Information about the useful Western Ghats for all competing tests

Information about the useful Western Ghats for all competing tests

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಉಪಯುಕ್ತ ವಾದ ಪಶ್ಚಿಮ ಘಟ್ಟದ ಬಗ್ಗೆ ಮಾಹಿತಿ

ಪಶ್ಚಿಮ ಘಟ್ಟಗಳು ಭಾರತದ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ.
ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ.
ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ.
ಮಹಾರಾಷ್ಟ್ರ –
ಗುಜರಾತ್ ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ
ಕನ್ಯಾಕುಮಾರಿಯವರೆಗೆ ಇರುವುದು.
ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ , ಕರ್ನಾಟಕ ,
ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ.
ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ.
ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ.
ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್.
ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ
ಸಸ್ತನಿಗಳು , ೫೦೮ ಪ್ರಭೇದದ ಪಕ್ಷಿಗಳು ಮತ್ತು ೧೭೯ ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ.
ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.

ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸುವ ಮಹತ್ವದ ನಿರ್ಧಾರ

ರಷ್ಯಾದ ಸೆಂಟ್ ಪೀಟರ್ಸ್ ಬಗರ್್ನಲ್ಲಿ ನಡೆದ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ 17 ದೇಶಗಳ ಪ್ರತಿನಿಧಿಗಳು ಅಪರೂಪದ ಜೀವವೈವಿಧ್ಯತೆಗಳ ತಾಣವಾಗಿರುವ ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸುವ ಮಹತ್ವದ ನಿಧರ್ಾರ ತೆಗೆದುಕೊಂಡಿದ್ದಾರೆ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿ ಗುಜರಾತನಲ್ಲಿ ಆರಂಭವಾಗಿ ಮಹಾರಾಷ್ಟ್ರ, ಗೋವ, ಕನರ್ಾಟಕ, ತಮಿಳನಾಡು ಮತ್ತು ಕೇರಳದಲ್ಲಿ ಹಾದು ಹೋಗಿ ಕನ್ಯಾಕುಮಾರಿಯಲ್ಲಿ ಕೊನೆಗೊಂಡಿದೆ. ಸುಮಾರು 1,600 ಕಿ.ಮೀ. ಉದ್ದಕ್ಕೆ ವ್ಯಾಪಿಸಿ ಸುಮಾರು 8,000 ಚದರ ಕಿ.ಮೀ. ಪ್ರದೇಶದಲ್ಲಿ ಹಬ್ಬಿಕೊಂಡಿರುವ ಪಶ್ಚಿಮ ಘಟ್ಟಗಳ ಕಾಡುಗಳು ಹಿಮಾಲಯ ಪರ್ವತ ಶ್ರೇಣಿಗಳ ಕಾಡುಗಳಿಗಿಂತ ಪುರಾತನವಾದವುಗಳಾಗಿವೆ. ಈ ಕಾಡುಗಳು ಮಳೆಯನ್ನು ತರುವ ಕಾಡುಗಳೆಂದೇ ಪ್ರಸಿದ್ಧವಾಗಿವೆ. ಪಶ್ಚಿಮ ಘಟ್ಟಗಳು ಹಲವು ಜೀವನದಿಗಳ ಉಗಮ ಸ್ಥಾನವೂ ಆಗಿದೆ. ಎಲ್ಲಕ್ಕೂ ಮುಖ್ಯವಾಗಿ ವಿನಾಶದ ಅಂಚಿನಲ್ಲಿರುವ ಸುಮಾರು 325 ಜೀವ ಪ್ರಭೇದಗಳು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಕಾಣಸಿಗುತ್ತದೆ. ಶೇ 30 ರಷ್ಟು ಏಷ್ಯಾ ಆನೆಗಳು, ಶೇ17ರಷ್ಟು ಹುಲಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ. 5 ಸಾವಿರ ಹೂ ಬಿಡುವ ಸಸ್ಯಗಳು, 139 ಸಸ್ತನಿಗಳು, 508 ಪಕ್ಷಿ ಪ್ರಭೇದಗಳು, 179 ಉಬಯಚರಿಗಳಿಗೆ ಈ ಘಟ್ಟಗಳು ನೆಲೆಯಾಗಿದೆ. ಇನ್ನೂ ಪತ್ತೆಯಾಗದ ಅನೇಕ ಜೀವ ಪ್ರಬೇಧಗಳು ಈ ಘಟ್ಟಸಾಲಿನ ಕಾಡುಗಳಲ್ಲಿ ವಾಸಿಸುತ್ತವೆ. ಇವೆಲ್ಲವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿ ಇಡುವುದು ನಮ್ಮ ಜವಾಬ್ದಾರಿಯಗಿದೆ. ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಗೆ ಪಶ್ಚಿಮ ಘಟ್ಟಗಳ ಸೇರ್ಪಡೆಯಾಗಿರುವುದರಿಂದ ಇಂತಹ ನಿಸರ್ಗ ಸಿರಿಯ ರಕ್ಷಣೆಗೆ ಹೆಚ್ಚಿನ ನೆರವು ದೊರೆಯಲಿದೆ.
