ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು notes | 2nd puc annada innu huttadeyirali nariyarennavolu

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು notes

2nd puc Kannada Innu Huttadeyirali Nariyarennavolu, ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು notes, summary, ಸಾರಾಂಶ , ಹಿನ್ನಲೆ , bhavarth, saramsha

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು notes

ಪಾಂಚಾಲನಂದನೆ ಯಾರು ?

ಪಾಂಚಾಲನಂದನೆ ಎಂದರೆ ‘ ಪಾಂಚಾಲದೇಶದ ಅರಸುಪುತ್ರಿ ‘ ದ್ರೌಪದಿ

ಧರ್ಮರಾಯನಿಗೆ ಎಂಥ ಗರ ಹೊಡೆದಿದೆ ?

ಧರ್ಮರಾಯನಿಗೆ ಧರ್ಮಕ್ಷಮೆಯ ಗರ ಹೊಡೆದಿದೆ .

ಕವಿ ಪರಿಚಯ

ಯುಗಪ್ರವರ್ತಕ ಕವಿಯೆನಿಸಿದ ಕುಮಾರವ್ಯಾಸ ಭಾಗವತ ಭಕ್ತಕವಿಯೂ ಹೌದು .

ಈತನ ಕಾಲ ಕ್ರಿ.ಶ. 1400. ಗದುಗಿನ ಹತ್ತಿರದ ಕೋಳಿವಾಡ ಈತನ ಹುಟ್ಟೂರು .

ನಾರಣಪ್ಪ ಈತನ ನಿಜ ನಾಮಧೇಯ .

ವ್ಯಾಸರ ಮೇಲಿನ ಪ್ರೀತಿ ಗೌರವಾದರಗಳಿಂದಾಗಿ ತನ್ನನ್ನು ಕುವರವ್ಯಾಸ , ಕುಮಾರವ್ಯಾಸ ಎಂಬುದಾಗಿ ಕರೆದು ಕೊಂಡಿದ್ದಾನೆ .

ಸ್ಮಾರ್ಥ ವೈದಿಕ ಬ್ರಾಹ್ಮಣರಾದ ಈತನ ಹಿರಿಯರು ಕೋಳಿವಾಡ ಗ್ರಾಮದ ಶ್ಯಾನುಭೋಗ ವೃತ್ತಿಯಲ್ಲಿದ್ದರು . ಹರಿಭಕ್ತನಾದ ಈತನ ಆರಾಧ್ಯದೈವ ಗದುಗಿನ ವೀರನಾರಾಯಣ .

ಆ ದೈವದ ಸನ್ನಿಧಿಯಲ್ಲಿಯೇ ಕುಳಿತು ಈತ ಕಾವ್ಯ ರಚಿಸಿದನೆಂಬ ಐತಿಹ್ಯವಿದೆ .

ಕುಮಾರವ್ಯಾಸನ ಕೃತಿಯ ಹೆಸರು ‘ ಕರ್ಣಾಟ ಭಾರತ ಕಥಾಮಂಜರಿ ‘ , ಕುಮಾರವ್ಯಾಸ ಭಾರತ , ಗದುಗಿನ ಭಾರತ ಎಂದೆಲ್ಲ ಹೆಸರುವಾಸಿಯಾದ ಈ ಕೃತಿಯು ಪಂಡಿತ – ಪಾಮರರಿಬ್ಬರಿಂದಲೂ ಮೆಚ್ಚುಗೆ ಗಳಿಸಿ ಕನ್ನಡಿಗರ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ .

ವ್ಯಾಸರ ಮೂಲ ಸಂಸ್ಕೃತ ಭಾರತದ 18 ಪರ್ವಗಳಲ್ಲಿ , ಮೊದಲ 10 ಪರ್ವಗಳನ್ನು ಕುಮಾರವ್ಯಾಸನು ಭಾಮಿನಿ ಷಟ್ನದಿಯಲ್ಲಿ ಅನುವಾದಿಸಿದ್ದಾನೆ .

