ಹಣದ ಅರ್ಥ ಮತ್ತು ಕಾರ್ಯಗಳು | Hanada Karyagalu In Kannada

ಹಣದ ಕಾರ್ಯಗಳು | Functions Of Money In Kannada Best No1 Information

ಹಣದ ಕಾರ್ಯಗಳು, Functions Of Money In Kannada , hanada karyagalu in kannada, essay on money in kannada, ಹಣದ ಅರ್ಥ ಮತ್ತು ಕಾರ್ಯಗಳು

ಪರಿವಿಡಿ

Functions Of Money In Kannada

ಹಣದ ಅರ್ಥ ಮತ್ತು ಕಾರ್ಯಗಳು ಮತ್ತು ಅದರ ಭಾಗಗಳಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಹಣದ ಕಾರ್ಯಗಳು (functions of money in kannada)

ಹಣವು ಆಧುನಿಕ ಜಗತ್ತಿನಲ್ಲಿ ಮಹತ್ತರವಾದ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಅದು ಇತರೆ ವಸ್ತುಗಳಿಗಿಂತ ಭಿನ್ನವಾದ ಒಂದು ವಸ್ತುವಾಗಿದೆ. ಹಣಕ್ಕೆ ಇತರೆ ವಸ್ತುಗಳನ್ನು ಕೊಳ್ಳುವ ಶಕ್ತಿಯಿದೆ.

ಈ ಲಕ್ಷಣದಿಂದಲೇ ಅದು ಇತರೆ ವಸ್ತುಗಳಿಗಿಂತ ಭಿನ್ನವಾಗಿರುವುದು. ತನ್ನ ಕೊಳ್ಳುವ ಶಕ್ತಿಯ ಲಕ್ಷಣದಿಂದ ಹಣವು ವಿನಿಮಯದ ಮಾಧ್ಯಮವಾಗಿ ಮತ್ತು ಮೌಲ್ಯ ಮಾಪನ ಸಾಧನವಾಗಿ ವ್ಯಾಪಾರ ವ್ಯವಹಾರಗಳನ್ನು ಸುಗಮಗೊಳಿಸುತ್ತದೆ.

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ಹಣದ ಅರ್ಥ

ಹಣಕಾಸು ಅರ್ಥಶಾಸ್ತ್ರದಲ್ಲಿ ‘ಹಣ’ ಎನ್ನುವ ಶಬ್ದದ ಅರ್ಥವು ಇಂದಿಗೂ ಬಗೆಹಲಯದ ಏಷಯವಾಗಿದೆ. ಜಗತ್ತಿನ ಹಿರಿಯರಿಂದ ಹಿಡಿದು ಕಿರಿಯರವರೆಗೆ ಇಂದು ಎಲ್ಲರೂ ಹಣವನ್ನು ಬಳಸುತ್ತಾರೆ, ಆದರೆ ಅವರನ್ನೇನಾದರೂ ಹಣ ಎಂದರೇನು? ಎನ್ನುವ ಪ್ರಶ್ನೆಯನ್ನು ಕೇಳಿದರೆ ಒಂದು ಕ್ಷಣ ತಡಬಡಾಯಿಸಿ ನಿರುತ್ತರರಾಗುತ್ತಾರೆ.

ಅಂದರೆ ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟದ ಕೆಲಸವಾಗಿದೆ. ಉತ್ತರ ಹೇಳಿದರೂ ಕೆಲವರು ವಿಶಾಲ ಅರ್ಥದಲ್ಲಿ ಮತ್ತೆ ಕೆಲವರು ಸಂಕುಚಿತ ಅರ್ಥದಲ್ಲಿ ಅರ್ಥೈಸುತ್ತಾರೆ.

ಕನ್ನಡ ಭಾಷೆಯ “ಹಣ” ಎನ್ನುವ ಶಬ್ದವು ಆಂಗ್ಲ ಭಾಷೆಯ “ಮನಿ” ಎನ್ನುವ ಶಬ್ದದಿಂದ ಬಂದಿದೆ. ಆಂಗ್ಲ ಭಾಷೆಯ “ಮನಿ” ಶಬ್ದವು ಲ್ಯಾಟಿನ್ ಭಾಷೆಯ “ಮೊನೆಟಾ” ಎನ್ನುವ ಶಬ್ದದಿಂದ ಉತ್ಪತ್ತಿಯಾಗಿದೆ. ಲ್ಯಾಟಿನ್ ಭಾಷೆಯಲ್ಲಿ “ಮೊನೆಟಾ” ಎನ್ನುವುದು ರೋಮನ್ ದೇವತೆ “ಜುನೋಳ ಹೆಸರಾಗಿದೆ. “ಜುನೋ” ದೇವತೆಯ ದೇವಸ್ಥಾನದಲ್ಲ ಮೊದಲ ಬಾಲಗೆ ಹಣವನ್ನು ಟಂಕಿಸಿದುದಲಂದ “ಮನಿ” ಎನ್ನುವ ಹೆಸರು ಬಂದಿದೆ.

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ಹಣದ ಕಾರ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು ಅವುಗಳೆಂದರೆ..

