SSLC Students Good Information For What’s next after SSLC

What's next after sslc

SSLC Students Good Information For What’s next after SSLC

S. S. L. C. ನಂತರ ಮುಂದೇನು?

ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬಿದ್ದಾಕ್ಷಣ ಪಾಲಕರು ವಿದ್ಯಾರ್ಥಿಗಳಲ್ಲಿ ಮುಂದೇನು ಎಂಬ ಪ್ರಶ್ನೆ ಬರುತ್ತದೆ.

ಆದ್ದರಿಂದ ಕೆಳಗೆ ಕೊಟ್ಟಿರುವಂತ ಕೆಲವು ಮಾಹಿತಿಯನ್ನು ತಿಳಿದುಕೊಂಡು ಮುಂದೆ ಏನು ಮಾಡಬೇಕು ಏನು ಮಾಡಿದರೆ ಒಳ್ಳೆಯದು ಎನ್ನುವುದನ್ನು ತೀರ್ಮಾನಿಸಿ.

ಉದ್ಯೋಗಾವಕಾಶಗಳು ಹೆಚ್ಚು ಲಭ್ಯವಾಗುವ ಶಿಕ್ಷಣ ಹಾಗೂ ಕೈ ತುಂಬಾ ಸಂಬಳ ತರುವ ಉದ್ಯೋಗ… ಇವು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು. ಆದರೆ ಶಿಕ್ಷಣದ ಪ್ರತಿಯೊಂದು ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಹೆಜ್ಜೆಗಳು ದಾಖಲಾಗುತ್ತಿರುವ ಈ ಸಂದರ್ಭದಲ್ಲಿ ಆಯ್ಕೆಗಳು, ಅವಕಾಶಗಳು ಹೇರಳವಾಗಿವೆ, ಜತೆಗೆ ಮುಂದಿನ ದಾರಿಯ ಸಹಜವಾದ ಗೊಂದಲ ಹಾಗೂ ದ್ವಂದ್ವಗಳೂ ಇವೆ. 

 ಗೆಳೆಯರು ಸೇರುವ ಕೋರ್ಸ್‌ಗೆ ಸೇರುವುದೋ ಅಥವಾ ಮನೆ ಹತ್ತಿರದ ಈ ಕಾಲೇಜಿಗೆ ಸೇರುವುದೋ? ಎನ್ನುವುದು ವಿದ್ಯಾರ್ಥಿಗಳ ಗೊಂದಲವಿದ್ದರೆ, ಮಕ್ಕಳಿಗೆ ಯಾವ ಶಿಕ್ಷಣ ಕೊಡಿಸಬೇಕು? ಎನ್ನುವುದೇ ಪಾಲಕರ ಎದುರಿಗಿರುವ ಪ್ರಶ್ನೆ. ದುರಂತವೆಂದರೆ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸಾಗಿಸಿಕೊಳ್ಳದೆ ಪ್ರತಿಭೆ ಮತ್ತು ಸೌಲಭ್ಯಗಳಿದ್ದೂ, ವಂಚಿತರಾಗುತ್ತಿದ್ದಾರೆ. ಇವರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಡಂತೂ ಯಾರಿಗೂ ಬೇಡ,ಅದರಿಂದ ಯಾವುದೇ ಕೋರ್ಸು ತೆಗೆದುಕೊಳ್ಳುವಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.ನೀವು ಸರಿಯಾದ ಕಾರಣದಿಂದ ಆಯ್ಕೆ ಮಾಡಿಕೊಂಡಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

ಗುಂಪಿನಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಎಲ್ಲರೂ ಆರಿಸಿಕೊಳ್ಳುವ ಕೋರ್ಸನ್ನು ಆರಿಸಿಕೊಳ್ಳಬೇಡಿ. ಕಾರಣ ಆ ವಿಭಾಗದಲ್ಲಿ ವೃತ್ತಿ ನೈಪುಣ್ಯತೆ ಪಡೆದವರ ಸಂಖ್ಯೆ ಹೆಚ್ಚಾಗಿ ಬೇಡಿಕೆ ಕುಗ್ಗಬಹುದು. 

