸುತ್ತಾರೆ?

 • A,B,C,D,E 5 ಮಾದರಿಗಳಲ್ಲಿ ಪ್ರಶ್ನೆಗಳ ಬರೆದು ಸಭಾಪತಿಗೆ ಸಲ್ಲಿಸುತ್ತಾರೆ

ನಂತರ ಸಭಾಪತಿಗಳು ಪರಿಶೀಲಿಸಿ ಸಮಸ್ಯಾತ್ಮಕ ಪ್ರಶ್ನೆಗಳಿದ್ದರೆ ತೆಗೆದು ಹಾಕಿ ನಂತರ ಪ್ರಶ್ನೆಗಳನ್ನು ಎರಡು ಮಾದರಿ( ನಾಕ್ಷತ್ರಿಕ ಮತ್ತು ಅನಕ್ಷತ್ರಿಕ) ವಿಂಗಡಿಸುತ್ತಾರೆ

12) ಶೂನ್ಯ ವೇಳೆಯ ಅವಧಿ?

 • 12-1

13) ಶೂನ್ಯ ವೇಳೆಯನ್ನು “ಅನೌಪಚಾರಿಕ ವೇಳೆ” ಎಂದು ಕರೆಯಲು ಕಾರಣ?

 • ಕಾರಣ- ಇಲ್ಲಿ ಚರ್ಚೆ ಮಾಡಿದ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿ ಇರುವುದಿಲ್ಲ

14) ನಿಲುವಳಿ ಸೂಚನೆ ಎಂದರೆನು?

 • ಸದನದಲ್ಲಿ ಕಲಾಪ ನಡೆದಾಗ ದೇಶದಲ್ಲಿ ಗಂಭೀರ ಘಟನೆ ಉಂಟಾದರೆ ಸದನದ ಪೂರ್ವ ನಿಗಧಿತ ಕಾರ್ಯಕ್ರಮ ಗಳ ಮುಂದೂಡಿ ಆ ಘಟನೆಯನ್ನು ಸದನದಲ್ಲಿ ಚರ್ಚೆ ಗೆ ಅವಕಾಶ ನೀಡುವಂತೆ ಆದೇಶಿಸುವುದು

15) ನಿಲುವಳಿ ಸೂಚನೆ ಮಂಡಿಸಬೇಕಾದರೆ ಲೋಕಸಬೆಯ ಎಷ್ಟು ಸದಸ್ಯರು ಸಹಿ ಹಾಕಬೇಕು?

 • 50 ಸದಸ್ಯರು

16) ಅರ್ಧ ಗಂಟೆ ಚರ್ಚೆಯಲ್ಲಿ ಯಾವ ವಿಷಯವನ್ನು ಕುರಿತು ಚರ್ಚಿಸಲು ವಾರದಲ್ಲಿ ಎಷ್ಟು ದಿನ ಮೀಸಲಿಡಲಾಗುತ್ತದೆ?

 • ಸದಸ್ಯರು ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಚರ್ಚೆ ಗೆ ಅವಶ್ಯಕತೆ ಕಂಡು ಬಂದರೆ ಆ ಹೆಚ್ಚಿನ ವಿಷಯ ಚರ್ಚಿಸಲು ವಾರದಲ್ಲಿ 3 ದಿನ ಮೀಸಲು ಇಡಲಾಗುತ್ತದೆ

17) ಅಲ್ಪಾವಧಿಯ ಚರ್ಚೆಯಲ್ಲಿ ಯಾವ ವಿಷಯವನ್ನು ಕುರಿತು ಚರ್ಚಿಸಲು ವಾರದಲ್ಲಿ ಎಷ್ಟು ದಿನ ನಿಗಧಿ ಪಡಿಸಲಿಡಲಾಗಿರುತ್ತದೆ?