1) ಪ್ರಾಥಮಿಕ ಕಾರ್ಯಗಳು : (Primary functions)

2) ಸಹಾಯಕ ಕಾರ್ಯಗಳು : (Secondary functions)

3) ಅವಲಂಬಿ ಕಾರ್ಯಗಳು : (Contingent functions)

4) ಇತರೆ ಕಾರ್ಯಗಳು : (Other functions)

ಪ್ರಾಥಮಿಕ ಕಾರ್ಯಗಳು (Primary functions)

ಪ್ರಾಥಮಿಕ ಕಾರ್ಯಗಳೆಂದರೆ ಪ್ರಮುಖವಾಗಿ ಮತ್ತು ಮೂಲಭೂತವಾಗಿ ಮಾಡಲೇಬೇಕಾದ ಕಾರ್ಯಗಳು, ಹಣದ ಪ್ರಾಥಮಿಕ ಕಾರ್ಯದ ಅವಶ್ಯಕತೆಯನ್ನು ಪೂರೈಸಲು ಹಣವನ್ನು ಅನ್ವೇಷಣೆ ಮಾಡಲಾಯಿತು. ಹಣವು ಪ್ರಮುಖವಾಗಿ ಎರಡು ಪ್ರಾಥಮಿಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವುಗಳೆಂದರೆ:

ವಿನಿಮಯ ಮಾಧ್ಯಮ (Medium of exchange)

ಹಣದ ಪ್ರಮುಖ ಕಾರ್ಯವೆಂದರೆ ವಿನಿಮಯ ಮಾಧ್ಯಮವಾಗಿ ವರ್ತಿಸುವುದು. ವಿನಿಮಯಕ್ಕಾಗಿ ಹಣ ಸರ್ವರಿಂದಲೂ ಸ್ವೀಕೃತವಾಗುವುದರಿಂದ ಅದನ್ನು ಸಾರ್ವತ್ರಿಕ ಕೊಳ್ಳುವ ಶಕ್ತಿ” (Generalised purchasing power) ಎಂದು ಕರೆಯಲ್ಪಡುತ್ತದೆ.

ಸಾಟಿ ಪದ್ಧತಿಯಲ್ಲಿದ್ದ ವಿನಿಮಯದ ಅನೇಕ ದೋಷಗಳನ್ನು ವಿನಿಮಯ ಮಾಧ್ಯಮವಾಗಿ ಹಣವು ಪರಿಹರಿಸಿದೆ ವಿನಿಮಯದಲ್ಲಿ ಹಣವು ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಸರಕು ಸೇವೆಗಳನ್ನು ಹಣಕನ ಮಾರಲಾಗುತ್ತದೆ ಮತ್ತು ಬಂದ ಹಣದಿಂದ ಬೇಕಾದ ಸರಕು ಸೇವೆಗಳನ್ನು ಕೊಂಡುಕೊಳ್ಳಲಾಗುತ್ತದೆ.

ವೈದ್ಯರು, ವಕೀಲರು, ಶಿಕ್ಷಕರು ಮೊದಲಾದವರು ಹಣಕ್ಕಾಗಿ ತಮ್ಮ ಸೇವೆಗಳನ್ನು ಮಾರಿ ತಮಗೆ ಬೇಕಾದುದುನ್ನು ಕೊಂಡುಕೊಳ್ಳುತ್ತಾರೆ, ಯಾವುದೇ ಒಂದು ವಸ್ತುವನ್ನು ಯಾವುದೇ ಒಂದ ಸಮಯದಲ್ಲಿ ಕೊಂಡುಕೊಳ್ಳಲು ಮತ್ತು ಮಾರಾಟ ಮಾಡಲು ಹಣವು ವಿನಿಮಯ ಮಾಧ್ಯಮವಾಗ ಕಾರ್ಯನಿರ್ವಹಿಸುತ್ತದೆ.

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

essay on money in kannada

ಹಣವು ಸರ್ವಸ್ವೀಕೃತವಾದ ವಿನಿಮಯ ಸಾಧನವಾಗಿರುವುದರಿಂದ ಮಾರುವವರ ಮತ್ತು ಕೊಳ್ಳುವವರ ಬಯಕೆಗಳ ಪರಸ್ಪರ ಹೊಂದಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಹಣದ ಈ ಕಾರ್ಯವು ಸಾಟಿ ಪದ್ಧತಿಯ ಮೊದಲನೆಯ ನ್ಯೂನ್ಯತೆಯನ್ನು ಹೋಗಲಾಡಿಸಿದೆ. ಸಾಟಿ ಪದ್ಧತಿಯಲ್ಲಿ ಬಯಕೆಗಳ ಪರಸ್ಪರ ಹೊಂದಾಣಿಕೆಯಾಗಬೇಕು, ಇಲ್ಲದಿದ್ದರೆ ವಸ್ತುಗಳ ವಿನಿಮಯವಾಗುವುದಿಲ್ಲ.

ಆದರೆ ಹಣದ ಪ್ರಪಂಚದಲ್ಲಿ ಹೊಂದಾಣಿಕೆಯ ಅವಶ್ಯಕತೆಯಿಲ್ಲ. A ಎಂಬ ವ್ಯಕ್ತಿ ತನ್ನಲ್ಲಿರುವ ಆಹಾರ ಧಾನ್ಯಗಳನ್ನು ಹಣಕ್ಕೆ ಮಾರಿ ತನಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುತ್ತಾನೆ. ನಮ್ಮಲ್ಲಿರುವ ವಸ್ತುವನ್ನು ಹಣಕ್ಕೆ ಮಾರಿ ನಮಗೆ ಬೇಕಾದ ವಸ್ತುಗಳನ್ನು ಹಣಕೊಟ್ಟು ಕೊಂಡುಕೊಳ್ಳಬಹುದು.