ವಿದ್ಯಾರ್ಥಿ ದಿಶೆಯ ವಿವಿಧ ಹಂತಗಳಲ್ಲಿ ತಾವು ಆಯ್ದುಕೊಳ್ಳಬೇಕಾದ ವಿಷಯದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಮೊದಲು ಔದ್ಯೋಗಿಕ ಅವಕಾಶಗಳ ಸಾಧ್ಯಾಸಾಧ್ಯತೆಯನ್ನು ಮನಗಂಡು ವಿವೇಚನಾಯುಕ್ತ ತೀರ್ಮಾನಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಸರ್ಕಾರಿ ಕ್ಷೇತ್ರ ಮತ್ತು ಸಾರ್ವಜನಿಕ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ಸೂಕ್ತವಾಗಿ ಆರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಈ ತಪ್ಪುಗಳನ್ನು ಮಾಡಬೇಡಿ
*ಇನ್ನೊಬ್ಬರ ಪ್ರಭಾವ/ಶಿಫಾರಸ್ಸಿನಿಂದ ನಿಮ್ಮ ಶಿಕ್ಷಣದ ಆಯ್ಕೆ ಆಗದಿರಲಿ.
*ಮುಂದೆ ಹೀಗಾಗಬಹುದೆಂಬ ಕನಸಿನೊಂದಿಗೆ career ಆಯ್ಕೆಯಾಗದಿರಲಿ.
*ಪ್ರಸ್ತುತ ಔದ್ಯೋಗಿಕ ಅವಕಾಶವನ್ನು ಗಮನಿಸಿ ಆಮಿಷಕ್ಕೆ ಒಳಗಾಗಬೇಡಿ.
*ನಿಮಗೆ ಸ್ಪಷ್ಟವಾಗದ ಹೊರತು ಯಾವುದನ್ನು ಕೊನೆಗೊಳಿಸಬೇಡಿ.
*ಮಾಧ್ಯಮದಲ್ಲಿ ಪ್ರಕಟವಾದ ವರದಿಗಳಿಂದ ಪ್ರಭಾವಿತರಾಗಬೇಡಿ.
*ಕೋರ್ಸ್, ಕೆರಿಯರ್ ಬಗ್ಗೆ ವಿವರವಾದ ಮಾಹಿತಿ ತಿಳಿಯುವವರೆಗೆ ನಂಬಬೇಡಿ.

 ‘ನಿನ್ನ ಮನಸ್ಸಿಗೆ ಏನು ಮೂಡುತ್ತೋ ಅದನ್ನು ಮಾಡು. ಏನು ಓದಬೇಕು ಎನಿಸುವುದೋ ಅದನ್ನು ಓದು. 

ಪಿಯುಸಿ ಸೇರಿಕೊಳ್ಳುವಿರಾ?
ಇದು ಎರಡು ವರ್ಷದ ಕೋರ್ಸ್ ಆಗಿದ್ದು ಮೊದಲ ವರ್ಷ ಆಯಾಯ ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಎರಡನೇ ವರ್ಷ ಪಿ.ಯು. ಮಂಡಳಿ ಪರೀಕ್ಷೆ ನಡೆಸುತ್ತದೆ. ಎಲ್ಲ ವಿಷಯಗಳು ಪದವಿ ಪೂರ್ವ ವಿಭಾಗದಲ್ಲಿ ಮೂಲಭೂತ ಪರಿಕಲ್ಪನೆ ಹಾಗೂ ಮೂಲ ಘಟಕಗಳಿಗೆ ಸಂಬಂಧಿಸಿದವುಗಳಾಗಿರುತ್ತವೆ.

ಕೋರ್ ವಿಷಯಗಳೊಂದಿಗೆ ಎರಡು ಭಾಷಾ ವಿಷಯ ಕಡ್ಡಾಯ.

ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ನಂತರ ವಾಣಿಜ್ಯ ಹಾಗೂ ಕಲಾ ವಿಭಾಗಕ್ಕೆ ಬದಲಾಯಿಸಿಕೊಳ್ಳಬಹುದು. ಆದರೆ ವಾಣಿಜ್ಯ ವಿಭಾಗವನ್ನು ಆರಿಸಿಕೊಂಡಿದ್ದಲ್ಲಿ ವಿಜ್ಞಾನ ವಿಭಾಗಕ್ಕೆ ಬರಲು ಸಾಧ್ಯವಿಲ್ಲ.

ನೀವು ಪದವಿ ಪೂರ್ವ (ಪಿಯುಸಿ) ಹಂತದಲ್ಲಿ ವಾಣಿಜ್ಯ/ಕಲೆ ವಿಭಾಗವನ್ನು ಆರಿಸಿಕೊಂಡಿದ್ದರೂ ನಿಮಗೆ ಖಂಡಿತ ಉತ್ತಮವಾದ ಭವಿಷ್ಯವಿದೆ.

ಪದವಿಪೂರ್ವ ಶಿಕ್ಷಣದಲ್ಲಿ ಮೂರು ಮುಖ್ಯವಾದ ಅವಕಾಶಗಳಿವೆ. ವಿಜ್ಞಾನ ವಿಭಾ, ವಾಣಿಜ್ಯ ವಿಭಾಗ ಹಾಗೂ ಕಲಾ ವಿಭಾಗ.

ವಿಜ್ಞಾನ ವಿಷಯಗಳಲ್ಲಿ 7 ವಿವಿಧ ಕಾಂಬಿನೇಷನ್‌ಗಳನ್ನು ಪದವಿ ಪೂರ್ವ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು. ಕಲಾ ವಿಭಾಗದಲ್ಲಿ ಸರಿ ಸುಮಾರು 36 ವಿಷಯಗಳಲ್ಲಿ ಹಾಗೂ ವಾಣಿಜ್ಯ ವಿಷಯಗಳಲ್ಲಿ 8 ವಿವಿಧ ಕಾಂಬಿನೇಷನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

ಪದವಿಪೂರ್ವ ಶಿಕ್ಷಣ ತೆಗೆದುಕೊಳ್ಳುವವರ ಗುರಿ ಸ್ಪಷ್ಟವಾಗಿರಬೇಕು. ವೈದ್ಯ ವೃತ್ತಿ ಬಯಸುವವರು ಪಿಸಿಎಂಬಿ ಕಾಂಬಿನೇಷನ್ ತೆಗೆದುಕೊಳ್ಳಬೇಕೆಂಬುದನ್ನು ಮರೆಯದಿರಿ.

ವಿಜ್ಞಾನ-ವಾಣಿಜ್ಯ ಹಾಗೂ ಕಲೆ ತೆಗೆದುಕೊಳ್ಳುವವರು ಗಮನಿಸಬೇಕಾದದ್ದು-

ವಿಜ್ಞಾನ

* ಥಿಯರಿ ಇದೆ 
* ಒತ್ತಡ ಜಾಸ್ತಿ 
* ಕಲಿಸುವ ಶಿಕ್ಷಕರು ಒಳ್ಳೆಯವರಿದ್ದಾಗ್ಯೂ ಹೆಚ್ಚು ಅಂಕ ಗಳಿಸಲು ಮನೆ ಪಾಠದ ಅಗತ್ಯವಿದೆ. 

ವಾಣಿಜ್ಯ 

ಥಿಯರಿ ಇದೆ 
ಸಹಿಸಬಹುದಾದ ಒತ್ತಡ 
ಶಿಕ್ಷಕರು ಚೆನ್ನಾಗಿಲ್ಲದಿದ್ದರೆ ಮಾತ್ರ ಮನೆಪಾಠದ ಅಗತ್ಯ.
ಭೌತ/ರಸಾಯನಶಾಸ್ತ್ರ/ಜೀವಶಾಸ್ತ್ರಗಳಿಗೆ ಪ್ರಾಕ್ಟಿಕಲ್ ರೆಕಾರ್ಡ್ಸ್ ಬರೆಯಬೇಕು.
ಅಕೌಂಟೆನ್ಸಿಗೆ ಅಗತ್ಯವಿದೆ.

