ಹಲುಬಿದಳ್ ಕಲ್ಮರಂ ಕರಗುವಂತೆ notes | Halubidal Kalmaram Karaguvante

ಹಲುಬಿದಳ್ ಕಲ್ಮರಂ ಕರಗುವಂತೆ notes | Halubidal Kalmaram Karaguvante

ಹಲುಬಿದಳ್ ಕಲ್ಮರಂ ಕರಗುವಂತೆ notes, Halubidal Kalmaram Karaguvante, Chapter 4 Questions and Answers Pdf, Notes, saramsha, Summary, 1st PUC Kannada

ಹಲುಬಿದಳ್ ಕಲ್ಮರಂ ಕರಗುವಂತೆ notes

ಕವಿ ಪರಿಚಯ

ಜೈಮಿನಿ ಭಾರತ’ವೆಂಬ ಅಪೂರ್ವ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವ ಮಹಾಕವಿ ಲಕ್ಷ್ಮೀಶನು ( ಕ್ರಿ.ಶ. 1550 ) ಕನ್ನಡ ಸಾಹಿತ್ಯ ಪರ೦ಪರೆಯ ಮಹತ್ವದ ಕವಿ .

ರಾವಣಾರಿ ಎಂದರೆ ಯಾರು?

ರಾವಣಾರಿ ಎಂದರೆ ಶ್ರೀರಾಮ

ರಾಮನ ಆಜ್ಞೆ ಏನು Class 11

ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಬೇಕೆಂಬುದೇ ರಾಮನ ಆಜ್ಞೆಯಾಗಿತ್ತು

ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ?

ಸಹದೇವ

ಜನ್ಮಸ್ಥಳ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿರುವ ‘ ದೇವನೂರು ‘

ಲಕ್ಷ್ಮೀಶನ ನಿಜವಾದ ಹೆಸರು : ಲಕ್ಷ್ಮೀಕಾಂತ ಹೆಬ್ಬಾರ್

ದೇವನೂರಿನ ಲಕ್ಷ್ಮೀರಮಣ ಸ್ವಾಮಿ

ಆರಾಧ್ಯದೈವ

ಜೈಮಿನಿ ‘ ಎಂಬ ಮುನಿಯು ಸಂಸ್ಕೃತದಲ್ಲಿ ಬರೆದಿದ್ದ ಕೌರವ ಪಾಂಡವರ ಕುರುಕ್ಷೇತ್ರ ಯುದ್ಧಾನಂತರದ ಅಶ್ವಮೇಧಯಾಗದ ಕಥೆಯನ್ನೇ ಲಕ್ಷ್ಮೀಶನು ಕನ್ನಡದಲ್ಲಿ ಸಂಗ್ರಹಿಸಿ ಸೊಗಸಾಗಿ ಹೇಳಿರುವನು .

ಈ ಕೃತಿಯು ವಾರ್ಧಕ ಷಟ್ನದಿಯಲ್ಲಿ ರಚಿತವಾಗಿದೆ ಹಾಗು ಹಲವು ರಮ್ಯ ಕಥೆಗಳಿಂದಾಗಿ ಕಥಾಸರಿತ್ಸಾಗರವೆನಿಸಿದೆ .

ಬಿರುದುಗಳು

  • ಕವಿಚೂತವನ ಚೈತ್ರ
  • ಉಪಮಾಲೋಲ

ಒಂದು ವಾಕ್ಯದಲ್ಲಿ ಉತ್ತರಿಸಿ


ಸೌಮಿತ್ರಿ ಸೀತೆಯನ್ನು ಎಲ್ಲಿಗೆ ಕರೆದುಕೊಂಡು ಹೋದನು ?

ಸೌಮಿತ್ರಿಯು ಸೀತೆಯನ್ನು ಗಂಗಾನದೀ ತೀರದ ಅರಣ್ಯಕ್ಕೆ ಕರೆದುಕೊಂಡು ಹೋದನು .

ಲಕ್ಷ್ಮಣನ ಮಾತು ಕೇಳಿದ ಸೀತೆ ಭೂಮಿಗೆ ಹೇಗೆ ಬಿದ್ದಳು ?

ಲಕ್ಷಣನ ಮಾತು ಕೇಳಿದ ಸೀತೆಯು ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ ಫಲಿತ ಕದಳಿಯಂತೆ ಭೂಮಿಯ ಮೇಲೆ ಬಿದ್ದಳು .

ರಾಮನ ಆಜ್ಞೆ ಏನು ?

ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಬೇಕೆಂಬುದೇ ರಾಮನ ಆಜ್ಞೆಯಾಗಿತ್ತು .

ಕಾಡಿನಲ್ಲಿ ತನಗೆ ಯಾರ ನೆರವುಂಟೆಂದು ಸೀತೆ ಹೇಳುತ್ತಾಳೆ ?