ಹೀಗೆ ಹಣವು ಏನಿಮಯ ಸಾಧನವಾಗಿ ಕಾರ್ಯ ನಿರ್ವಹಿಸುತ್ತ, ರಾಷ್ಟ್ರದಲ್ಲಿ ಉತ್ಪಾದಿತವಾಗುವ ಸರಕು ಸೇವೆಗಳ ವಿನಿಮಯವನ್ನು ಸುಗಮಗೊಳಿಸಿದೆ.

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ಮೌಲ್ಯ ಮಾಪನದ ಸಾಧನ (Measure of value)

ಹಣದ ಸಹಾಯದಿಂದ ಸರಕುಸೇವೆಗಳ ಮೌಲ್ಯವನ್ನು ಅಳೆಯಲು ಸಾಧ್ಯವಾಗುತ್ತದೆ. ಹಣವು ಮೌಲ್ಯ ಮಾಪನದ ಅಳತೆ ಗೋಲಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಪ್ರತಿಯೊಂದು ಸರಕುಸೇವೆಗಳ ಮೌಲ್ಯವನ್ನು ಹಣದ ಮೂಲಕ ಲೆಕ್ಕಾಚಾರ ಮಾಡಬಹುದಾಗಿದೆ.

ಉದಾ:ಗೆ ಒಂದು ಮೇಜಿನ ಬೆಲೆ 800 ರೂ.ಗಳು, ಒಂದು ಕುರ್ಚಿಯ ಬೆಲೆ 400 ರೂ. ಗಳು, ಒಂದು ಪುಸ್ತಕದ ಬೆಲೆ 100 ರೂ. ಗಳು ಇತ್ಯಾದಿ. ಹೀಗೆ ಎಲ್ಲಾ ಸರಕು ಸೇವೆಗಳ ಮೌಲ್ಯವನ್ನು ಹಣದ ಮೂಲಕ ವ್ಯಕ್ತಪಡಿಸಲಾಗುತ್ತದೆ. ಹಣಕ್ಕೆ ಸರ್ವಸಮ್ಮತವಾದ ಮೌಲ್ಯವಿದೆ.

functions of money in kannada

ಆಧುನಿಕ ಪ್ರಪಂಚದಲ್ಲಿ ತೂಕವನ್ನು ಕಿಲೋ ಗ್ರಾಂ (ಕೆ.ಜಿ.) ನಿಂದಲೂ, ಉದ್ದವನ್ನು ಮೀಟರ್‌ನಿಂದಲೂ, ದ್ರವವನ್ನು ಲೀಟರ್‌ನಿಂದಲೂ, ಉಷ್ಣವನ್ನು ಸೆಂಟಿಗ್ರೇಡ್‌ನಿಂದಲೂ ಅಳೆದಂತೆ ಸರಕು ಸೇವೆಗಳ ಮೌಲ್ಯವನ್ನು ಅಳೆಯಲು ಹಣವು ಪ್ರಮುಖ ಅಳತೆಗೋಲಾಗಿದೆ.

ಆದುದರಿಂದ ಹಣವು ಸಾಟಿ ಪದ್ಧತಿಯ ಮೌಲ್ಯ ಮಾಪನ ಕೊರತೆಯ ದೋಷವನ್ನು ನಿವಾರಿಸಿದೆ. ಅಲ್ಲದೆ ಹಣವನ್ನು ಎಷ್ಟು, ಸಣ್ಣ ಪ್ರಮಾಣದಲ್ಲಿಯಾದರೂ ವಿಭಜಿಸಿ ವಿನಿಮಯ ಮಾಡಬಹುದಾದ್ದರಿಂದ ಸಾಟಿಪದ್ಧತಿಯ ವಿಭಜನೆಯ ಸಮಸ್ಯೆಯನ್ನೂ ನಿವಾರಿಸಿದೆ.

ಹಣದ ಮೂಲ ಪರಿಕಲ್ಪನೆಗಳು ಮತ್ತು ಕಾರ್ಯಗಳು

ಹಣದ ವಿನಿಮಯ ಮಾಧ್ಯಮ ಮತ್ತೆ ಮೌಲ್ಯ ಮಾಪನ ಸಾಧನ ಕಾರ್ಯಗಳು ಪರಸ್ಪರ ಪೂರಕವಾಗಿವೆ. ಅವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಈ ಎರಡು ಕಾರ್ಯಗಳು ಹಣದ ಪ್ರಧಾನ ಕಾರ್ಯಗಳಾಗಿದ್ದು ಉಳಿದ ಕಾರ್ಯಗಳು ಈ ಕಾರ್ಯಗಳಿಗೆ ಪೂರಕವಾಗಿವೆ.

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ಸಹಾಯಕ ಕಾರ್ಯಗಳು (Secondary functions)

ಸಹಾಯಕ ಕಾರ್ಯಗಳನ್ನು ಅನುಷಂಗಿಕ ಕಾರ್ಯಗಳು ಅಥವಾ ದ್ವಿತೀಯ ಕಾರ್ಯಗಳೆಂದೂ, ಉಪಕಾರ್ಯಗಳೆಂದೂ ಕರೆಯುತ್ತಾರೆ, ಹಣದ ಸಹಾಯಕ ಕಾರ್ಯಗಳನ್ನು ಮೂರು ವಿಧಗಳಾಗಿ

ವಿಂಗಡಿಸಬಹುದು.