ಮೂಲಕೃತಿಯನ್ನನುಸರಿಸಿದರೂ ಕವಿಯು ತನ್ನ ಕಾವ್ಯದಲ್ಲಿ ಅಪಾರವಾದ ಪ್ರತಿಭಾಶಕ್ತಿಯನ್ನು ಮೆರೆದಿದ್ದಾನೆ . ಕನ್ನಡ ‘ ದೇಸಿ’ಯ ಸೊಗಡು , ಔಚಿತ್ಯಪೂರ್ಣವಾದ ರೂಪಕಗಳು ಕಾವ್ಯಕ್ಕೆ ಅಪೂರ್ವವಾದ ಕಳೆಯನ್ನು ತಂದುಕೊಟ್ಟಿವೆ .

ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದ ‘ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು . ಭಾರತ ಕಣ್ಣಲಿ ಕುಣಿಯುವುದು ‘ ಎಂಬುದಾಗಿ ಕುವೆಂಪು ಅವರು ಮೆಚ್ಚುಗೆ ಸೂಚಿಸಿದ್ದರಲ್ಲಿ ಅತಿಶಯೋಕ್ತಿಯಿಲ್ಲ .

02-03 ವಾಕ್ಯದಲ್ಲಿ ಉತ್ತರಿಸಿ

1) ಮಲಗಿರುವ ಭೀಮನನ್ನು ದ್ರೌಪದಿ ಹೇಗೆ ಎಬ್ಬಿಸಿದಳು ?

ದ್ರೌಪದಿಯು ಮಲಗಿರುವ ಭೀಮನ ಬಳಿ ಬಂದು ವಲ್ಲಭನ ಬದಿಗೆ ಸರಿದಳು . ಮೆಲ್ಲಮೆಲ್ಲನೆ ಮುಸುಕನ್ನು ಸಡಿಲಿಸಿ ಗಲ್ಲವನ್ನು ಹಿಡಿದು ಅಲುಗಿಸಿದಳು . ಅಪ್ರತಿಮ ಮಲ್ಲನು ಮೆಲ್ಲನೆ ಕಣ್ಣಿಟ್ಟು ಎದುರಿಗಿದ್ದ ಪಾಂಚಲನಂದನೆಯನ್ನು ಕಂಡನು .

2 ) ತಾನು ಘೋರತರ ವಿಷ ಕುಡಿಯುವುದಾಗಿ ದ್ರೌಪದಿ ಏಕೆ ಹೇಳುತ್ತಾಳೆ ?

ಕೀಚಕನು ಕಾಮಾಂಧನಾಗಿ ದ್ರೌಪದಿಗೆ ಬಹಳಷ್ಟು ಉಪದ್ರವ ಕೊಡುತ್ತಿದ್ದನು . ದ್ರೌಪದಿಗೆ ಸಹಿಸಲು ಅಸಾಧ್ಯವಾಗುತ್ತಿತ್ತು . ಅವಳನ್ನು ರಕ್ಷಿಸಲು ಐವರು ಗಂಡಂದಿರು ಮೌನ ವಹಿಸಿದ್ದರು . ಆದ್ದರಿಂದ ದ್ರೌಪದಿಯು ತಾನು ಘೋರತರ ವಿಷ ಕುಡಿಯುವುದಾಗಿ ಹೇಳುತ್ತಾಳೆ .

3 ) ಉಳಿದ ನಾಲ್ವರು ಪಾಂಡವರ ಬಗ್ಗೆ ದ್ರೌಪದಿಯ ಅಭಿಪ್ರಾಯವೇನು ?

ಧರ್ಮರಾಯನೆಂದೆ ಎನಿಸಿದ ಯುಧಿಷ್ಠಿರನು ಧರ್ಮಕ್ಷಮೆಯ ಗರ ಬಡಿದವಂತಾಡುವನು . ಪಾರ್ಥನು ಮಮತೆ ತೋರಿದರೂ ಅಣ್ಣನ ಆಜ್ಞೆಯ ಭ್ರಮೆಯಲ್ಲಿರುವನು . ಇನ್ನು ನಕುಲ – ಸಹದೇವರು ಕೀಚಕನನ್ನು ಕೊಲ್ಲಲು ಅಸಮರ್ಥರು . ಈ ನಾಲ್ವರು ಕೀಚಕನಿಂದ ರಕ್ಷಿಸಲಾರರು ಎಂಬುದೇ ದ್ರೌಪದಿಯ ಅಭಿಪ್ರಾಯ .