ಕಾಡಿನಲ್ಲಿರುವ ಉಗ್ರ ಜಂತುಗಳ ನೆರವು ತನಗುಂಟೆಂದು ಸೀತೆಯು ಹೇಳುತ್ತಾಳೆ .

ಸೀತೆಯಾರಲ್ಲಿ ತಪ್ಪಿಲ್ಲವೆಂದು ಹೇಳುತ್ತಾಳೆ ?

ರಘುರಾಮನಲ್ಲಿ ತಪ್ಪಿಲ್ಲವೆಂದು ಸೀತೆ ಹೇಳುತ್ತಾಳೆ .

ಲಕ್ಷ್ಮಣನಿಗೆ ಏನೆಂದು ಹಾರೈಸಿ ಸೀತೆ ಬೀಳ್ಕೊಡುತ್ತಾಳೆ ?

ಸೀತೆ ಲಕ್ಷ್ಮಣನ ಪ್ರಯಾಣದಲ್ಲಿ ಅಡಿಗಡಿಗೆ ಕ್ಷೇಮ – ಸುಖವಾಗಲೆಂದು ಹಾರೈಸಿ ಬೀಳ್ಕೊಡುತ್ತಾಳೆ .

ಭೂದೇವಿಯ ಮಗಳು ಯಾರು ?

ಭೂದೇವಿಯ ಮಗಳು ಸೀತೆ .


ವಾಲ್ಮೀಕಿ ಏನನ್ನು ಹುಡುಕುತ್ತಾ ವನಕ್ಕೆ ಬಂದನು ?

ವಾಲ್ಮೀಕಿ ಯೂಪವನ್ನು ಅರಸುತ್ತಾ ವನಕ್ಕೆ ಬಂದನು .

ರಾವಣಾರಿ ಎಂದರೆ ಯಾರು ?

ರಾವಣಾರಿ ಎಂದರೆ ಶ್ರೀರಾಮ ,

.ಸೀತೆಯನ್ನು ಆಶ್ರಮಕ್ಕೆ ಕರೆತಂದವರು ಯಾರು ?

ಸೀತೆಯನ್ನು ವಾಲ್ಮೀಕಿ ಆಶ್ರಮಕ್ಕೆ ಕರೆತಂದನು .

2-3 ವಾಕ್ಯಗಳಲ್ಲಿ ಉತ್ತರಿಸಿ

ಸೀತೆ ಪ್ರವೇಶಿಸಿದ ಕಾಡು ಹೇಗಿತ್ತು ?

ಸೀತೆಯು ಪ್ರವೇಶಿಸಿದ ಅರಣ್ಯವು ಉಗ್ರ ಮೃಗ – ಪಕ್ಷಿಗಳ ಸಮೂಹದಿಂದ ಕಿಕ್ಕಿರಿದಿತ್ತು . ಪೊದೆಗಳು ಅಡಿಗಡಿಗೂ ಇದ್ದು , ಸಹಿಸಲಸಾಧ್ಯವಾದ ಭಯಂಕರ ಕಾಡಾಗಿದ್ದಿತು .

ಲಕ್ಷಣ ದುಃಖಿತನಾಗಲು ಕಾರಣವೇನು ?

ಲಕ್ಷಣನಿಗೆ ಶ್ರೀರಾಮನು ಸೀತೆಯನ್ನು ಬಿಟ್ಟು ಬಿಟ್ಟಿರುವ ಸಂಗತಿಯನ್ನು ಹೇಳುವುದು ಹೇಗೆ ಎಂಬ ದುಃಖ ಒಂದುಕಡೆ ಯಾದರೆ , ಮಹಾರಾಣಿಯಂತಿರಬೇಕಾದ ಸುಕೋಮಲ ಸೀತೆಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಟ್ಟುಹೋಗಬೇಕೆಂಬ ದುಃಖ ಮತ್ತೊಂದು ಕಡೆ . ಬಿಡದಿದ್ದರೆ ರಾಮನು ಕೋಪಿಸಿಕೊಳ್ಳಬಹುದೆಂಬ ಆತಂಕ ಮತ್ತೊಂದು ಕಡೆ

ಮೂರ್ಛಿತಳಾದ ಸೀತೆಯನ್ನು ಲಕ್ಷ್ಮಣ ಹೇಗೆ ಉಪಚರಿಸಿದನು ?

