ಸಿರಿಯನಿನ್ನೇನ ಬಣ್ಣಿಪೆನು, ಪ್ರಶ್ನೋತ್ತರಗಳು, siriyaninnena bannipenu kannada poem notes, siriyaninnena bannipenu kannada poem summary, siriyaninnena bannipenu kannada poem, siriyaninnena bannipenu kannada poem, siriyaninnena bannipenu kannada poem saramsha, ಸಿರಿಯನಿನ್ನೇನ ಬಣ್ಣಿಪೆನು notes, ಸಿರಿಯನಿನ್ನೇನ ಬಣ್ಣಿಪೆನು question and answer, ಸಿರಿಯನಿನ್ನೇನ ಬಣ್ಣಿಪೆನು ಪ್ರಶ್ನೋತ್ತರಗಳು, ಸಿರಿಯನಿನ್ನೇನ ಬಣ್ಣಿಪೆನು notes pdf, ಸಿರಿಯನಿನ್ನೇನ ಬಣ್ಣಿಪೆನು ಕನ್ನಡ ನೋಟ್ಸ್
ಸಿರಿಯನಿನ್ನೇನ ಬಣ್ಣಿಪೆನು Siriyaninnena Bannipenu Kannada Poem Notes
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ ?
ಭರತ ಚಕ್ರವರ್ತಿಯು ಸೂರ್ಯೋದಯ ಸಮಯದಲ್ಲಿ ಎದ್ದು ದೇವತಾರ್ಚನೆಯನ್ನು ಮಾಡಿ ಓಲಗಕ್ಕೆ ಬರುತ್ತಾನೆ .
ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಯಾವುವು ?
ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಸ್ವರ್ಗಲೋಕ ಮೃತ್ಯುಲೋಕ ಮತ್ತು ಪಾತಾಳ ಲೋಕಗಳು .
ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು ?
ಆಸ್ಥಾನ ಭವನದೊಳಗೆ ರಾಜನು ದೇವೇಂದ್ರನಂತೆ ಶೋಭಿಸುತ್ತಿದ್ದನು .
ತುಂಬಿದ ಸಭೆಯು ಮೈಮರೆತು ಕಾತುರರಾಗಿದ್ದುದಕ್ಕೆ ಕಾರಣವೇನು ?
ಭರತ ಚಕ್ರವರ್ತಿಯನ್ನು ನೋಡಲು ತುಂಬಿದ ಸಭೆಯು ಮೈಮರೆತು ಕಾತುರವಾಗಿತ್ತು .
ಭರತೇಶವೈಭವ ಕಾವ್ಯದ ಕರ್ತೃ ಯಾರು ?
ಭರತೇಶವೈಭವ ಕಾವ್ಯದ ಕರ್ತೃ ರತ್ನಾಕರವರ್ಣಿ
ಕೊಟ್ಟಿರುವ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿ .
ಭರತ ಚಕ್ರವರ್ತಿ ಓಲಗಮಂಟಪವನ್ನೇರಿದ ಸಂದರ್ಭವನ್ನು ಬಣ್ಣಿಸಿ .
ಭರತನು ಇಡೀ ಭೂಮಂಡಲವನ್ನೇ ಗೆದ್ದು ಪ್ರಥಮಚಕ್ರವರ್ತಿ ಎಂದು ಪ್ರಸಿದ್ಧಿಯಾಗುತ್ತಾನೆ . ಇವನು ವೈಭವದಿಂದ ರಾಜ್ಯಭಾರ ಮಾಡುತ್ತಿದ್ದನು .
ಇಂತಹ ಭರತ ಚಕ್ರವರ್ತಿ ಪ್ರತಿದಿನ ಸೂರ್ಯೋದಯದೊಂದಿಗೆ ಎದ್ದು ಸ್ನಾನ ಮಾಡಿ , ದೇವರ ಪೂಜೆಮಾಡಿ , ರಾಜಸಭೆಗೆ ನಡೆದ ಬರುವ ದೃಶ್ಯ ವೈಭವದಿಂದ ಕೂಡಿದೆ .
ನವರತ್ನಗಳಿಂದ ಹಾಗೂ ಬಂಗಾರದಿಂದ ನಿರ್ಮಾಣವಾಗಿದ್ದ ಅಸ್ಥಾನಭವನದಲ್ಲಿ ಭರತ ಚಕ್ರವರ್ತಿ ಸ್ವರ್ಗ ಲೋಕದ ದೇವೇಂದ್ರನಂತೆ ಕಂಗೊಳಿಸುತ್ತಿದ್ದನು .
ಧ್ಯಾನ ಬೇಸರಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ ?