ಕಲಾ
ಥಿಯರಿ ಇದೆ 
ಕಡಿಮೆ ಒತ್ತಡ
ಮನೆಪಾಠದ ಅವಶ್ಯಕತೆಯಿಲ್ಲ.
ಕಲಿಸುವ ಶಿಕ್ಷಕರು ಒಳ್ಳೆಯವರಿದ್ದಾಗ ಹೆಚ್ಚು ಅಂಕ ಗಳಿಸುವ ಸಾಧ್ಯತೆ ಇದೆ.

ಬಹುತೇಕ ಕಂಪನಿಗಳಲ್ಲಿ ಎಂಜಿನಿಯರ್‌ಗೆ ಕನಿಷ್ಠ ವಿದ್ಯಾರ್ಹತೆ ಎಂದಿದೆ. ಯಾವುದಾದರೊಂದು ವಿಷಯದಲ್ಲಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನ. ಕಂಪನಿಯ ಲಿಖಿತ ಪರೀಕ್ಷೆಯಲ್ಲಿ ಇಂಟರ್‌ವ್ಯೆ ತೇರ್ಗಡೆ.

 ಬಿಇ, ಬಿಟೆಕ್, ಎಂಟೆಕ್ ಮುಂತಾದ ಪದವಿ ಪಡೆದವರು. ಐಬಿಎಂ ಕಂಪನಿಯ ಮಾನ್ಯತೆ ಪಡೆದ ಅಲೈಟ್ ಇನ್‌ಸ್ಟೆಟ್ಯೂಟ್‌ನಲ್ಲಿ ಮೇನ್ ಫ್ರೇಂ ಅಥವಾ ಮೈಕ್ರೋಸಾಫ್ಟ್‌ನಿಂದ ಮಾನ್ಯತೆ ಪಡೆದ ವಿಂಡೊಸ್ ಎನ್‌ಟಿ ಶಿಕ್ಷಣ ಪಡೆದರೆ ಎಂಜಿನಿಯರ್ ಕ್ಷೇತ್ರದಲ್ಲಿ ಉನ್ನತ ಹಿರಿಯ ಹುದ್ದೆ ಲಭ್ಯ. ಅಂದರೆ ಬಿಇ, ಬಿಟೆಕ್ ಎಂಟೆಕ್, ಮುಂತಾದ ಪದವಿ ಜತೆಗೆ ಕಂಪ್ಯೂಟರ್ ಇಕಾನ್ ಕಂಪನಿಗಳ ಮಾನ್ಯತೆ ಪಡೆದ ಇನ್‌ಸ್ಟಿಟ್ಯೂಟ್‌ಗಳಿಂದ ಪದವಿ ಮತ್ತು ಜಾಣ್ಮೆ ಇದ್ದರೆ ಎಂಜಿನಿಯರ್ ಕ್ಷೇತ್ರದಲ್ಲಿ ಹಿರಿಯ ಹುದ್ದೆ ಉದ್ದೇಶಗಳಲ್ಲಿ ಸುಲಭವಾದ ಅವಕಾಶ.

