Important information in India For All Competitive Exams.

Important information in India For All Competitive Exams.

Important information in India

ರಾಷ್ಟ್ರೀಯ_ಪಂಚಾಂಗ

  • ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ.
  • ಇದನ್ನು ಮಾರ್ಚ 22, 1957 ರಂದು ಅವಡಿಸಿಕ್ಕೊಳಲಾಗಿದೆ.
  •  ಸಾಮಾನ್ಯ ವರ್ಷದ ಮೊದಲ ದಿನಾಂಕ – ಮಾರ್ಚ 21
  • ಅಧಿಕ ವರ್ಷದ ಮೊದಲ ದಿನಾಂಕ – ಮಾರ್ಚ 22
  • ಕ್ರಿ.ಶ 78 ಶಾಲಿವಾನ ಶಕೆ ವರ್ಷವನ್ನು ಕುಶಾನರ ಅರಸ ಕನಿಷ್ಕನು ಅಧಿಕಾರಕ್ಕೆ ಬಂದಿರುವದರ ನೆನಪಿಗಾಗಿ ಜಾರಿಗೆ ತಂದನು.
  • 2015 ರ ವರ್ಷವನ್ನು ಭಾರತೀಯ ಕ್ಯಾಲೆಂಡರನಂತೆ 1937 ನೇ ವರ್ಷ ಎನ್ನಲಾಗುವುದು.
  • ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ ಮೊದಲನೇ ತಿಂಗಳು – ಚೈತ್ರ
  •  ಕೊನೆಯ ತಿಂಗಳು – ಫಾಲ್ಗುಣ
  •  ರಾಷ್ಟ್ರೀಯ ಪಂಚಾಂಗದ ತಿಂಗಳುಗಳು : ಚೈತ್ರ ವೈಶಾಖ ಜೇಷ್ಟ ಆಶಾಢ ಶ್ರಾವಣ ಭಾದ್ರಪದ ಅಶ್ವಿನ್ ಕಾರ್ತಿಕ ಮೃಗಶಿರ ಪುಷ್ಯ ಮಾಘ ಫಾಲ್ಗುಣ

ರಾಷ್ಟ್ರೀಯ_ಹಾಡು

  •  ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು ಭಾರತದ ಸಂವಿಧಾನ ರಚನಾ ಸಭೇಯನ್ನು ಜನೆವರಿ 24 1950 ರಂದು ಅಳವಡಿಸಿಕೊಂಡಿತು.
  • ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ ಚಟ್ಟೋಪಧ್ಯಾಯರು 1882 ರಲ್ಲಿ ರಚಿಸಿದ ‘ಆನಂದಮಠ’ ಕಾದಂಬರಿಯಿಂದ ಆಯ್ದುಕ್ಕೊಳ್ಳಲಾಗಿದೆ.
  •  ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾ ಕಾಂಗ್ರೆಸ್ಸ ಅಧಿವೇಶನದಲ್ಲಿ ಹಾಡಲಾಯಿತು.
  • ಭಾರತಕ್ಕೆ ಸ್ವಾತಂತ್ರ ದೊರೆಯವರೆಗೂ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡಲಾಗುತ್ತಿತ್ತು.
  • ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.

ರಾಷ್ಟ್ರಧ್ವಜ

  • ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2
  • ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ
  • ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ.
  • ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.
  •  ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.
  • ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು.
  •  ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.
  •  ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು.
  • ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು
  •  ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ.
  •  ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.

ರಾಷ್ಟ್ರೀಯ_ಚಿನ್ಹೆ

  • ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ.
  • ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ.
  • ಭಾರತ ಸರ್ಕಾರವು ಇದನ್ನು 26 ಜನೆವರಿ 1950 ರಂದು ಅಳವಡಿಸಿಕೊಂಡಿತು.
  •  ಇದರ ಕೆಳಗೆ ಮಂಡಕೊಪನಿಷತ್ತಿನಿಂದ ಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.
  • ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು.

ರಾಷ್ಟ್ರೀಯ_ಹೂವು

  • ಭಾರತದ ಪುಷ್ಪ – ಕಮಲದ ಹೂವು
  • ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ.
  •  ಕಮಲದ ವೈಜ್ಞಾನಿಕ ಹೆಸರು – ನೀಲುಂಬಾ ನುಸಿಫೇರಾ(Nelumbo nucifera)
  • ಸಸ್ಯ ಸಂಪತ್ತಿನಲ್ಲಿ ಭಾರತ ಜಗತ್ತಿನಲ್ಲಿ 10 ನೇ ಸ್ಥಾನದಲ್ಲಿದೆ.