ಅವುಗಳೆಂದರೆ..

a) .ಮೌಲ್ಯದ ಸಂಗ್ರಹಣೆಯ ಸಾಧನ

b) ಮೌಲ್ಕ ವರ್ಗಾವಣೆಯ ಸಾಧನ ಮತ್ತು

c) ಪಾವತಿಯನ್ನು ಮುಂದೂಡುವ ಸಾಧನ

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ಮೌಲ್ಯದ ಸಂಗ್ರಹಣೆಯ ಸಾಧನ (Store of value)

ಸಂಪತ್ತನ್ನು ಸಂಗ್ರಹಿಸಿಡಲು ಹಣವು ಉತ್ತಮ ಸಾಧನವಾಗಿದೆ. ಸಂಪತ್ತನ್ನು ಹಣದ ರೂಪದಲ್ಲಿ ಬಹುಕಾಲದವರೆಗೆ ಶೇಖರಿಸಿಟ್ಟರೂ ಅದು ಹಾಳಾಗುವುದಿಲ್ಲ ಮತ್ತು ಅದರ ಮೌಲ್ಯದಲ್ಲಿ ಬಹಳಷ್ಟು ಒದಲಾವಣೆಯಾಗುವುದಿಲ್ಲ, ಹಣವನ್ನು ಉಳಿಸಿ ನಮ್ಮ ಬಳಿ ಇಟ್ಟುಕೊಳ್ಳಬಹುದು ಅಥವಾ ಬ್ಯಾಂಕಿನಲ್ಲಿಡಬಹುದು ಅಥವಾ ಬಂಡವಾಳ ಪತ್ರಗಳಲ್ಲಿ ತೊಡಗಿಸಬಹುದು.

ಉದಾ ಗ 10,000 ರೂ. ಗಳನ್ನು ಉಳಿತಾಯ ಮಾಡಿ ಬ್ಯಾಂಕಿನಲ್ಲಿಟ್ಟರೆ ಅದನ್ನು ಬೇಕಾದಾಗ ಬಳಸಬಹುದು. ಈ ರೀತಿ ಶೇಖರಿಸಿಟ್ಟಿ, ಹಣವು ನಾಶವಾಗಲಾರದು. ಬ್ಯಾಂಕಿನಲ್ಲಿಟ್ಟ ಹಣ ಬಡ್ಡಿಯನ್ನು ಗಳಿಸುತ್ತದೆ. ಬಂಡವಾಳ ಪತ್ರದಲ್ಲಿ ತೊಡಗಿಸಿದ ಹಣ ಲಾಭವನ್ನು ಗಳಿಸುತ್ತದೆ.

ಆದರೆ ಹಣ್ಣು, ತರಕಾರಿ, ಹಾಲು, ಆಹಾರಧಾನ್ಯ, ಪ್ರಾಣಿಗಳ ರೂಪದಲ್ಲಿ ಸಂಪತ್ತನ್ನು ಸಂಗ್ರಹಿಸಿಟ್ಟರೆ ಅವು ಹಾಳಾಗುತ್ತವೆ ಮತ್ತು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಅವುಗಳು ಬಹುಕಾಲ ಬಾಳಿಕೆ ಬರುವುದಿಲ್ಲ. ಹಣವು ನಾಶವಾಗದ ವಸ್ತುವಾಗಿರುವುದರಿಂದ ಮತ್ತು ದೀರ್ಘಕಾಲದವರೆಗೆ ಅದರ ಮೌಲ್ಯವು ಸ್ಥಿರವಾಗಿರುವುದರಿಂದ ಹಣದ ರೂಪದಲ್ಲಿ ಸಂಪತ್ತನ್ನು ಸಂಗ್ರಹಿಸಿಡಬಹುದು, ಹಣವು ದ್ರವ್ಯ ಸಂಪತ್ತಾಗಿರುವುದರಿಂದ ಅದರ ನೆರವಿನಿಂದ ಯಾವ ಸಮಯದಲ್ಲಿಯಾದರೂ ಯಾವ ವಸ್ತುವನ್ನು ಬೆರಾದರೂ ಕೊಂಡುಕೊಳ್ಳಬಹುದು.

ಆದ್ದರಿಂದ ದಿನನಿತ್ಯದ ವ್ಯವಹಾರವನ್ನು ನಡೆಸಲು ಮತ್ತು ವ್ಯದಲ್ಲಿ ಬರಬಹುದಾದ ಅಪತ್ಕಾಲವನ್ನು ಎದುರಿಸಲು ಹಣವನ್ನು ಸಂಗ್ರಹಿಸಿಡಲಾಗುತ್ತದೆ. ಈ ಕಾರ್ಯವು ಉಳಿತಾಯ ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ.

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ಮೌಲ್ಯ ವರ್ಗಾವಣೆಯ ಸಾಧನ (Transfer of value)

ಹಣವು ಮೌಲ್ಯವನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವರ್ಗಾಯಿಸುವ ಮೂಲ ಸಾಧನವಾಗಿದೆ. ಹಣವು ಎಲ್ಲರಿಂದಲೂ ಸ್ವೀಕರಿಸಲ್ಪಡುವುದರಿಂದ ಒಂದು ಪ್ರದೇಶದಲ್ಲಿದ್ದ ಆಸ್ತಿಪಾಸ್ತಿಗಳನ್ನು ಹಣಕ್ಕೆ ಮಾರಾಟ ಮಾಡಿ ಇನ್ನೊಂದು ಪ್ರದೇಶದಲ್ಲಿ ಅದೇ ಹಣದಿಂದ ಆಸ್ತಿಪಾಸ್ತಿಗಳನ್ನು ಕೊಂಡುಕೊಳ್ಳಬಹುದಾಗಿದೆ.