ಮೂರ್ಛಿತಳಾದ ಸೀತೆಯನ್ನು ಕಂಡು ದುಃಖಿಸಿದ ಲಕ್ಷ್ಮಣನು , ದೊಡ್ಡದೊಂದು ಎಲೆಯನ್ನು ಛತ್ರಿಯಂತೆ ಹಿಡಿದು ನೆರಳನ್ನು ಒದಗಿಸಿದನು . ನೀರನ್ನು ಸಿಂಪಡಿಸಿದನು . ತನ್ನ ಮೇಲಸ್ತ್ರದ ತುದಿಯಿಂದ ಗಾಳಿ ಬೀಸಿ ಸೀತೆಯನ್ನು ಉಪಚರಿಸಿದನು .

ಸೀತೆಗೆ ಸೌಮಿತ್ರಿಯು ಹಿಂತಿರುಗಿ ಹೋಗೆಂದು ಏಕೆ ಹೇಳಿದಳು ?

ಕಾಡಿನಲ್ಲಿ ತಡಮಾಡಿದರೆ ಶ್ರೀರಾಮನು ಕೋಪಿಸಿಕೊಳ್ಳಬಹುದು ಮತ್ತು ಅಯೋಧ್ಯೆಯಲ್ಲಿ ರಾಮನು ಏಕಾಂಗಿ ಯಾಗಿರುವನಾದ್ದರಿಂದ ಸೀತೆಯು ಸೌಮಿತ್ರಿಯನ್ನು ಹಿಂದಿರುಗಿ ಹೋಗೆಂದು ಹೇಳಿದಳು .

ಸೀತೆಯನ್ನು ಕಾಡಿನ ಪ್ರಾಣಿಗಳು ಹೇಗೆ ಉಪಚರಿಸಿದವು ?

ಕಾಡಿನಲ್ಲಿರುವ ಮೃಗ , ಪಕ್ಷಿ , ಜಂತುಗಳೆಲ್ಲಾ ಸೀತೆಗೊದಗಿದ ಕಡುಕಷ್ಟಕ್ಕಾಗಿ ಮರುಗಿದವು . ಅವುಗಳು ಜೋಲುಮೇರೆ . ಯನ್ನು ಹಾಕಿಕೊಂಡು , ತಮ್ಮೊಳಗಿನ ವೈರವನ್ನು ಮರೆತವು , ಆಹಾರ ಸ್ವೀಕಾರವನ್ನು ಮರೆತು , ಸೀತೆಯ ಸುತ್ತ ನಿಂತು ಅವಳ ದುಖದಲ್ಲಿ ಭಾಗಿಯಾಗುವ ಮೂಲಕ ಅವಳನ್ನು ಉಪಚರಿಸಿದವು .

5-6 ವಾಕ್ಯಗಳಲ್ಲಿ ಉತ್ತರಿಸಿ

ಲಕ್ಷಣದು ಮಹಾರಣ್ಯವನ್ನು ಪ್ರವೇಶಿಸಿದ ಸನ್ನಿವೇಶವನ್ನು ವಿವರಿಸಿ

ಸೀತೆ ಮತ್ತು ಲಕ್ಷ್ಮಣರು ಆಯೋಧ್ಯೆಯಿಂದ ಹೊರಟು ಗಂಗಾನದೀ ತೀರದಲ್ಲಿ ರಥದಿಂದ ಇಳಿದರು . ಇಬ್ಬರೂ ಮೊದಲಿಗೆ ಗಂಗಾನದಿಗೆ ನಮಸ್ಕರಿಸಿದರು .

ಗಂಗೆಯಲ್ಲಿ ಮಿಂದು.ನಾವಿಕರ ನೆರವಿನಿಂದ ದೋಣಿಯಲ್ಲಿ ಗಂಗೆಯನ್ನು ದಾಟಿ ಘೋರಾರಣ್ಯ ವನ್ನು ಪ್ರವೇಶಿಸಿದರು . ಆರಣ್ಯವು ಉಗ್ರ ಮೃಗ – ಪಕ್ಷಿಗಳ ಸಮೂಹದಿಂದ ‘ ಭೂ ‘ ಎನ್ನುತ್ತಿತ್ತು . ಕಾಲಿಡಲು ಸಾಧ್ಯವಿಲ್ಲವೆಂಬ ಪೊದೆಗಳ ಕರ್ಕಶವಾದ ಹಾದಿಯಲ್ಲಿ ಅವರು ಮುಂದುವರೆದರು .

ಆ ಭಯಂಕರವಾದ ಅರಣ್ಯವು ಜಾನಕಿಗೆ ಹಲವು ಬಗೆಯ ಭ್ರಮೆಯನ್ನು ಮೂಡಿಸಿತು . ಆ ಮಹಾ ಅಡವಿಯು ಜಾನಕಿಯ ಕಣ್ಣಿಗೆ ಘೋರತರವಾಗಿ ಕಂಡಿತು . ಋಷಿಮುನಿಗಳ ಆಶ್ರಮಗಳು ಕಣ್ಣಿಗೆ ಕಾಣದೆ ಸೀತೆ ಕಂಗಾಲಾದಳು . ಲಕ್ಷ್ಮಣನು ದುಃಖದಿಂದ ಮೌನವಾಗಿದ್ದನು .