ಕವಿ ರತ್ನಾಕರವರ್ಣಿಯ “ ಗುರುವೇ ಧ್ಯಾನಮಾಡುವುದಕ್ಕೆ ಬೇಸರವಾದಾಗ ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ . ಆ ಕತೆಯ ನಾಯಕ ನೀವೇ , ಅದಕ್ಕೆ ಅಪ್ಪಣೆ ನೀಡಬೇಕು , ಆಶೀರ್ವಾದಿಸಬೇಕು . ಎಂದು ಹೇಳಿದ್ದಾರೆ .
ಬೇರೆಬೇರೆ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು ?
ಕವಿ ರತ್ನಾಕರವರ್ಣಿಯವರು ಭರತನ ಅಪ್ಪಣೆಯನ್ನು ಬೇಡಿ ಕನ್ನಡದಲ್ಲಿ ಕಥೆಯನ್ನು ಹೇಳಲು ತೊಡಗುತ್ತಾರೆ . ನಾನು ಹೇಳುವ ಕಥೆಯನ್ನು ಎಲ್ಲರೂ ಮೈಯುಬ್ಬಿ ಕೇಳಬೇಕು . ಕನ್ನಡಿಗರು ತುಂಬಾ ಚನ್ನಾಗಿದೆ ‘ ಎಂದು ಹೊಗಳಬೇಕು .
ತೆಲುಗರು ‘ ಮಂಚಿದೆ ‘ ಎಂದು ಹೊಗಳಬೇಕು . ತುಳು ಮಾತನಾಡುವವರು ‘ ಎಂಚಪೊರ್ಲಾಂಡೆ ‘ ಹೊಗಳಬೇಕು ಎಂದು ಕವಿ ನನ್ನ ಕಥೆಯನ್ನು ಬೇರೆ ಬೇರೆ ಭಾಷಿಕರು ಈ ರೀತಿ ಹೊಗಳಬೇಕೆಂದು ಬಯಸುತ್ತಾರೆ .
ಕೊಟ್ಟಿರುವ ಪ್ರಶ್ನೆಗೆ 7-8 ವಾಕ್ಯಗಳಲ್ಲಿ ಉತ್ತರಿಸಿ .
ಭರತ ಚಕ್ರವರ್ತಿಯ ರಾಜದರ್ಬಾರಿನ ವೈಭವವನ್ನು ವಿವರಿಸಿ
ಆದಿತೀರ್ಥಕರ ವೃಷಭದೇವನ ಮಕ್ಕಳಾದ ಭರತ ಬಾಹುಬಲಿಯರು ಅವರವರ ರಾಜ್ಯದಲ್ಲಿ ರಾಜ್ಯಭಾರ ಮಾಡುತ್ತಿದ್ದರು . ಭರತ ಅಯೋಧ್ಯೆಯಲ್ಲೂ , ಬಾಹುಬಲಿ ಪೌದನಪುರದಲ್ಲೂ ರಾಜ್ಯಭಾರ ಮಾಡುತ್ತಿದ್ದರು .
ಭರತನ ಆಯುಧಗಾರದಲ್ಲಿ ಚಕ್ರರತ್ನ ‘ ಹುಟ್ಟುತ್ತದೆ . ಇದನ್ನು ಮುಂದಿಟ್ಟುಕೊಂಡು ಭರತ ದಿಗ್ವಿಜಯ ನಡೆಸಿ , ಪ್ರಥಮ ಚಕಿ ಎನಿಸಿದನು . “ ಭರತಭೂತಳಕೆ ಸಿಂಗಾರವಾದಯೋಧ್ಯಾ ಪುರದೊಳು ಮೂಲೋಕ ಸೊಗಳೆ ಭರತಚಕ್ರೇಶ್ವರ ಸುಖಬಾಳುತಿರ್ದನಾ ಸಿರಿಯನಿನ್ನೇನ ಬಣ್ಣಿಪೆನು ” ಎಂದು ಕವಿಯೇ ಹೇಳಿದ್ದಾರೆ .
ಭರತನು ಮುಂಜಾನೆ ಎದ್ದು ದೇವರ ಪೂಜೆ ಅರ್ಚನೆಗಳನ್ನು ಪೂರೈಸಿ ರಾಜಸಭೆಗೆ ಆಗಮಿಸುವ ರೀತಿಯೇ ಅದ್ಭುತವಾದುದು . ನವರತ್ನಗಳು ಹಾಗೂ ಬಂಗಾರದಿಂದ ರಚಿತವಾಗಿದ್ದ ಸಭಾ ಭವನವು ಕಂಗೊಳಿಸುತ್ತಿತ್ತು .