ರಾಷ್ಟ್ರಗೀತೆ

  • ಭಾರತದ ರಾಷ್ಟ್ರಗೀತೆ ‘ಜನಗಣಮನ”
  •  ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ್
  • ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.
  • ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
  •  ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ.
  • ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.
  •  ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ ಹಾಡುವ ನಿಯಮವಿದೆ.
  • ರವೀಂದ್ರನಾಥ ಟ್ಯಾಗೋರ್ ರವರ ‘ಅಮರ್ ಸೋನಾರ್ ಬಾಂಗ್ಲಾ’ ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ( ಈ ಗೀತೆಯನ್ನು 1905 ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ರಚಿಸಿದ್ದರು)
  • 1905 ರ ಬಂಗಾಳ ವಿಭಜನೆ ವಿರೋಧಿಸಿ ಇವರು ಹಿಂದೂ ಮುಸ್ಲಿಂರಿಗೆ “ರಕ್ಷಾಬಂಧನ” ಆಚರಿಸುವಂತೆ ಕರೆ ನೀಡಿದ್ದರು.

ರಾಷ್ಟ್ರೀಯ_ಕ್ರೀಡೆ

  • ಭಾರತದ ರಾಷ್ಟ್ರೀಯ ಕ್ರೀಡೆ – ಹಾಕಿ
  • ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ. ಭಾರತ ಹಾಕಿ ತಂಡ ಒಟ್ಟು 08 ಸಲ ಓಲಂಪಿಕ್ಸನಲ್ಲಿ ಚಿನ್ನದ ಪದಕ ಗೆದ್ದಿದೆ.
 

  • ಕರ್ನಾಟಕದ ಕೊಡಗು ಜಿಲ್ಲೆಗೆ ಹಾಕಿಯ ತವರೂರು ಎನ್ನುತ್ತಾರೆ.
  • ಭಾರತದ ಹಾಕಿಯ ಮಾಂತ್ರಿಕ – ಧ್ಯಾನಚಂದ್
  • ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಅಗಷ್ಟ್ -29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುವರು.
  • ಕರ್ನಾಟಕದ ರಾಷ್ಟ್ರೀಯ ಕ್ರೀಡೆ ಸಹ ಹಾಕಿ ಆಗಿದೆ.
  • ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ ಹಾಕಿ ಕ್ರೀಡೆಯ ಟ್ರೋಫಿಯಾಗಿದೆ.
  • ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ – 70 ನಿಮಿಷಗಳು.

ರಾಷ್ಟ್ರೀಯ_ಜಲಪ್ರಾಣಿ

  • ಭಾರತ ಸರ್ಕಾರವು ಅಕ್ಟೋಬರ್ 05,2009 ರಂದು ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಪ್ರಾಣಿ ಎಂದು ಘೋಷಿಸಿದೆ.
  • ಡಾಲ್ಫಿನದ ವೈಜ್ಞಾನಿಕ ಹೆಸರು – ಪ್ಲಾಂಟಾನಿಷ್ಟಾ ಗ್ಯಾಂಗ್ಯಾಟಿಕಾ.((Platanista gangetica)

ರಾಷ್ಟ್ರೀಯ ಪಕ್ಷಿ

  • ಭಾರತದ ರಾಷ್ಟ್ರೀಯ ಪಕ್ಷಿ – ನವಿಲು
  • ಭಾರತದ ವನ್ಯಜೀವಿ ರಕ್ಷಣಾ ಕಾಯ್ದೆ – 1972 ರ ಅಡಿಯಲ್ಲಿ ನವಿಲು ಸಂರಕ್ಷಿಸಲಾಗುವುದು.
  • ನವಿಲಿನ ವೈಜ್ಞಾನಿಕ ಹೆಸರು – ಪಾವೋ ಕ್ರಿಸ್ಟಾಟಸ್ (pavo cristatus)
  •  ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ ನವಿಲು ವನ್ಯಧಾಮಗಳಿವೆ.