ಕಾಡಿನಲ್ಲಿ ಜಾನಕಿ ಏನೇನು ಕಾಣಲು ಬಯಸಿದಳು ?

ಭೀಕರವಾದ ಕಾಡಿಗೆ ಲಕ್ಷ್ಮಣನು ಕರೆತಂದುದನ್ನು ನೋಡಿ ಜಾನಕಿಗೆ ಆಶ್ಚರ್ಯವಾಯಿತು . ವಾಸ್ತವವಾಗಿ ಅವಳು ಋಷಿ ಮುನಿಗಳ ಆಶ್ರಮಕ್ಕೆ ಭೇಟಿ ನೀಡಬೇಕೆಂಬ ಬಯಕೆಯನ್ನು ಹೊಂದಿದ್ದಳು . ಉತ್ತಮ ಮುನಿಪರ ಪವಿತ್ರವಾದ ವನಗಳನ್ನು ಅವಳು ನಿರೀಕ್ಷಿಸಿದ್ದಳು .

ಸಿದ್ದರ ಆಶ್ರಮಗಳನ್ನು ಮಂಗಳಕರವಾದ ಸ್ಥಳಗಳನ್ನು ಹವಿಸ್ಸಿನ ಕಂಪು ಬೀರುವ ಹೊಗೆಯನ್ನು ಯಜ್ಞ ಯಾಗ , ಹೋಮಾದಿಗಳು ನಡೆವ ತಾಣವನ್ನು ಋಷಿಗಳು ವಾಸಮಾಡುವ ಕುಟೀರಗಳನ್ನು , ಕುಟೀರಗಳಿಂದ ಹೊರಹೊಮ್ಮುವ ವೇದಶಾಸ್ತ್ರ ಪಾರಾಯಣದ ಧ್ವನಿಗಳನ್ನು ಜಾನಕಿಯು ಕಾಣಬಯಸಿದ್ದಳು . ಆದರೆ ಯಾವುವೂ ಇಲ್ಲದ ಘೋರಾರಣಕ್ಕೆ ಲಕ್ಷ್ಮಣನು ಸೀತೆಯನ್ನು ಕರೆತಂದು ಆಕೆಯನ್ನು ನಿರಾಸೆಗೊಳಿಸಿದನು .

ಸೀತೆಯನ್ನು ಕಾಡಿನಲ್ಲಿ ಬಿಡಲು ಬಂದ ಲಕ್ಷಣನ ಬೇಗುದಿ ಹೇಗಿತ್ತು ?

ಶ್ರೀರಾಮನ ಆಜ್ಞೆಯನ್ನು ಮೀರಲಾರದೆ ಸೀತೆಯನ್ನು ಕಾಡಿನಲ್ಲಿ ಬಿಟ್ಟುಹೋಗಲು ಬಂದ ಲಕ್ಷ್ಮಣನ ಮನಸ್ಸಿನ ದುಃಖ ಅಪಾರವಾದುದು . ಮನದಲ್ಲಿಯೇ ಅಪಾರವಾದ ದುಃಖವನ್ನು ನುಂಗಿಕೊಂಡು ಮೌನವಾಗಿದ್ದನು . ರಾಮನ ಸೀತಾಪರಿತ್ಯಾಗದ ವಿಷಯವನ್ನು ಸೀತೆಗೆ ತಿಳಿಸುವುದು ಹೇಗೆಂದು ಅವನು ಪೇಚಾಡಿಕೊಂಡನು .

ಅಲ್ಲದೆ ಸೂರ್ಯವಂಶದ ಮಹಾರಾಣಿಯಾದ ಸೀತೆಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಹೋಗಬೇಕೆನ್ನುವ ವಿಚಾರ ಅವನನ್ನು ಅಪಾರವಾಗಿ ನೋಯಿಸಿತು .

ಬಿಟ್ಟು ಹೋಗದಿದ್ದರೆ ಶ್ರೀರಾಮನೇನೆನ್ನುವನೋ ಎಂಬ ಭಯ . ವಿಚಾರ ತಿಳಿದು ಮೂರ್ಛಗೆ ಜಾರಿದ ಸೀತೆಯನ್ನು ಆತ ಅಳುತ್ತಲೇ ಉಪಚರಿಸುವನು . ಕೊನೆಗೆ ತುಂಬು ಗರ್ಭಿಣಿಯಾದ ಆಕೆಯ ಕ್ಷೇಮಕ್ಕಾಗಿ , ವನವೃಕ್ಷಗಳನ್ನು , ವನದೇವತೆ , ದಿಗ್ಗೇವತೆಗಳನ್ನೂ , ಪಂಚಭೂತಗಳನ್ನು ನೆಲತಾಯಿಯನ್ನೂ ಕೈ ಮುಗಿದು ಪ್ರಾರ್ಥಿಸಿ ಅಳುತ್ತಲೇ ಅಯೋಧ್ಯೆಗೆ ಹಿಂದಿರುಗುವನು .