ಕನರ್ಾಟಕದ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ, ಕುದುರೆಮುಖ ಅರಣ್ಯ, ಸೋಮೇಶ್ವರ ಸಂರಕ್ಷಿತ ಅರಣ್ಯ, ಸೋಮೇಶ್ವರ ಅರಣ್ಯ, ಆಗುಂಬೆ ಸಂರಕ್ಷಿತ ಅರಣ್ಯ, ಬಲಹಳ್ಳಿ ಸಂರಕ್ಷಿತ ಅರಣ್ಯ ಸೇರಿದಂತೆ ಒಟ್ಟು ಪಶ್ಚಿಮ ಘಟ್ಟ ವ್ಯಾಪ್ತಿಯ 39 ಪ್ರದೇಶಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನು ಪರಿಸರವಾದಿ ಸಂಘಟನೆಗಳು ಸಹಜವಾಗಿಯೇ ಸ್ವಾಗತಿಸಿವೆ. ಆದರೆ, ವಿಶ್ವ ಪರಂಪರೆಯ ಪಟ್ಟಿಗೆ ಪಶ್ಚಿಮ ಘಟ್ಟಗಳನ್ನು ಸೇರ್ಪಡೆ ಮಾಡುವುದರಿಂದ ಅಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅದರಿಂದ ಅರಣ್ಯವಾಸಿ ಗಿರಿಜನರ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ರಾಜ್ಯ ಬಿಜೆಪಿ ಸಕರ್ಾರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ರಾಜ್ಯ ಸಕರ್ಾರದ ನಡೆಯನ್ನು ಗಮನಿಸಿದರೆ ಅರಣ್ಯವಾಸಿ ಗಿರಿಜನರ ಬಗ್ಗೆ ಕಾಳಜಿಗಿಂತಲೂ ಗಣಿ, ಟಿಂಬರ್, ಎಸ್ಟೇಟ್ ಲಾಬಿಗಳ ಪರವಾದ ಕಾಳಜಿಯೇ ಮುಖ್ಯವಾಗಿರುವಂತೆ ಕಾಣುತ್ತದೆ.
ಆದರೆ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಪ್ರಶ್ನೆಗೆ ಇನ್ನೊಂದು ಆಯಾಮ ಇದ್ದೇ ಇದೆ. ಆ ಅಭೇದ್ಯ ಅರಣ್ಯಗಳಲ್ಲಿ ಆದಿವಾಸಿ ಗಿರಿಜನರು ಸಹ ವಾಸವಾಗಿದ್ದಾರೆ. ಕಾಡಿನಲ್ಲೇ ಹುಟ್ಟಿ ಬೆಳೆದ ಅವರಿಗೆ ಕಾಡಿನಲ್ಲೇ ವಾಸಿಸುವ ಹಕ್ಕಿದೆ. ಅವರ ಭೂಮಿ, ಅವರ ವ್ಯವಸಾಯ, ಅರಣ್ಯ ಉತ್ಪನ್ನಗಳ ಮೇಲೆ ಅವರ ಹಕ್ಕುಗಳಿಗೂ ರಕ್ಷಣೆ ಬೇಕು. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅವರಿಗೆ ಕಾಡಿನಲ್ಲೇ ಕನಿಷ್ಠ ನಾಗರಿಕ ಸೌಲಭ್ಯಗಳನ್ನು ಒದಗಿಸಬೇಕು. ಗಿಡ ಮರ, ಪಶು ಪಕ್ಷಿಗಳ ರಕ್ಷಣೆಯ ಹೆಸರಿನಲ್ಲಿ ಅಲ್ಲಿ ವಾಸವಿರುವ ಮನುಷ್ಯ ಜೀವಿಗಳನ್ನು ಕಡೆಗಣಿಸಬಾರದು. ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸುವುದರಿಂದ ಅಲ್ಲಿನ ಮೂಲ ನಿವಾಸಿಗಳ ಮೇಲೆ ಆಗುವ ಪರಿಣಾಮದ ಕುರಿತು ಅಧ್ಯಯನ ಮುಂದುವರೆಸಬೇಕು.
ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ, ಮತ್ತು ತಲಕಾವೇರಿ ವ್ಯಾಪ್ತಿಯ 652 ಚ.ಕಿ.ಮೀ. ಪ್ರದೇಶವನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತದೆ. ಕೊಡಗಿನಲ್ಲಿ ಈ ಕುರಿತು ಈಗಾಗಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಡಗಿನ ಪ್ರದೇಶಗಳನ್ನು ವಿಶ್ವ ಪರಂಪರೆಗೆ ಸೇರಿಸುವುದರಿಂದ ಕಾಫಿ ಅಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ಬೆಳೆಗಾರರಿಗೆ ತೊಂದರೆಯಾಗಲಿದೆ. ಅದರಲ್ಲಿಯು ಸಣ್ಣ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗುವರು. ಆದರಿಂದ ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆಗೆ ಸೇರಿಸುವುದರ ಸಾಧಕ ಬಾಧಕಗಳ ಬಗ್ಗೆ ವಸ್ತು ನಿಷ್ಠವಾದ ಅಧ್ಯಯನವನ್ನು ಮುಂದುವರೆಸುವುದು ಅತ್ಯಗತ್ಯವಾಗಿದೆ. ಸಂಬಂಧಪಟ್ಟ ಸಮುದಾಯಗಳಲ್ಲಿ ಈ ಕುರಿತು ಇರುವ ಭೀತಿ, ಅನುಮಾನಗಳಿಗೆ ಉತ್ತರ ದೊರೆಯಬೇಕು.

921 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com