ಆದ್ದರಿಂದ ಬಹು ದೂರದ ಸ್ಥಳಕ್ಕೆ ಮೌಲ್ಯವನ್ನು ವರ್ಗಾಯಿಸಲು ಹಣವು ಅತ್ಯುತ್ತಮ ಸಾಧನವಾಗಿದೆ. ಬ್ಯಾಂಕ್‌ಗಳ ಮೂಲಕ ಕೋಟಿಗಟ್ಟಲೆ ಹಣವನ್ನು ಅತಿ ಕಡಿಮೆ ವೆಚ್ಚದಲ್ಲಿ ಸುರಕ್ಷಿತವಾಗಿ, ಸುಲಭವಾಗಿ ದೇಶವಿದೇಶಗಳಿಗೆ ಕಳುಹಿಸಿಕೊಡಬಹುದು. ಒಂದು ವೇಳೆ ಮೌಲ್ಯವು ಸರಕುಗಳ ಅಥವಾ ಪ್ರಾಣಿಗಳ ರೂಪದಲ್ಲಿ ದ್ವಿದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದು ಸುಲಭವಾಗುತ್ತಿರಲಿಲ್ಲ. ಹಣವು ಮೌಲ್ಯ ವರ್ಗಾವಣೆಯ ಸುಲಭ ಸಾಧನವಾಗಿದೆ.

ಪಾವತಿಯನ್ನು ಮುಂದೂಡುವ ಸಾಧನ (Standard of deferred payments)

ಹಣವು ಲೆಕ್ಕಪತ್ರಗಳನ್ನು ಇಡಲು ಮತ್ತು ಸಾಲದ ವ್ಯವಹಾರವನ್ನು ನಡೆಸಲು ಉಪಯುಕ್ತ ಸುಲಭ ಸಾಧನವಾಗಿದೆ. ಯಾರಿಗೆ ಬೇಕಾದರೂ ಇಂದು ಸಾಲ ಕೊಟ್ಟು ಮುಂದಿನ ದಿನಗಳಲ್ಲಿ ಮರಳಿ ಪಡೆಯಬಹುದಾಗಿದೆ, ಅಂತೆಯೇ ಹಣದ ಕಾರ್ಯವು ಆಧುನಿಕ ವ್ಯಾಪಾರ ವ್ಯವಹಾರಗಳನ್ನು ಸುಗಮಗೊಳಿಸಿದೆ.

ವಸ್ತುಗಳನ್ನು ಈಗ ಕೊಂಡುಕೊಂಡು ಅದಕ್ಕೆ ಪಾವತಿಯನ್ನು ನಂತರ ಮಾಡುವ ವ್ಯವಸ್ಥೆ ರೂಢಿಯಲ್ಲಿದೆ. ಆದ್ದರಿಂದ ಹಣವು ಪಾವತಿಯನ್ನು ಮುಂದೂಡುವ ಸಾಧನವಾಗಿದೆ. ಅಂದರೆ ಈಗ ಪಾವತಿಸುವ ಬದಲು ಮುಂದೆ ಪಾವತಿಸಲು ಹಣ ಸಹಕಾರಿಯಾಗುತ್ತದೆ. ಈ ರೀತಿಯ ವ್ಯವಸ್ಥೆ ಸಾಟಿ ಪದ್ಧತಿಯಲ್ಲಿ ಸಾಧ್ಯವಿಲ್ಲದ ಕಾರಣ ಹಣ ಪ್ರಖ್ಯಾತಿಗೆ ಬಂದಿತು. ಸಾಟಿ ಪದ್ಧತಿಯಲ್ಲಿ ವಸ್ತುಗಳ ರೂಪದಲ್ಲಿ ಮುಂದಿನ ದಿನಗಳಲ್ಲಿ ಪಾವತಿಸಿದರೆ ಅವುಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ.

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ಅವಲಂಬಿ ಕಾರ್ಯಗಳು (Contingent functions)

ಮೇಲೆ ವಿವರಿಸಿದ ಪ್ರಾಥಮಿಕ ಹಾಗೂ ಸಹಾಯಕ ಕಾರ್ಯಗಳೊಂದಿಗೆ ಹಣವು ಅನೇಕ ಅವಲಂಬಿ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವಲಂಬ ಕಾರ್ಯಗಳನ್ನು ಪ್ರೊ. ಕಿನ್ನೆಯವರು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ಕಿನ್ನೆಯವರ ಪ್ರಕಾರ ಈ ಕಾರ್ಯಗಳು ವಿಶೇಷವಾಗಿ ಮುಂದುವರಿದ ಸಮಾಜದಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳೆಂದರೆ:

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ರಾಷ್ಟ್ರೀಯ ಆದಾಯದ ವಿತರಣೆ

ರಾಷ್ಟ್ರೀಯ ಆದಾಯ ಅಥವಾ ಉತ್ಪನ್ನವು, ಉತ್ಪಾದನಾಂಗಗಳ ಪ್ರಯತ್ನವಾಗಿದೆ. ಈ ರಾಷ್ಟ್ರೀಯ ಉತ್ಪನ್ನವನ್ನು ವಿವಿಧ ಉತ್ಪಾದನಾಂಗಗಳು ಹೇಗೆ ಹಂಚಿಕೊಳ್ಳಬೇಕೆಂಬುದು ಒಂದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಯನ್ನು ಹಣವು ಸುಲಭವಾಗಿ ನಿವಾರಿಸುತ್ತದೆ.