1st puc kannada 4th poem summary


ರಾಮನ ಆಜ್ಞೆಯ ಲಕ್ಷಣನು ಸೀತೆಗೆ ಹೇಗೆ ತಿಳಿಸಿದ ?

ಲಕ್ಷ್ಮಣನು ಸೀತೆಗೆ ರಾಮನ ಆಜ್ಞೆಯನ್ನು ತಿಳಿಸಲಾಗದೆ ಒದ್ದಾಡಿದನು . ಕೊನೆಗೆ ನಿಧಾನವಾಗಿ ” ದೇವಿ ನಾನು ಇದು ವರೆಗೂ ಈ ಸಂಗತಿಯನ್ನು ನಿನಗೆ ಹೇಳಲಾಗಲಿಲ್ಲ . ಶ್ರೀರಾಮನು ತನ್ನನ್ನು ಒಂದು ಅಪವಾದ ಒಂದು ಆವರಿಸಿದ್ದರಿಂದ ನಿನ್ನನ್ನು ಪರಿತ್ಯಾಗ ಮಾಡಿದ್ದಾನೆ . ಅವನ ಆಜ್ಞೆಯಂತೆ ನಾನು ನಿನ್ನನ್ನು ಕಾಡಿಗೆ ಕರೆತಂದುಬಿಟ್ಟಿದ್ದೇನೆ .

ಪ್ರಭುವಿನ ಆಜ್ಞೆಯನ್ನು ಮೀರಲಾಗದ ಈ ಕಾಡಿಗೆ ನಿನ್ನನ್ನು ಕರೆತರಬೇಕಾಯ್ತು . ಇಲ್ಲಿಂದ ಮುಂದೆ ನೀನು ಎಲ್ಲಿಗೆ ಬೇಕಾದರೂ ಹೋಗಬಹುದು ‘ ‘ ಎಂದು ನುಡಿದನು . ಲಕ್ಷಣನು ಈ ವಿಚಾರವನ್ನು ಮೆಲ್ಲನೆ , ಯೋಚಿಸಿ ಹೇಳಿದನಾದರೂ ಸೀತೆಗೆ ಅದು ಬಿರುಗಾಳಿಯಂತೆ ಬಂದು ಅಪ್ಪಳಿಸಿತು .

ಸೀತೆ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಹೇಗೆ ದುಃಖಿಸುತ್ತಾಳೆ ?

ಶ್ರೀರಘುರಾಮನ ಮನೋವಲ್ಲಭೆಯಾದ ತಾನು ಈ ದಟ್ಟಡವಿಯಲ್ಲಿ ಪಿಶಾಚಿಯಂತೆ ಅಲೆಯಬೇಕಾಯಿತಲ್ಲಾ ಎಂದು ದುಃಖಿಸುವ ಸೀತೆಗೆ ಹಿಂದಿನ ಘಟನೆಗಳೆಲ್ಲಾ ನೆನಪಿಗೆ ಬರುತ್ತವೆ .

ಶ್ರೀರಾಮನು ಕೌಶಿಕ ಮುನಿಗಳೊಡನೆ ಮಿಥಿಲಾಪುರ ಬಂದುದು , ಜನಕನು ಪಣವಾಗಿಟ್ಟಿದ್ದ ಹರಧನಸ್ಸನ್ನು ಮುರಿದು ಸೀತೆಯನ್ನು ವರಿಸಿದ್ದು , ಆನಂತರದ ದಿನಗಳಲ್ಲಿ ಇಬ್ಬರೂ ಸುಖವಾಗಿ ರಮಿಸಿದ್ದು

ಆರಣ್ಯವಾಸದ ಕಷ್ಟದಲ್ಲೂ ರಾಮ ಜೊತೆ ಬಿಡದ ನೋಡಿಕೊಂಡಿದ್ದು , ರಾವಣನು ಹೊತ್ತೊಯ್ದಾಗ , ಕೆಪಿ ಸೈನ್ಯದೊಂದಿಗೆ ಲಂಕೆಗೆ ಸೇತುವೆ ಕಟ್ಟಿ , ದೈತ್ಯಾಕಿದೆತ್ತರೊಡನೆ ಹೋರಾಡಿ ಸೀತೆಯನ್ನು ಕಾಪಾಡಿದ್ದು , ಸೀತೆಯನ್ನು ಅಗ್ನಿಪರೀಕ್ಷೆಗೆ ನೂಕಿ ಪತಿವ್ರತೆಯೆಂದು ಪರೀಕ್ಷಿಸಿದ್ದು – ಇವೆಲ್ಲವೂ ನೆನಪಾಗುತ್ತವೆ .