 • ಸಂಸತ್ತಿನ ಚರ್ಚಿತ ವಿಷಯಗಳ ಹೊರತುಪಡಿಸಿ ಇನ್ನುಳಿದ ರಾಷ್ಟ್ರೀಯ ಮಹತ್ವದ ವಿಷಯಗಳ ಚರ್ಚಿಸಲು ವಾರದಲ್ಲಿ ಮೂರು ದಿನ ಮೀಸಲಿಡಲಾಗುತ್ತದೆ

18) ಅವಿಶ್ವಾಸ ಗೊತ್ತುವಳಿಯ ಮನವಿ ಸ್ವೀಕರಿಸಿದ ಸಭಾಪತಿ ಎಷ್ಟು ಧಿನಗಳ ಒಳಗಾಗಿ ಅವಕಾಶ ನೀಡುತ್ತಾರೆ?

 • 10 ದಿನಗಳ ಒಳಗಾಗಿ ಅವಕಾಶ ನೀಡುತ್ತಾರೆ ಆಗ ಸದನಲ್ಲಿ ಚುನಾವಣೆ ನಡೆಯುತ್ತದೆ

19) ಎರಡು ಅವಿಶ್ವಾಸ ಗೊತ್ತುವಳಿಗಳ ಮದ್ಯೆ ಎಷ್ಟು ತಿಂಗಳುಗಳ ಅಃತರ ಇರಬೇಕು?

 • 6 ತಿಂಗಳು

20) ನಿರ್ಣಾಯಕ ಮತವನ್ನು ಯಾರು ಯಾವಾಗ ಚಲಾಯಿಸುತ್ತಾರೆ?

 • ಸಭಾಪತಿ

ಅವಿಶ್ವಾಸ ಗೊತ್ತುವಳಿಗೆ ಸಭಾಪತಿ ಅವಕಾಶ ನೀಡಿ ಸದನದಲ್ಲಿ ಚುನಾವಣೆ ನಡೆದ ನಂತರ ಒಂದು ವೇಳೆ ಸಮ ಮತ ಬಿದ್ದರೆ

21) ಸಂವಿಧಾನದ ತಿದ್ದುಪಡಿ ಯಾವ ವಿಧಿಯಮೂಲಕ ಮಾಡಲಾಗುತ್ತದೆ?

 • 368

22) ಸಂವಿಧಾನ ತಿದ್ದುಪಡಿ ಯ ಮೂರು ವಿಧಗಳು ಯಾವುವು ಪ್ರತಿಯೊಂದಕ್ಕು ಉದಾಹರಣೆ?

 • 1)ಸರಳ ತಿದ್ದುಪಡಿ

ಉದಾಹರಣೆ-
ಹೊಸ ರಾಜ್ಯ ರಚನೆ
ರಾಜ್ಯಗಳ ಗಡಿ ನಿರ್ಧಾರ
ಹೊಸ ರಾಜ್ಯಗಳ ಹೆಸರು ಬದಲಾವಣೆ

 • 2) ಕಠಿಣ ತಿದ್ದುಪಡಿ
  ಉದಾಹರಣೆ-
  ಮೂಲಭೂತ ಹಕ್ಕುಗಳ
  ರಾಜ್ಯ ನಿರ್ದೇಶಕ ತತ್ವಗಳ ತಿದ್ದುಪಡಿ
 • 3) ವಿಶೇಷತಿದ್ದುಪಡಿ
  ಉದಾಹರಣೆ-
  ರಾಷ್ಟ್ರಪತಿ ಚುನಾವಣೆ
  ತೆರಿಗೆಗಳಲ್ಲಿ ಬದಲಾವಣೆ
  ನ್ಯಾಯಾಂಗ ವ್ಯವಸ್ಥೆ

ಭಾರತೀಯ ಸಂವಿಧಾನದ ಪ್ರಶ್ನೋತ್ತರ ಭಾಗ -08

23) ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರ ಸಂಖ್ಯೆ?

 • 22 ಸದಸ್ಯರು

ಇದರಲ್ಲಿ
15- ಲೋಕಸಭಾ
7- ರಾಜ್ಯ ಸಭಾ ಸದಸ್ಯರು

24) ಅಂದಾಜು ಸಮಿತಿಯ ಸದಸ್ಯರ ಸಂಖ್ಯೆ?