ರಾಜರತ್ನನೆಂಬ ಭರತ ಚಕ್ರವರ್ತಿಯು ಸ್ವರ್ಗದ ದೇವೇಂದ್ರನಂತೆ ಕಾಂತಿಯಿಂದ ಶೋಭಿಸುತ್ತಿದ್ದನು . ಬೆಳ್ಳಿ ಮೋಡಗಳ ಆಗಾಗ ಪ್ರತ್ಯಕ್ಷವಾಗುವ ಸೂರ್ಯನೋ ಚಂದ್ರನೋ ಎಂಬಂತೆ ಶೋಭಿಸುತ್ತಿದ್ದನು
ಸೂರ್ಯನನ್ನೂ ನೋಡುವ ತಾವರೆಗಳಂತೆ , ಚಂದ್ರನನ್ನು ಕಾಣುವ ನೈದಿಲೆಗಳಂತೆ ಸಭಾಸದರು ಭರತ ಚಕ್ರವರ್ತಿಯನ್ನು ನೋಡುತ್ತಿದ್ದರು .
ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ
“ ಚಂದಿರನೋ ಭಾಸ್ಕರನೊಯೆಂಬಂತೆ ”
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ‘ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭರತನು ರತ್ನ ಖಚಿತವಾದ ಸಿಂಹಾಸನದ ಮೇಲೆ ಕುಳಿತಿರುವ ದೃಶ್ಯವನ್ನು ವರ್ಣಿಸಿದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ಆಕಾಶದಲ್ಲಿ ಮೋಡದ ಮರೆಯಲ್ಲಿ ಆಗಾಗ ಕಾಣಿಸಿ ಮರೆಯಾಗುವ ಸೂರ್ಯನೋ ಚಂದ್ರನೋ ಎಂದು ಹೇಳಿದ್ದಾರೆ .
ಸ್ವಾರಸ್ಯ : ಬಾನಿನಲ್ಲಿ ಸೂರ್ಯ ಚಂದ್ರರು ಯಾವ ರೀತಿ ಶೋಭಿಸುತ್ತಾರೋ ಅದೇ ರೀತಿ ಆಸ್ಥಾನದಲ್ಲಿ ಭರತ ಚಕ್ರವರ್ತಿ ಕಂಗೊಳಿಸುತ್ತಿರುವುದು ಸ್ವಾರಸ್ಯವಾಗಿ ಕವಿ ವರ್ಣಿಸಿದ್ದಾರೆ .
“ ಶ್ರೀ ವಿಲಾಸವನೇನನೆಂಬೆ ? ”
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭರತ ಚಕ್ರವರ್ತಿಯು ಸೂರ್ಯೋದಯದಲ್ಲಿ ಎದ್ದು ದೇವರ ಅರ್ಚನೆಯನ್ನು ಮಾಡಿ ರಾಜಸಭೆಗೆ ಆಗಮಿಸುವ ರೀತಿಯನ್ನು ವರ್ಣಿಸಿದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಭರತ ಚಕ್ರವರ್ತಿಯು ವೈಭವದಿಂದ ರಾಜ್ಯಭಾರ ಮಾಡುತ್ತಿರುವುದು ಸ್ವಾರಸ್ಯ ಪೂರ್ಣವಾಗಿ ಕವಿ ವರ್ಣಿಸಿದ್ದಾರೆ .
” ಕನ್ನಡದೊಳಗೊಂದು ಕಥೆಯ ಪೇಳುವನು “
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಕವಿ ರತ್ನಾಕರವರ್ಣಿ ಅವರು “ ಗುರುವೇ ಧ್ಯಾನಕೆ ಬೇಸರವಾದಾಗ ಕನ್ನಡದಲ್ಲಿ ಒಂದು ಕಥೆ ಹೇಳುತ್ತೇನೆ . ಅದಕ್ಕೆ ನೀವು ಅನುಮತಿಯನ್ನು ಕೊಡಬೇಕು ” ಎಂದು ಅಪ್ಪಣೆ ಕೇಳಿದ ಸಂದರ್ಭದಲ್ಲಿ ಕವಿ ಈ ರೀತಿ ಹೇಳಿದ್ದಾರೆ .
ಸ್ವಾರಸ್ಯ : ಕವಿ ರತ್ನಾಕರವರ್ಣಿ ಅವರಿಗೆ ಇರುವ ಕನ್ನಡಾಭಿಮಾನ , ಕನ್ನಡ ಪ್ರೇಮ , ಆಶ್ರಯಕೊಟ್ಟ ರಾಜನ ಮೇಲಿರುವ ಗೌರವ ಭಾವನೆಯು ಸಕರವಾಗಿದೆ .
ಸಂಬಂದಿಸಿದ ಇತರೆ ವಿಷಯಗಳು
ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು
9ನೇ ತರಗತಿ ಪಾರಿವಾಳ ಪದ್ಯದ ಸಾರಾಂಶ