ರಾಮರಾಜ್ಯ ಪಾಠದ ಸಾರಾಂಶ, Ramarajya summary in kannada, 9th standard ramarajya kannada notes, 9ನೇ ತರಗತಿ ರಾಮರಾಜ್ಯ ಕನ್ನಡ ನೋಟ್ಸ್ , 9ನೇ ತರಗತಿ ರಾಮರಾಜ್ಯ ಕನ್ನಡ ನೋಟ್ಸ್, 9th Standard Ramarajya Kannada Notes Question Answer Pdf 2023, Kseeb Solutions For Class 9 Kannada Chapter 1 ರಾಮರಾಜ್ಯ ಕನ್ನಡ Pdf, 9th standard kannada textbook answers, kannada 9th standard ramarajya notes, 9th standard ramarajan notes, 9th standard ramarajya kannada, kannada 9th standard notes chapter 1 ramarajya, ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು, ರಾಮರಾಜ್ಯ ಪಾಠದ ಸಾರಾಂಶ
ರಾಮರಾಜ್ಯ ಪಾಠದ ಸಾರಾಂಶ Ramarajya Summary In Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಕೈಕೇಯಿಯ ಬಲವಂತಕ್ಕೆ ಕಟ್ಟುಬಿದ್ದು ದಶರಥನು ರಾಮನನ್ನು ವನವಾಸಕ್ಕೆ ಹೊರಡೆಂದುಹೇಳಿದ ಮೇಲೆ ” ರಾಮನು ತನ್ನ ಪತ್ನಿ ಸೀತೆ ಹಾಗೂ ಸೋದರ ಲಕ್ಷ್ಮಣನೊಡಗೂಡಿ ಕಾಡಿಗೆ ತೆರಳುತ್ತಾನೆ, ಈ ಘಟನೆಯು ನಡೆದಾಗ ಭರತನು ಅಯೋಧ್ಯೆಯಲ್ಲಿರಲಿಲ್ಲ. ನಂತರ ಬಂದು ವಿಷಯ ತಿಳಿದು ಆಘಾತಗೊಂಡ ಭರತನು ಎಷ್ಟುಮಾತ್ರಕ್ಕೂ ತಾನು ಸಿಂಹಾಸನದಲ್ಲಿ ಕೂರೆನೆಂದೂ ರಾಮನೊಬ್ಬನೇ ಪಟ್ಟಾಭಿಷಿಕ್ತನಾಗಲು ಅರ್ಹನೆಂದೂ ಹೇಳಿ ತನ್ನ ಪರಿವಾರಸಮೇತನಾ ರಾಮನನ್ನು ಕಾಣಲು ಅರಣ್ಯಕ್ಕೆ ಬರುತ್ತಾನೆ . ಭರತನು ಯುದ್ಧ ಮಾಡುವುದಕ್ಕೆಂದೇ ಸನ್ನದ್ಧನಾಗಿ ಬರುತ್ತಿರಬೇಕೆಂದು ಲಕ್ಷ್ಮಣನು ಬಗೆದರೂ ಅವನನ್ನು ಸಮಾಧಾನಪಡಿಸಿದ ರಾಮನು ಭರತನ ಜೊತೆ ಸ್ನೇಹಭಾವದಿಂದ ಮಾತಾಡುತ್ತಾನೆ .
ಆಗ ಆತನಿಗೆ ಭರತನ ಮೂಲಕ , ತನ್ನ ತಂದೆಯ ದೇಹಾಂತ್ಯದ ವಿಚಾರ ತಿಳಿಯುತ್ತದೆ . ತನ್ನನ್ನು ಮರಳಿ ಅಯೋಧ್ಯೆಗೆ ಬರುವಂತೆ ಭರತ ಎಷ್ಟು ಒತ್ತಾಯಿಸಿದರೂ ಕೇಳದೆ ರಾಮನು ತಂದೆಯ ಆದೇಶವನ್ನು ಪಾಲಿಸುವುದು ತನ್ನ ಕರ್ತವ್ಯ ಎಂದು ಹೇಳುತ್ತಾನೆ . ಆ ಸಂದರ್ಭದಲ್ಲಿ ಆತ ರಾಜ್ಯಾಡಳಿತದ ಬಗ್ಗೆ ಭರತನಲ್ಲಿ ಕೇಳುವ ಪ್ರಶ್ನೆಗಳು , ಹೇಳುವ ಅನುಭವದ ಮಾತುಗಳು ಈ ಅಧ್ಯಾಯದಲ್ಲಿ ಬಂದಿವೆ .
ವನವಾಸಕ್ಕೆ ತೆರಳುವ ಮೊದಲು ೧೨ ವರ್ಷಗಳ ಕಾಲ ಅಯೋಧ್ಯೆಯ ಅಧಿಕಾರಿಯಾಗಿ ರಾಮನು ಪಡೆದಿದ್ದ ಅನುಭವವೂ ಇಲ್ಲಿ ಅವನ ಮಾತಿನಲ್ಲಿ ಪ್ರತಿಫಲಿಸುತ್ತಿದೆ . ರಾಜನಾದವನು ಎಷ್ಟು ಸೂಕ್ಷ್ಮಗ್ರಾಹಿಯಾಗಿರಬೇಕು , ಎಷ್ಟು ಸಮಚಿತ್ತ ಹೊಂದಿರಬೇಕು , ತನ್ನ ಸುತ್ತ ನಡೆಯುವ ವಿಚಾರಗಳಿಗೆ ಹೇಗೆ ಆತ ಪ್ರತಿಕ್ರಿಯಿಸುತ್ತಿರಬೇಕು , ಒಟ್ಟು ಆಡಳಿತದಲ್ಲಿ ಭ್ರಷ್ಟಾಚಾರವು ನುಸುಳದಂತೆ ಹೇಗೆ ಜಾಗ್ರತೆಯಿಂದ ವ್ಯವಹರಿಸಬೇಕು ಎಂಬ ಎಲ್ಲ ಸೂಕ್ಷ್ಮಚಿಂತನೆಗಳೂ ಇಲ್ಲಿ ರಾಮಮುಖದಿಂದ ಬಂದಿವೆ . ಅಯೋಧ್ಯೆಯಿಂದ ದೂರವಾದರೂ ಆ ರಾಜ್ಯದ ಯೋಗಕ್ಷೇಮದ ಕಳಕಳಿ ರಾಮನಲ್ಲಿ ಎಷ್ಟು ತುಂಬಿತ್ತು ಎಂಬುದಕ್ಕೂ ಈ ಮಾತುಗಳು ಸಾಕ್ಷಿಯಾಗಿವೆ .
ಸಂಬಂದಿಸಿದ ಇತರೆ ವಿಷಯಗಳು
ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು
I want a summary on lesson Rama
rajya
I want a summary on lesson Ramarajya