 • 25 ಸದಸ್ಯರು ಆರಂಭದಲ್ಲಿ ನಂತರ ಅಥವ ಪ್ರಸ್ತುತ 1956 ರಲ್ಲಿ ಸದಸ್ಯರ ಸಂಖ್ಯೆ ಯನ್ನು 30 ಕ್ಕೆ ಏರಿಸಲಾಗಿದೆ

ಇವರೆಲ್ಲ ಲೋಕ ಸಭೆಯ ಸದಸ್ಯರಾಗಿರುತ್ತಾರೆ ಅಂದರೆ ಈ ಸಮಿತಿಯಲ್ಲಿ ರಾಜ್ಯ ಸಭೆಯ ಸದಸ್ಯರಿಗೆ ಅವಕಾಶ ಇರುವುದಿಲ್ಲ

25) ಸಾರ್ವಜನಿಕ ಉದ್ದಿಮೆ ಸಮಿತಿಯ ಸದಸ್ಯರ ಸಂಖ್ಯೆ?

 • 22 ಸದಸ್ಯರು

15- ಲೋಕಸಭೆ
7- ರಾಜ್ಯ ಸಭೆ ಸದಸ್ಯರು

ಅಧಿಕಾರವಧಿ -1 ವರ್ಷ

26) ವ್ಯವಹಾರಗಳ ಕಲಹಾ ಸಮಿತಿ ಅಥವ ಸದನದ ಕಲಾಪಗಳ ಸಲಹಾ ಸಮಿತಿಯ ಸದಸ್ಯರ ಸಂಖ್ಯೆ?

ಎರಡು ಸದನಗಳಲ್ಲಿ ಬೇರೆ ಬೇರೆ ಇರುತ್ತದೆ

ಲೋಕಸಭೆಯಲ್ಲಿ ಸಭಾಪತಿ ಅದ್ಯಕ್ಷತೆಯಲ್ಲಿ 15 ಜನ ಸದಸ್ಯರು

ರಾಜ್ಯಸಭೆಯಲ್ಲಿ ಸಭಾದ್ಯಕ್ಷರ ಅದ್ಯಕ್ಷತೆಯಲ್ಲಿ 11 ಜನ ಸದಸ್ಯರು

27) ಸರ್ಕಾರಗಳ ಭರವಸೆ ಮೇಲಿನ ಸಮಿತಿಯ ಸದಸ್ಯರ ಸಂಖ್ಯೆ?

 • 25 ಸದಸ್ಯರು

ಇದರಲ್ಲಿ
ಲೋಕ ಸಭೆ -15
ರಾಜ್ಯ ಸಭೆ-10 ಸದಸ್ಯರು

ಅಧಿಕಾರವಧಿ 1 ವರ್ಷ

28) ಲೋಕಸಭೆಯ ನಿಯಮಗಳ ಸಮಿತಿಯ ಸದಸ್ಯರ ಸಂಖ್ಯೆ?

 • ಲೋಕಸಭೆಯ ಸಭಾಪತಿಗಳ ಅದ್ಯಕ್ಷತೆಯಲ್ಲಿ 15 ಸದಸ್ಯರು ಇರುತ್ತಾರೆ

29)ರಾಜ್ಯಸಭೆಯ ನಿಯಮಗಳ ಸಮಿತಿಯ ಸದಸ್ಯರ ಸಂಖ್ಯೆ?

 • ರಾಜ್ಯಸಭೆಯ ಸಭಾಪತಿಗಳ ಅದ್ಯಕ್ಷತೆಯಲ್ಲಿ 15 ಸದಸ್ಯರು ಇರುತ್ತಾರೆ

30) ಹಕ್ಕು ಬಾದ್ಯತಾ ಸಮಿತಿಯ ಸದಸ್ಯರ ಸಂಖ್ಯೆ?

 • 25 ಸದಸ್ಯರು

ಇದರಲ್ಲಿ
ಲೋಕಸಭೆ-15
ರಾಜ್ಯ ಸಭೆ-10 ಸದಸ್ಯರು

ಅಧಿಕಾರವಧಿ-1 ವರ್ಷ

ಗಂಗರು ಕರ್ನಾಟಕ ಆಳಿದ ರಾಜಮನೆತನ

ಕವಿಗಳ ಹೆಸರು ಮತ್ತು ಬಿರುದುಗಳು

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -01

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -02

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -03

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -04

Spardhavani App Download Now

Leave a Reply

Your email address will not be published. Required fields are marked *