ಇಷ್ಟೆಲ್ಲಾ ಪ್ರೀತಿಯಿಂದ ನೋಡಿಕೊಂಡ ಶ್ರೀರಾಮನು ಈಗ ತನ್ನಲ್ಲಿ ಯಾವ ಅಪರಾಧವನ್ನು ಕಂಡು ತನ್ನನ್ನು ತ್ಯಜಿಸಿದನೆಂದು ಪರಿಪರಿಯಾಗಿ ಅವಳು ದುಃಖಿಸುತ್ತಾಳೆ .

ಕಾಡಿನಲ್ಲಿ ಸೀತೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಲಕ್ಷ್ಮಣನು ಯಾರಿಗೆ , ಹೇಗೆ ವಹಿಸುತ್ತಾನೆ ? ಸೀತೆಯು ಸೌಮಿತ್ರಿಯನ್ನು ಆಯೋಧ್ಯೆಗೆ ಹಿಂದಿರುಗಬೇಕೆಂದು ಸೂಚಿಸಿದಾಗ ಅವನು ಕಾಡಿನಲ್ಲಿರುವ ಪ್ರತಿಯೊಂದನ್ನೂ ಸೀತೆಯನ್ನು ರಕ್ಷಿಸಬೇಕೆಂದು ಬೇಡಿಕೊಳ್ಳುತ್ತಾನೆ . ಅವನು ಅರಣ್ಯವನ್ನು ಬೇಡಿಕೊಳ್ಳುತ್ತಾನೆ .

Halubidal Kalmaram Karaguvante

ಕಾಡಿನಲ್ಲಿರುವ ಮರಗಳಿಗೆ ಸೀತೆ ಯನ್ನು ಕಾಪಾಡುವಂತೆ ಕೋರುತ್ತಾನೆ . ಕಾಡಿನಲ್ಲಿರುವ ಕ್ರಿಮಿಕೀಟಗಳನ್ನು ಪಕ್ಷಿಗಳನ್ನು ಗಿಡಮರಬಳ್ಳಿಗಳನ್ನು ಪ್ರಾರ್ಥಿಸುವನು . ಹುಲ್ಲಿನ ಪೊದೆಗಳನ್ನು ಕೇಳಿಕೊಳ್ಳುವನು . ಪಂಚಭೂತಗಳನ್ನು ಕುರಿತು ಸೀತೆಯ ಕ್ಷೇಮಕ್ಕಾಗಿ ಬೇಡುವನು .

ದಿಕ್ಕಿನ ದೇವತೆಗಳನ್ನು ಧರ್ಮದೇವತೆಯನ್ನೂ ಸೀತೆಯ ರಕ್ಷಣೆಗಾಗಿ ವಿನ ೦ ತಿಸುವನು , ಜಗನ್ಮಾತೆ ಎನಿಸಿರುವ ಗಂಗಾದೇವಿಯನ್ನು ಸೀತೆಯನ್ನು ಸಲಹ ಬೇಕೆಂದನು . ಮತ್ತು ಸೀತೆಯ ತಾಯಿ ಭೂಮಿ ತಾಯಿಯನ್ನು ಪೊರೆಯಬೇಕೆಂದು ಸೂಚಿಸಿದನು . ಈ ಮೇಲಿನ ಎಲ್ಲರಿಗೂ ಸೀತೆಯನ್ನು ನಿಮ್ಮ ಮಗಳಂತೆ ಕಾಪಾಡಿರೆಂದು ಲಕ್ಷ್ಮಣನು ಕೈಮುಗಿದು ಪ್ರಾರ್ಥಿಸಿದನು .

ಸೀತೆ ಕಲ್ಮರಂ ಕರಗುವಂತೆ ದುಃಖಿಸಿದ ಪರಿಯನ್ನು ವಿವರಿಸಿ .

ಲಕ್ಷಣನು ಆಯೋಧ್ಯೆಗೆ ಹಿಂದಿರುಗಿದ ಬಳಿಕ ಸೀತೆಯು ಕಾಡಿನಲ್ಲಿ ಅಬಲೆಯಾದಳು . ತಾನು ಮುಂದೆ ಎಲ್ಲಿಗೆ , ಹೇಗೆ ಹೋಗಬೇಕು ? ತನ್ನ ಮುಂದಿನ ದಾರಿ ಯಾವುದೊಂದು ದಿಕ್ಕು ದಿಕ್ಕುಗಳನ್ನೂ ನೋಡಿ , ದಿಕ್ಕು ತೋಚದಾದಳು . ಅವಳ ಮೈ , ಕೈ ಗಳೆಲ್ಲವೂ ಶಿಥಿಲಗೊಂಡಿತ್ತು , ಮೈ ತುಂಬಾ ಧೂಳು ಮೆತ್ತಿಕೊಂಡಿತ್ತು .