 ಖಾಸಗಿ ಕಂಪನಿಗಳಲ್ಲಿ ಕ್ಲರ್ಕ್ ಟೈಪಿಸ್ಟ್, ಅಕೌಂಟೆಂಟ್ ಹುದ್ದೆಗೆ ಸೇರಬಯಸುವವರು ವರ್ಡ್‌ಪರ್‌ಫೆಕ್ಟ್, ಎಂಎಸ್ ಆಫೀಸ್, ಎಕ್ಸೆಲ್, ಟ್ಯಾಲಿ ಅಥವಾ ವಿಂಡೋಸ್ ಫಂಡಮೆಂಟಲ್ಸ್ ಗೊತ್ತಿದ್ದರೆ ಉದ್ದೇಶಿತ ಹುದ್ದೆ ಸಿಗುವ ಸಾಧ್ಯತೆ ಇದೆ. ಯಾವುದೆ ಉದ್ಯೋಗಕ್ಕೆ ಅಗತ್ಯವಾದ ಕನಿಷ್ಠ ವಿದ್ಯಾರ್ಹತೆ ಮತ್ತು ಆ ಉದ್ಯೋಗಕ್ಕೆ ಅಗತ್ಯವಾದ ಸಾಫ್ಟ್‌ವೇರ್ ಪ್ಯಾಕೇಜ್ ಬಳಸುವ ಜ್ಞಾನ ಇದ್ದರೆ ಆ ಉದ್ಯೋಗ ಸಿಗುವ ಸಾಧ್ಯತೆ ಇದೆ.

ಗಮನದಲ್ಲಿರಲಿ
* ಒಂದು ವಿಷಯ ಗಮನದಲ್ಲಿಡಿ. ಈ ಯಾವ ಕೆಲಸಗಳನ್ನು ಕಾಲೇಜಿನಲ್ಲಿ ಕಲಿಸುವುದಿಲ್ಲ. ಖಾಸಗಿಯಾಗಿಯೇ ಕಲಿಯಬೇಕು. ಕಂಪನಿಗಳಿಗೆ ನೀವು ಕಂಪ್ಯೂಟರ್ ಎಲ್ಲಿ ಕಲಿತಿರಿ? ಹೇಗೆ ಕಲಿತಿರಿ ಎಂಬುದು ಮುಖ್ಯವಲ್ಲ, ಅವುಗಳಿಗೆ ಅಭ್ಯರ್ಥಿಯ ಕಂಪ್ಯೂಟರ್ ಜ್ಞಾನ ಹಾಗೂ ಜಾಣ್ಮೆ ಮುಖ್ಯ ಅಷ್ಟೆ.

* ಹೊಸ ಕಂಪ್ಯೂಟರ್ ಕೋರ್ಸ್ ಬಂದಾಗ ಇಂದು ಕಲಿತ ಕೋರ್ಸ್ ಹಳೆಯದಾಗಬಹುದು. ಆದರೆ ಮೂಲಭೂತ ಅಂಶಗಳು ಯಾವಾಗಲೂ ಬದಲಾಗುವುದಿಲ್ಲ. ಆದ್ದರಿಂದ ಮೂಲಭೂತ ಅಂಶಗಳನ್ನು ನಿಖರವಾಗಿ ಕಲಿಯಿರಿ. ಮೂಲಭೂತ ಅಂಶಗಳು ಗೊತ್ತಿದ್ದರೆ ಹೊಸದನ್ನು ಪುನಹ ಕಲಿಯುವುದು ಕಷ್ಟವಲ್ಲ. ಆಗ ಪ್ರತಿ ಬಾರಿಯೂ ಹೊಸತು ಬಂದಾಗ ಅದನ್ನು ಕಲಿಯುವುದು ಬೇಕಿಲ್ಲ.

ಅದರಿಂದ ಇಂದಿನ ಪ್ರಪಂಚದಲ್ಲಿ ಎಷ್ಟು ತಿಳಿದುಕೊಂಡರು ಕಡಿಮೆಯೇ ಎನ್ನುವುದನ್ನು ಮರೆಯದಿರಿ.

ಉತ್ತಮ ಆಯ್ಕೆ ನಿಮ್ಮದಾಗಿರಲಿ ಮುಂದಿನ ನಿಮ್ಮ ಭವಿಷ್ಯ ಉಜ್ವಲವಾಗಲಿ.

Leave a Reply

Your email address will not be published. Required fields are marked *