ಗೇಣಿ, ಕೂಲಿ, ಬಡ್ಡಿ ಮತ್ತು ಲಾಭಗಳ ಮೂಲಕ ರಾಷ್ಟ್ರೀಯ ಉತ್ಪನ್ನವನ್ನು ವಿತರಿಸಲಾಗುವುದು, ಹಣದ ರೂಪದಲ್ಲಿ ಬಿಟ್ಟರೆ ಇದನ್ನು ಬೇರೆ ಯಾವ ರೂಪದಲ್ಲಿಯೂ ಸಮರ್ಪಕವಾಗಿ ವಿತರಿಸಲಾಗುವುದಿಲ್ಲ. ಹೀಗೆ ರಾಷ್ಟ್ರೀಯ ಆದಾಯವನ್ನು ಸಮರ್ಪಕವಾಗಿ ಹಂಚಲು ಹಣವು ನೆರವಾಗುತ್ತದೆ.

ಸೀಮಾಂತ ತುಷ್ಟಿಗುಣದ ಸಮಾನತೆ (Equalisation of marginal utility)

ಹಣವನ್ನು ಯಾವ ಕಾರ್ಯಕ್ಕೆ (ಉದ್ದೇಶ) ಬೇಕಾದರೂ ಬಳಸಿಕೊಳ್ಳಬಹುದಾಗಿದೆ, ಆದ್ದರಿಂದ ಪ್ರತಿಯೊಬ್ಬರು ತಮ್ಮ ಹಣವನ್ನು ಖರ್ಚು ಮಾಡುವಾಗ ಜಾಗ್ರತೆಯಿಂದಿರುತ್ತಾರೆ, ತಾವು ಕೂಡುವ ಹಣಕ್ಕೆ ಪ್ರತಿಯಾಗಿ ಗರಿಷ್ಟ ತೃಪ್ತಿಯನ್ನು ಪಡೆಯಲು ಇಚ್ಛೆ ಪಡುತ್ತಾರೆ.

ಅನುಭೋಗಿಯು ವಿವಿಧ ವಸ್ತುಗಳಿಗೆ ಕೊಡುವ ಬೆಳೆಗಳು (ಹಣವ) ಮತ್ತು ಅವುಗಳಿಂದ ಪಡೆಯುವ ಸೀಮಾಂತ ತುಷ್ಟಿಗುಣವು ಸಮನಾಗಿದ್ದರೆ ಗರಿಷ್ಠ ತೃಪ್ತಿಯನ್ನು ಪಡೆಯಬಹುದು, ಗರಿಷ್ಠ ತೃಪ್ತಿಯನ್ನು ಪಡೆಯಬೇಕಾದರೆ ಬೇರೆ ಬೇರೆ ವಸ್ತುಗಳಿಂದ ಬರುವ ಸೀಮಾಂತ ತುಷ್ಟಿಗುಣವು ಸಮಾನಾಗಿರಬೇಕು, ಗುಪ್ತ ತುಷ್ಟಿಗುಣವನ್ನು ಹೊಂದಿದ ನಂತರ ಸೀಮಾಂತ ತುಷ್ಟಿಗುಣ ಕಡಿಮೆಯಾಗುತ್ತದೆ. ಆದ್ದರಿಂದ ಅನುಭೋಗಿಯು ಸೀಮಾಂತ ತುಷ್ಠಿ ಗುಣವನ್ನು ಸಮ ಮಾಡಿಕೊಂಡು ಗರಿಷ್ಟ ತೃಪ್ತಿಯನ್ನು ಪಡೆಯಲು ಹಣವು ಸಹಾಯವಾಗುತ್ತದೆ.

ಹಾಗೆಯೇ ಉತ್ಪಾದಕರು ಉತ್ಪಾದನಾಂಗಗಳಾದ ಭೂಮಿ, ಶ್ರಮ, ಬಂಡವಾಳ ಹಾಗೂ ಸಂಘಟನೆಗಳನ್ನು ಅವುಗಳ ಸೀಮಾಂತ ಉತ್ಪಾದಕತೆ ಸಮನಾಗುವ ತನಕ ನೇಮಕ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಈ ರೀತಿ ಹಣವು ಗ್ರಾಹಕರಿಗೂ ಮತ್ತು ಉತ್ಪಾದಕರಿಗೂ ಸಮಪ್ರಮಾಣದ ತೃಪ್ತಿಯನ್ನು ಹೊಂದಲು ಸಹಾಯವಾಗುತ್ತದೆ.

helicopter money suddidina
ಹಣದ ಕಾರ್ಯಗಳು | Functions Of Money In Kannada Best No1 Information

ಸಾಲದ ವ್ಯವಸ್ಥೆಗೆ ಆಧಾರ (Basis of eredit)

ಹಣವು ಸಾಲದ ವ್ಯವಸ್ಥೆಗೆ ಆಧಾರವಾಗಿದೆ. ಆಧುನಿಕ ಅರ್ಥವ್ಯವಸ್ಥೆಯು ಸಾಲದ ಅರ್ಥವ್ಯವಸ್ಥೆ (Credit economy) ಎಂದೇ ಹೆಸರಾಗಿದೆ. ಹಣವು ಪಾವತಿಯ ವಾಗ್ದಾನವಾಗಿರುವುದರಿಂದ ಅದು ಸಾಲದ ಅರ್ಥವ್ಯವಸ್ಥೆಯ ಮುಂದುವರಿಕೆಗೆ ಸಹಾಯವಾಗುತ್ತವೆ.