ಹಲುಬಿದಳ್ ಕಲ್ಮರಂ ಕರಗುವಂತೆ notes

ತಲೆಕೂದಲು ಬಿಚ್ಚಿಕೆದರಿ , ವಿಕಾರಗೊಂಡಿತ್ತು . ಇದಾವುದನ್ನೂ ಗಮನಿಸದ ಸೀತೆಯು ” ನಾನು ಮಿಥಿಲೇಶ್ವರನಾದ ಜನಕರಾಜನ ವಂಶದಲ್ಲಿ ಮಗಳಾಗಿ ಜನಿಸಿದವಳು . ರಘುವಂಶದ ದಶರಥ ಮಹಾರಾಜನ ಸೊಸೆಯಾದವಳು . ಇಂತಹ ತಾನು ಈ ದಟ್ಟವಾದ ಅಡವಿಯಲ್ಲಿ ಬಿದ್ದು ದುಃಖಿಸುವಂತಾಯಿತ ? ಅಯ್ಯೋ ವಿಧಿಯೇ ‘ ‘ ಎಂದು ಹಲುಬಿದಳು , ಅವಳ ಶೋಕವನ್ನು ಕಂಡು ಅಲ್ಲಿದ್ದ ಮರಗಳು , ಕಲ್ಲುಗಳೂ ದುಃಖದಿಂದ ಕರಗಿದವೆಂದು ಕವಿ ವರ್ಣಿಸಿದ್ದಾನೆ .

ವಾಲ್ಮೀಕಿ ಸೀತೆಯನ್ನು ಹೇಗೆ ಸಂತೈಸುತ್ತಾನೆ ?

ವಾಲ್ಮೀಕಿ ಮಹರ್ಷಿಯು ತನ್ನ ಶಿಷ್ಯರೊಡಗೂಡಿ ಯೂಪವನ್ನರಸುತ್ತಾ ಅರಣ್ಯಕ್ಕೆ ಬಂದವನು ಗ್ರೀಷ್ಮಋತುವಿನ ಬಿಸಿಲಿನ ಧಗೆಗೆ ಸಿಲುಕಿ ಬಸವಳಿದು ಬಿದ್ದು ರೋದಿಸುತ್ತಿದ್ದ ಸೀತೆಯನ್ನು ಕಾಣುತ್ತಾರೆ . ಅವರು ಸೀತೆಯ ಬಳಿ ಬಂದು “ ದೇವಿ , ಶೋಕಿಸ ಬೇಡ , ನೀನು ಅವಳಿ ಮಕ್ಕಳನ್ನು ಪಡೆಯಲಿರುವೆ .

ನನ್ನನ್ನು ಸಂದೇಹಿಸಬೇಡ , ನಾನು ಜನಕ ಮಹಾರಾಜನಿಗೆ ಪರಿಚಿತನು , ಅನ್ಯನಲ್ಲ . ನೀನು ನಮಾಶ್ರಮಕ್ಕೆ ಬಂದು ಸುಖವಾಗಿರು . ಅಲ್ಲಿ ನಿನ್ನ ಎಲ್ಲಾ ಬಯಕೆಗಳನ್ನೂ ನೆರವೇರಿಸಿ ನೋಡಿಕೊಳ್ಳುತ್ತೇವೆ .

1st PUC Kannada

ನಿನಗಿಷ್ಟ ಬಂದಂತೆ ನೀನು ಇರಬಹುದು . ನಿನ್ನನ್ನು ಕ್ಷೇಮವಾಗಿ ನೋಡಿಕೊಳ್ಳುತ್ತೇವೆ ‘ ಎಂದು ಸಂತೈಸಿ , ಸಮಾಧಾನಪಡಿಸಿ ಸೀತೆಯನ್ನು ತನ್ನ ತಪೋವನಕ್ಕೆ ಕರೆದುಕೊಂಡು ಹೋಗುವರು .


“ ಕರುಣಾಳು ರಾಘವನಲ್ಲಿ ತಪ್ಪಿಲ್ಲ ” ಎಂಬ ಸೀತೆಯ ನಿಲುವನ್ನು ವಿಶ್ಲೇಷಿಸಿ .