4 ) ಕುಜನರಾದವರು ಏನೆಂದು ನುಡಿಯುತ್ತಾರೆ ?

ಹೆಣ್ಣಿನ ಅಭಿಮಾನಕ್ಕಾಗಿ ಕುಂತಿಯ ಮಗ ಅಣ್ಣನ ಆಜ್ಞೆಯನ್ನು ಮೀರಿ ಬದುಕಿದನೆಂದು ಕುಜನರು ನುಡಿಯುತ್ತಾರೆ

5) ಕೊಲಲಕ್ಷಮರೆಂದು ದ್ರೌಪದಿ ಯಾರನ್ನು ಕುರಿತು ಹೇಳಿದ್ದಾಳೆ ?

ನಕುಲ – ಸಹದೇವರು ಕೊಲಲಕ್ಷಮರೆಂದು ದ್ರೌಪದಿ ಹೇಳಿದ್ದಾಳೆ .

6 ) ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ ಅಭಿಪ್ರಾಯ ಯಾವುದು ?

ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ ಅಭಿಪ್ರಾಯವೆಂದರೆ ಕಲಹಕ್ಕಾದರೆ ನಾವು , ರಮಿಸಲು ಉಳಿದವರು . ಗಾದೆಯ ಬಳಕೆಯಂತೆ ಕೆಲವರು ಗಳಿಸಿದರೆ ಕೆಲವರು ಉಂಡು ಜಾರುತ್ತಾರೆ ನಾನು ಅಳುಕಿ ನಡೆಯುವವನಲ್ಲ ಎಂಬುದಾಗಿ ಹೇಳಿದನು .

7) ಗಂಡವರು , ಮೂರು ಲೋಕದ ಗಂಡರಾರು ? ಹೆಸರಿಸಿ .

ಗಂಡರೈವರು ಎಂದರೆ – ಯುಧಿಷ್ಠರ , ಭೀಮ , ಪಾರ್ಥ ( ಅರ್ಜುನ ) , ನಕುಲ , ಸಹದೇವ , ಮೂರು ಲೋಕದ ಗಂಡ ಅರ್ಜುನ ಮತ್ತು ಭೀಮ .

8 ) ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಏನು ಮಾಡುತ್ತಾನೆ ?

ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಆಕೆಯ ಮಾನರಕ್ಷಣೆ ಮಾಡುತ್ತಾನೆ . ವೈರಿಯನ್ನು ಕರಿಖಂಡ ಮಾಡುತ್ತಾನೆ . ಅಥವಾ ಆ ಪ್ರಯತ್ನದಲ್ಲಿ ತನ್ನೊಡಲನ್ನು ನೀಡುವನೇ ವಿನಃ ಹೆಂಡತಿಯನ್ನು ಏಕಾಂಗಿಯಾಗಿ ಬಿಡುವುದಿಲ್ಲ .

ಒಂದು ವಾಕ್ಯದಲ್ಲಿ ಉತ್ತರಿಸಿ

1 ) ಪಾಂಚಾಲನಂದನೆ ಯಾರು ?
ಪಾಂಚಾಲನಂದನೆ ಎಂದರೆ ‘ ಪಾಂಚಾಲದೇಶದ ಅರಸುಪುತ್ರಿ ‘ ದ್ರೌಪದಿ

2 ) ಧರ್ಮರಾಯನಿಗೆ ಎಂಥ ಗರ ಹೊಡೆದಿದೆ ?
ಧರ್ಮರಾಯನಿಗೆ ಧರ್ಮಕ್ಷಮೆಯ ಗರ ಹೊಡೆದಿದೆ .