ಪ್ರತಿಯೊಂದು ನೋಟಿನಲ್ಲಿಯೂ ಬೇಡಿಕೆಯ ಮೇಲೆ…… ರೂಪಾಯಿಗಳನ್ನು ಕೊಡುತ್ತೇನೆಂದು aat and since” (I promise to pay the bearer a sum of Rs………on demand) ಎಂದು ಮುದ್ರಿಸಲಾಗಿರುತ್ತದೆ. ಆದ್ದರಿಂದ ಎಲ್ಲಾ ವ್ಯವಹಾರಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ಮೂಡಿಸುವ ಕಾರ್ಯದಲ್ಲಿ ಹಣವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಾಮಾನ್ಯ ಹಣದ ಪೂರೈಕೆಯಲ್ಲಿ ವ್ಯತ್ಯಾಸವಾದಂತೆ ಸಾಲದ ಹಣದ ಗಾತ್ರದಲ್ಲಿ ವ್ಯತ್ಯಾಸವಾಗುತ್ತದೆ.

images 16 1
ಹಣದ ಕಾರ್ಯಗಳು | Functions Of Money In Kannada Best No1 Information

ಸಂಪತ್ತಿನ ದ್ರವ್ಯತೆ ಮತ್ತು ಏಕರೂಪತೆ (Liquidity and uniformity of wealth)

ಹಣವನ್ನು ತಕ್ಷಣದಲ್ಲಿ ಸುಲಭವಾಗಿ ಯಾವುದೇ ಸಂಪತ್ತಿಗೆ ಬೇಕಾದರೂ ಪರಿವರ್ತಿಸಬಹುದು. ನವು ತಾನಿರುವ ಪಾತ್ರೆಯ ಆಕಾರವನ್ನು ಪಡೆಯುವಂತೆ ಹಣವು ಆಸ್ತಿಪಾಸ್ತಿಗಳ ರೂಪವನ್ನು ಇಳುತ್ತದೆ. ಇದಕ್ಕೆ ದ್ರವ್ಯತೆಯೆಂದು ಹೆಸರು. ಅಂತೆಯೇ ಹಣವನ್ನು ಇತರ ಎಲ್ಲಾ ಪ್ರಕಾರದ ಸ್ತಿಗಳಿಗೂ ಪರಿವರ್ತಿಸಬಹುದಾದ್ದರಿಂದ ಅದು ಏಕರೂಪದ ಗುಣವನ್ನು ಹೊಂದಿರುತ್ತದೆ.

ಆದರೆ ಡ, ಯಂತ್ರ, ಪೀಠೋಪಕರಣ ಇತ್ಯಾದಿ ಆಸ್ತಿಗಳನ್ನು ತಕ್ಷಣ ಹಣಕ್ಕೆ ಪರಿವರ್ತಿಸಲು ಅಥವಾ ರಸ್ಪರ ವಿನಿಮಯ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವುಗಳು ದ್ರವ್ಯತೆಯನ್ನು ಮತ್ತು ಕರೂಪತೆಯನ್ನು ಹೊಂದಿಲ್ಲ. ಆದ್ದರಿಂದ ಜನರು ತಮ್ಮ ಸಂಪತ್ತನ್ನು ಹಣದ ರೂಪದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ.

ಕೇನ್ಸ್‌ ರವರು ಹಣದ ಈ ಗುಣವನ್ನು ನಗದು ದ್ರವ್ಯದೊಲವ (Liquidity preference) ಎಂದು ಕರೆದಿದ್ದಾರೆ ಮತ್ತು ಈ ರೀತಿಯಾಗಿ ಹಣವು ಎಲ್ಲಾ ವಿಧಾನ ಸಂಪತ್ತಿಗೂ ದ್ರವ್ಯತೆಯನ್ನು ಮತ್ತು ಏಕರೂಪತೆಯನ್ನೂ ಒದಗಿಸುತ್ತದೆ.

images 19 2
ಹಣದ ಕಾರ್ಯಗಳು | Functions Of Money In Kannada Best No1 Information

ಇತರ ಕಾರ್ಯಗಳು (Miscellaneous functions)

ಮೇಲೆ ವಿವರಿಸಿದ ಪ್ರಾಥಮಿಕ, ಸಹಾಯಕ, ಮತ್ತು ಅವಲಂಬಿತ ಕಾರ್ಯಗಳ ಜೊತೆಗೆ ಹಣವು ಇನ್ನೂ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವುಗಳನ್ನು ಹಣದ ಇತರೆ ಕಾರ್ಯಗಳಂದು ಕರೆಯುತ್ತಾರೆ. ಹಣದ ಇತರ ಕಾರ್ಯಗಳೆಂದರೆ :

ಮರುಪಾವತಿಯ ಸಾಮರ್ಥ್ಯ (Repaying capacity)