ಶ್ರೀರಾಮನು ತನ್ನನ್ನು ಕಾಡಿಗೆ ಅಟ್ಟಿದ ವಿಚಾರವನ್ನು ತಿಳಿದಾಕ್ಷಣ ಸೀತೆಯು ಪರಿಪರಿಯಾಗಿ ದುಃಖಿಸಿದಳು . ರಾಮನ ಮನೋವಲ್ಲಭೆಯಾದ ತನ್ನನ್ನು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಜೊತೆಬಿಡದವನು ,

ಈಗ ಯಾವ ಅಪರಾಧವನ್ನು ಕಂಡು ನನ್ನನ್ನು ಪರಿತ್ಯಜಿಸಿದನೆಂದು ಚಿಂತಿಸಿದಳು . ಕೊನೆಗೆ ಅಪವಾದ ಬಂದಾಗ ಶ್ರೀರಾಮನು ಇಂತಹ ನಿರ್ಧಾರಕ್ಕೆ ಬಂದಿರಬಹುದು .

ಕರುಣಾಳುವಾದ ಶ್ರೀರಾಮನಲ್ಲಿ ತಪ್ಪಿಲ್ಲ . ಹೆಣ್ಣಾಗಿ ಹುಟ್ಟಿದ ತನ್ನ ಪಾಪವೇ ಹೀಗೆ ಕಾಡಿಸುತ್ತಿದೆ . ಯಾವ ಯಾವ ತಪ್ಪುಗಳನ್ನು ಹಿಂದಿನ ಜನ್ಮದಲ್ಲಿ ಮಾಡಿದ್ದೆನೋ ?

ಅದಕ್ಕಾಗೇ ವಿಧಿಯು ಈ ಜನ್ಮದಲ್ಲಿ ನನ್ನನ್ನು ಇಂತಹ ಕಷ್ಟಗಳಿಗೆ ಗುರಿಮಾಡಿದೆ ಎಂದು ಸಂತೈಸಿಕೊಳ್ಳುವಳು . ಇಲ್ಲಿ ಹೆಣ್ಣಾದವಳು ಎಲ್ಲಾ ನೋವನ್ನೂ ನುಂಗಿ ಬದುಕದೆ ವಿಧಿಯಿಲ್ಲ ಎಂಬ ಸಾಮಾಜಿಕ ಅಸಮಾನತೆಯು ಎದ್ದು ಕಾಣುತ್ತಿದೆ .

ಪುರುಷನ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ , ಪಾಲಿಸದೆ ವಿಧಿಯಿಲ್ಲ ಎಂಬ ಧೋರಣೆ ಇಲ್ಲಿ ಗೋಚರಿಸುತ್ತದೆ . ಇನ್ನೊಂದು ದೃಷ್ಟಿಯಿಂದ ನೋಡಿದರೆ ಈ ಮಾತನ್ನು ಸೀತೆಯು ವ್ಯಂಗ್ಯದಿಂದ ಆಡಿರುವಂತೆಯೂ ತೋರುತ್ತದೆ .

‘ ಪುರುಷೋತ್ತಮ’ನೆನಿಸಿದ ರಾಮ ಎಂದಿಗೂ ತಪ್ಪು ಮಾಡುವುದೇ ಇಲ್ಲ , ತಪ್ಪೆಲ್ಲಾ ಹೆಣ್ಣಾಗಿ ಹುಟ್ಟಿದ ತನ್ನದು ಎಂದು ಸೀತೆ ಇಲ್ಲಿ ನೋವು , ದುಃಖ ಮತ್ತು ಹತಾಶೆಗಳಿಂದ ವ್ಯಂಗ್ಯವಾಗಿ ನುಡಿಯುತ್ತಿದ್ದಾಳೆಂದೂ ಪರಿಭಾವಿಸಬಹುದು .

ಭಾಷಾಭ್ಯಾಸ :

ಇವುಗಳನ್ನು ಬಿಡಿಸಿ ಬರೆಯಿರಿ :

ಕಲ್ಮರಂ → ಕಲ್ + ಮರಂ

ಶಿವಾವಾಸ → ಶಿವ + ಆವಾಸ

ಬಿದ್ದಳಂಗನೆ → ಬಿದ್ದಳು + ಅಂಗನೆ

ಜಗಜ್ಜನನಿ – ಜಗತ್ + ಜನನಿ

ಮಹಾಟವಿ → ಮಹಾ + ಅಟವಿ

ನಾವನ್ಯರಲ್ಲ → ನಾವು + ಅನ್ಯರಲ್ಲ .

ಇತರೆ ವಿಷಯಗಳು

ತಲ್ಲಣಿಸದಿರು ಕಂಡ್ಯ ತಾಳು ಮನವೇ

ದೇವನೊಲಿದನ ಕುಲವೇ ಸತ್ಕುಲಂ

ಕನ್ನಡ ವಚನಗಳು

FACEBOOK GROUP JOIN NOW

Leave a Reply

Your email address will not be published. Required fields are marked *