3 ) ಅಣ್ಣನಾಜ್ಞೆಯಲಿ ಭ್ರಮಿತನಾದವನು ಯಾರು ?
ಅಣ್ಣನಾಜ್ಞೆಯಲಿ ಭ್ರಮಿತನಾದವನು ಕಲಿಭೀಮ.

4 ) ದ್ರೌಪದಿ ತನ್ನನ್ನು ತಾನು ಏನೆಂದು ಕರೆದುಕೊಂಡಿದ್ದಾಳೆ ?
ದ್ರೌಪದಿ ತನ್ನನ್ನು ತಾನು ಸೈರೇಂದ್ರಿಯಾಗಿ ಕರೆದುಕೊಂಡಿದ್ದು ಯಾವ ನಾರಿಯು ತನ್ನಂತೆ ಹುಟ್ಟದಿರಲಿ ಎಂದಿದ್ದಾಳೆ .

5) ಕಲಿಭೀಮನು ಎಂತಹ ಗಂಡನೆಂದು ದ್ರೌಪದಿ ಹೇಳಿದ್ದಾಳೆ ?
ಕಲಿಭೀಮನು ಮಿಡುಗುಳ್ಳಗಂಡ ( ಪೌರುಷ ತುಂಬಿದ ಗಂಡ ) ಎಂದು ದ್ರೌಪದಿ ಹೇಳಿದ್ದಾಳೆ .

6 ) ಯಾರನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ ?
ಕೀಚಕನನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ .

7 ) ಯಾರ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ ?
ಕೀಚಕನ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ .

8 ) ಧರ್ಮಜನ ಹೊರಗೆ ಭೀತರಾದವರು ಯಾರು ?
ಧರ್ಮಜನ ಹೊರಗೆ ಭೀತರಾದವರು ಭೀಮ ಹಾಗೂ ಅವನ ಸಹೋದರ ( ಅರ್ಜುನ , ನಕುಲ , ಸಹದೇವ )

9 ) ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ಯಾರು ?
ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ‘ ಕೀಚಕ

10 ) ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದವರಾರು ?
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದು ಹೇಳಿದವರು ದ್ರೌಪದಿ .

11 ) ಗಂಡರೋ ನೀವ್ ಭಂಡರೋ ಎಂದು ಕೇಳಿದವರಾರು ?
ಗಂಡರೋ ನೀವ್ ಭಂಡರೋ ಎಂದು ಕೇಳಿದವರು ದ್ರೌಪದಿ

12 ) ದ್ರೌಪದಿಯ ಮುಂದಲೆಯ ಹಿಡಿದವರಾರು ?
ದ್ರೌಪದಿಯ ಮುಂದಲೆಯನ್ನು ಹಿಡಿದವರು ಕೌರವ .

13 ) ದ್ರೌಪದಿಯ ಮುಖವನ್ನು ಭೀಮ ಯಾವುದರಿಂದ ತೊಳೆದನು ?
ದ್ರೌಪದಿಯ ಮುಖವನ್ನು ಭೀಮನು ಗಿಂಡಿಯ ನೀರಿನಿಂದ ತೊಳೆದನು .

14 ) ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದವರಾರು ?
ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದವನು ಸೈಂಧವ ( ಜಯದ್ರಥ )

15 ) ಮನದೊಳಗೆ ಹಗೆಗಳನ್ನು ಹಿಂಡಿದವರಾರು ?
ಮನದೊಳಗೆ ಹಗೆಗಳನ್ನು ಹಿಂಡಿದವರು ಭೀಮ

2nd puc notes ಇತರೆ ಲಿಂಕ್

ಉರಿಲಿಂಗಪೆದ್ದಿಯ ವಚನಗಳು

ದ್ವಿತೀಯ ಪಿಯುಸಿ ಕನ್ನಡ ನೋಟ್ಸ್

ಬಸವಣ್ಣನವರ ವಚನಗಳು ಕನ್ನಡ ನೋಟ್ಸ್‌

ವೆಬ್ಸೈಟ್ ಲಿಂಕ್

Leave a Reply

Your email address will not be published. Required fields are marked *