ಹಣವು ಸರ್ವಸಮ್ಮತವಾದ ವಿನಿಮಯ ಸಾಧನವಾಗಿದೆ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ಅಥವಾ ಸಂಸ್ಥೆ ಸ್ವಲ್ಪ ನಗದು ಹಣವನ್ನು ತನ್ನ ಬಳಿ ಇಟ್ಟುಕೊಳ್ಳಲೇ ಬೇಕಾಗುತ್ತದೆ. ಹೀಗೆ ಮಾಡುವುದರಿಂದ ಆ ವ್ಯಕ್ತಿ ಅಥವಾ ಸಂಸ್ಥೆಯು ತನ್ನ ಪಾವತಿಯ ಸಾಮರ್ಥ್ಯವನ್ನು ಕಾಯ್ದುಕೊಳ್ಳಬಹುದಾಗಿದೆ. ಅದರಂತೆ ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಸರಕಾರಗಳು ತಮ್ಮ ಮರುಪಾವತಿಯ ಸಾಮರ್ಥ್ಯವನ್ನು ದೃಢೀಕರಿಸಲು ನಗದು ಹಣವನ್ನು ಯಾವಾಗಲೂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗುತ್ತದೆ.

ಹಣದ ಕಾರ್ಯಗಳು | Functions Of Money In Kannada Best No1 Information
ಹಣದ ಕಾರ್ಯಗಳು | Functions Of Money In Kannada Best No1 Information

ಸಾರ್ವತ್ರಿಕ ಕೊಳ್ಳುವ ಶಕ್ತಿ (General purchasing power)

ಹಣವು ಯಾವುದೇ ವಸ್ತುವನ್ನು ತಕ್ಷಣ ಕೊಳ್ಳುವ ಶಕ್ತಿಯನ್ನು ಹೊಂದಿದೆ. ಅಂದರೆ ಅದು ಸಾರ್ವತ್ರಿಕ ಕೊಳ್ಳುವ ಶಕ್ತಿಯನ್ನು ಹೊಂದಿದೆ. ಹಣವು ಎಲ್ಲಾ ಸರಕುಗಳನ್ನು ಕೊಳ್ಳುವ ಸಾಧನವಾಗಿದೆ. ನಗದು ಹಣವಿದ್ದರೆ ಯಾವುದೇ ಸರಕನ್ನು ಯಾವುದೇ ಸಮಯದಲ್ಲಿ ಬೇಕಾದರೂ ಕೊಂಡುಕೊಳ್ಳಬಹುದು. c) ಬಂಡವಾಳದ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ : (Increase in the productive capacity capital)

Hanada Karyagalu Information In Kannada In Kannada

ಬಂಡವಾಳವು ಅನೇಕ ರೂಪದಲ್ಲಿರುತ್ತದೆ, ಹಣವೂ ಸಹ ಬಂಡವಾಳದ ಒಂದು ರೂಪವಾಗಿದೆ. ಅಂದರೆ ನಗದು ಹಣದ ರೂಪದಲ್ಲಿದ್ದ ಬಂಡವಾಳವನ್ನು ಯಾವ ಉದ್ದೇಶಕ್ಕೆ ಬೇಕಾದರೂ ಬಳಸಬಹುದು. ಉದಾಹರಣೆಗೆ ಹಣವನ್ನು ಕಡಿಮೆ ಆದಾಯ ತರುವ ಆಸ್ತಿಗೆ ಬದಲಾಗಿ ಹೆಚ್ಚು ಆದಾಯ ತರುವ ಆಸ್ತಿಯನ್ನು ಕೊಳ್ಳಲು ಇಲ್ಲವೆ ಅಧಿಕ ಆದಾಯ ತರುವ ವ್ಯವಹಾರದಲ್ಲಿ ಏನಿಯೋಗಿಸಬಹುದು, ಅಂದರೆ ನಗದು ಹಣವನ್ನು ಅಧಿಕ ಆದಾಯ ತರುವ ಯಾವುದೇ ಆಸ್ತಿಯಲ್ಲಿ ಬೇಕಾದರೂ ವಿನಿಯೋಗಿಸಬಹುದು. ಇದು ಬಂಡವಾಳದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

FAQ

ಹಣ ಪದದ ಅರ್ಥ

ಕನ್ನಡ ಭಾಷೆಯ “ಹಣ” ಎನ್ನುವ ಶಬ್ದವು ಆಂಗ್ಲ ಭಾಷೆಯ “ಮನಿ” ಎನ್ನುವ ಶಬ್ದದಿಂದ ಬಂದಿದೆ

ಆಂಗ್ಲ ಭಾಷೆಯಲ್ಲಿ

ಆಂಗ್ಲ ಭಾಷೆಯ “ಮನಿ” ಶಬ್ದವು ಲ್ಯಾಟಿನ್ ಭಾಷೆಯ “ಮೊನೆಟಾ” ಎನ್ನುವ ಶಬ್ದದಿಂದ ಉತ್ಪತ್ತಿಯಾಗಿದೆ. ಲ್ಯಾಟಿನ್ ಭಾಷೆಯಲ್ಲಿ “ಮೊನೆಟಾ” ಎನ್ನುವುದು ರೋಮನ್ ದೇವತೆ “ಜುನೋಳ ಹೆಸರಾಗಿದೆ.

ಇತರೆ ವಿಷಯಗಳು

Leave a Reply

Your email address will not be published. Required fields are marked *