ರಾಷ್ಟ್ರೀಯ_ಮರ

  • ಭಾರತದ ರಾಷ್ಟ್ರೀಯ ಮರ – ಬನಯಾನ್ ಅಥವಾ ಅರಳಿ ಮರ.
  • ಅರಳಿ ಮರದ ವೈಜ್ಞಾನಿಕ ಹೆಸರು – ಫೈಕಾಸ್ ಬೆಂಗಾಲೆನಿಸ್ (ficus benghalensis)
  • ಅರಳಿ ಮರದ ಬೇರುಗಳು ತಂತುರೂಪಗಳಾಗಿವೆ.
  •  ಗೌತನ ಬುದ್ದನಿಗೆ ಜ್ಞಾನೋದಯವಾದದ್ದು ಬಿಹಾರದ ಗಯಾದ ನಿರಂಜನ ನದಿಯ ದಡದಲ್ಲಿರುವ ಅರಳಿ ಮರದ ಕೆಳಗೆ.
  • ಗೌತಮ ಬುದ್ದನ ಆಧ್ಯಾತ್ಮಿಕ ಗುರು – ಅಲಾರ ಕಮಾ
  •  ಭಾರತದ ಅತ್ಯಂತ ದೊಡ್ಡ ಅರಳಿ ಇರುವುದು – ಕಲ್ಕತ್ತದಲ್ಲಿ.
  • ಪ್ರಪಂಚದ ಅತಿ ದೊಡ್ಡ ವೃಕ್ಷ – ದೈತ್ಯ ಸಿಕೋಯ್ ಮರ.
  • ಮರಗಳ ಆಯುಷ್ಯವನ್ನು ನಿರ್ಧರಿಸುವುದು ಅವುಗಳು ಕಾಂಡದಲ್ಲಿರುವ ಸೆಲ್ಯುಲಸನಿಂದ ಮಾಡಲ್ಪಟ್ಟಿರುವ ವೃತ್ತಗಳ ಸಂಖ್ಯೆಯ ಆಧಾರದ ಮೇಲೆ.

ರಾಷ್ಟ್ರೀಯ_ಹಣ್ಣು

  • ಭಾರತದ ರಾಷ್ಟ್ರೀಯ ಹಣ್ಣು – ಮಾವಿನ ಹಣ್ಣು
  • ಮಾವಿನ ವೈಜ್ಞಾನಿಕ ಹೆಸರು – ಮ್ಯಾಂಜಿಫೇರಾ ಇಂಡಿಕಾ (mangifera indica)
  •  ಮಾವಿ ಹಣ್ಣಿನಲ್ಲಿರುವ ಜೀವಸತ್ವಗಳು – A,C,D
  •  ಭಾರತವು ಮಾವಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ.

ರಾಷ್ಟ್ರೀಯ_ವಂಶಪಾರಂಪರ್ಯ_ಪ್ರಾಣಿ

  •  ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ.
  • ಆನೆಯ ವೈಜ್ಞಾನಿಕ ಹೆಸರು – ಎಲಿಫಾಸ್ ಮ್ಯಾಕ್ಷಿಮಸ್ (elephas maximus)
  • ಭೂವಾಸಿಗಳಲ್ಲಿ ದೊಡ್ಡದಾದ ಪ್ರಾಣಿ – ಆಪ್ರಿಕಾದ ಆನೆ.
  • ಭಾರತದ ಆನೆಗಳ ಯೋಜನೆ ಜಾರಿಗೆ ತಂದ ವರ್ಷ – 1992.
  • ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ – ಕರ್ನಾಟಕ.
  • ಕರ್ನಾಟಕದ ರಾಜ್ಯ ಪ್ರಾಣಿ – ಆನೆ.

ರಾಷ್ಟ್ರೀಯ ಪ್ರಾಣಿ

  • 1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು.
  • ಭಾರತದ ಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು.
  •  ಹುಲಿಯ ವೈಜ್ಞಾನಿಕ ಹೆಸರು – ಪ್ಯಾಂಥೇರಾ ಟ್ರೈಗಿಸ್. (Panthera tigris)
  •  ಭಾರತದ ಮೊದಲ ಹುಲಿ ಅಭಯಾರಣ್ಯ – ಉತ್ತರಖಂಡದ ಕಾರ್ಬೆಟ್
  • ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ – ಕರ್ನಾಟಕ.
  • ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ – ಆಂದ್ರಪ್ರದೇಶದ ನಾಗಾರ್ಜುನ ಸಾಗರ
  •  ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ – ಪಶ್ಚಿಮ ಬಂಗಾಳದ ಸುಂದರಬನ್ಸ್
  • ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ – 1972

ರಾಷ್ಟ್ರೀಯ ಕಟ್ಟಡ

  • ದೆಹಲಿಯಲ್ಲಿರುವ ಇಂಡಿಯಾ ಗೇಟ್ ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ.

ರಾಷ್ಟ್ರೀಯ ದೊರೆ

  •  ಮೌರ್ಯ ವಂಶದ ಚಂದ್ರಗುಪ್ತ ಮೌರ್ಯ.

 

ರಾಷ್ಟ್ರೀಯ ನದಿ

  • ಭಾರತದ ರಾಷ್ಟ್ರೀಯ ನದಿ – ಗಂಗಾನದಿ
  •  ನವೆಂಬರ್ 04, 2008 ರಂದು ಗಂಗಾನದಿಯನ್ನು ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು ಘೋಷಿಸಿದರು.
  • ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ ಉದ್ದವಾಗಿದೆ(2510 km)
  • ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ ಪಾಟ್ನಾದಲ್ಲಿ.

 

734 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com